Neo Train : ನಗರದ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಪರಿಹಾರ : ಸದ್ಯದಲ್ಲೇ ಬರಲಿದೆ ನಿಯೋ ಟ್ರೇನ್

ಬೆಂಗಳೂರು : ಈಗಾಗಲೇ‌ ನಗರದಲ್ಲಿ ಓಡಾಡ್ತಿರೋ ನಮ್ಮ ಮೆಟ್ರೋ ಸಿಲಿಕಾನ್‌ ಸಿಟಿ ಜನರ ಟ್ರಾಫಿಕ್ ಸಮಸ್ಯೆಗೆಯನ್ನು ಬಹುಪಾಲು ಕಡಿಮೆ ಮಾಡಿದೆ. ಈಗ ಮತ್ತೆ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಬೆಂಗಳೂರು ನಗರದಲ್ಲಿ ನಿಯೋ ರೈಲು(Neo Train) ಓಡಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಯೋ ರೈಲು ಓಡಾಟಕ್ಕೆ ಈಗಾಗ್ಲೇ ಬ್ಲೂಪ್ರಿಂಟ್ ರೆಡಿ ಆಗಿದ್ದು, ಈ ನಿಯೋ ರೈಲು ರಸ್ತೆ ಮಧ್ಯೆಯೇ ಓಡಾಡಲಿದೆ.

ಅಲ್ಲದೇ ರಸ್ತೆಯಲ್ಲೇ ನಿಯೋ ರೈಲಿಗೆ ಕಾರಿಡಾರ್ ಕೂಡ ನಿರ್ಮಾಣವಾಗಲಿದೆ. ಏಕಕಾಲಕ್ಕೆ ಸುಮಾರು 250 ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿದ್ದು, ಮೆಟ್ರೋದಂತೆ ಫ್ಲೈಓವರ್, ಸುರಂಗ ಮಾರ್ಗ, ಪ್ರತ್ಯೇಕ ಹಳಿ ವ್ಯವಸ್ಥೆ ಬೇಕಿಲ್ಲ ಎಂಬುದು ಈ ಟ್ರೇನ್ ನ ಪ್ಲಸ್ ಪಾಯಿಂಟ್. ನಿಯೋ ಸಂಪೂರ್ಣ ವಿದ್ಯುತ್ ಸಂಪರ್ಕದಿಂದ ಸಂಚರಿಸಲಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ 5 ಕಿಮೀ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಂಚರಿಸಲಿದೆ. ‌ಪ್ರತಿ 500 ಮೀಟರ್​ಗೆ ಒಂದು ನಿಲ್ದಾಣವಾಗಲಿದ್ದು ಯೋಜನೆಯ ಅಂದಾಜು ವೆಚ್ಚ 1 ಕಿ.ಮೀ ಕಾಮಗಾರಿಗೆ ಸುಮಾರು 120 ಕೋಟಿ.

ಬೆಂಗಳೂರು ನಗರದಲ್ಲಿ ಹೆಚ್ಚು ಟ್ರಾಫಿಕ್ ಹಾಗೂ ಐಟಿ ಉದ್ಯೋಗಿಗಳು ಇರುವ ಏರಿಯಾಗಳನ್ನು ಗುರುತಿಸಿ, ಮೆಟ್ರೋ ನಿಯೋ ರೈಲು ಆರಂಭ ಮಾಡಲು ನೀಲನಕ್ಷೆ ರೆಡಿಯಾಗಿದೆ ಎನ್ನಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಅಲ್ಲದೇ ಈ ಯೋಜನೆಗಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವಂತಹ ಕಂಪನಿಗಳು ಹಣ ಹೂಡಿಕೆ ಮಾಡುತ್ತಿದ್ದು, ಹಣ ಹೂಡಿಕೆ ಮಾಡುತ್ತಿರುವ ಕಂಪನಿಗಳ ಎಂಪ್ಲಾಯಿಸ್ ಗೆ ಉಚಿತ ಪ್ರಯಾಣ ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯ ನೀಲಿ ನಕ್ಷೆ ಬಹುತೇಕ ಅಂತಿಮಗೊಂಡಿದ್ದು, ಕೆಲ ವರ್ಷದಲ್ಲೆ ಮೆಟ್ರೋ‌ ಜೊತೆಗೆ ನಿಯೋ ಟ್ರೇನ್ ಕೂಡ ಟ್ರಾಫಿಕ್ ಭಾರ ಇಳಿಸೋದು ಖಚಿತ ಎನ್ನಲಾಗಿದೆ.

ಈಗಾಗಲೇ ಹಲವು ಮಹಾನಗರದಲ್ಲಿ ನಿಯೋ ಟ್ರೇನ್ ರಸ್ತೆಗಿಳಿದಿದೆ. ಎಲ್ಲ ಅಂದುಕೊಂಡಂತೆ ಆದರೇ, ರಾಜಧಾನಿ ಬೆಂಗಳೂರಿಗೆ ಈ ಹೊಸ ನಿಯೋ ರೈಲು ಎಂಟ್ರಿ ಕೊಡೋದಂತು ಫಿಕ್ಸ್.ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳ ಕಾರಣಕ್ಕೆ ಬೆಂಗಳೂರಿನಲ್ಲೇ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಗೆ ಫೆಮಸ್. ಆದರೆ ಈ‌ ನಿಯೋ ಟ್ರೇನ್ ಆರಂಭಗೊಂಡರೇ ಐಟಿ ಬಿಟಿ ಉದ್ಯೋಗಿಗಳು ಕೊಂಚ ನಿರಾಳವಾಗಿ ರಸ್ತೆಗಿಳಿಯಬಹುದು.

ಇದನ್ನೂ ಓದಿ : ACB Raid : ಬೋವಿ ಅಭಿವೃದ್ದಿ ನಿಗಮದ ಮೇಲೆ ಎಸಿಬಿ ದಾಳಿ

ಇದನ್ನೂ ಓದಿ : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

The Neo Train will start in Bangalore soon

Comments are closed.