Firecracker Explosion : ಪಟಾಕಿ ಸ್ಪರ್ಧೆಯ ವೇಳೆ ಅವಘಡ : ಪಟಾಕಿ ಸ್ಪೋಟದಿಂದ 30ಕ್ಕೂ ಅಧಿಕ ಮಂದಿಗೆ ಗಾಯ

ಭುವನೇಶ್ವರ : ಪಟಾಕಿ ಸ್ಪರ್ಧೆಯ ವೇಳೆಯಲ್ಲಿ ಪಟಾಕಿ ಸ್ಪೋಟಗೊಂಡು (Firecracker Explosion) 30ಕ್ಕೂ ಅಧಿಕ ಮಂದಿಗೆ (30 Injured) ಗಾಯಗೊಂಡಿರುವ ಘಟನೆ ಒಡಿಶಾದ ( Odisha) ಕೇಂದ್ರಪಾರಾದಲ್ಲಿ (Kendrapara) ನಡೆದಿದೆ. ಸ್ಪೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಒಡಿಶಾದ ಕೇಂದ್ರಪಾರದ ಸದರ್ ಪಿಎಸ್ ವ್ಯಾಪ್ತಿಯ ಬಲಿಯಾ ಬಜಾರ್‌ನಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ನಡೆಯುತ್ತಿತ್ತು.ಈ ವೇಳೆಯಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳ ರಾಶಿಯ ಮೇಲೆ ಪಟಾಕಿಯ ಕಿಡಿ ಬಿದ್ದು ದೊಡ್ಡಮಟ್ಟದಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಭುವನೇಶ್ವರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಲಿಯಾ ಬಜಾರ್‌ನಲ್ಲಿರುವ ನಿಮಜ್ಜನ ಸ್ಥಳದಲ್ಲಿ ವಿವಿಧ ಪೂಜಾ ಪಂಡಲ್‌ಗಳ ನಡುವೆ ಪಟಾಕಿ ಸಿಡಿಸುವ ಸ್ಪರ್ಧೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಹುತೇಕರು ಸುಟ್ಟ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಜಿ ಪ್ರೇಯಸಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ತುಂಡು ಮಾಡಿದ ದುರುಳ

ಉತ್ತರ ಪ್ರದೇಶ:ದೆಹಲಿಯಲ್ಲಿ ನಡೆದ ಶೃದ್ಧಾ ವಾಲ್ಕರ್ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶದ ಹಲವೆಡೆ ದಿನಕ್ಕೊಂದರಂತೆ ಭೀಕರ ಹತ್ಯೆ ಕೇಸ್ ಗಳು ವರದಿಯಾಗುತ್ತಿವೆ. ಉತ್ತರ ಪ್ರದೇಶದಲ್ಲೂ ಇಂಥದ್ದೇ ಪ್ರಕರಣವೊಂದು ನಡೆದಿದ್ದು, ಮಾಜಿ ಪ್ರೇಯಸಿಯನ್ನೇ ಕೊಂದ ಪ್ರೇಮಿ ಆಕೆಯ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಹಲವೆಡೆ ಎಸೆದಿದ್ದಾನೆ. ಸದ್ಯ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನವೆಂಬರ್ 9ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ನವೆಂಬರ್ 15ರಂದು ಅಜಂಗಢದ ಪಶ್ಚಿಮಿ ಗ್ರಾಮದ ಕೆರೆಯಲ್ಲಿ ಕತ್ತರಿಸಿದ ಸ್ಥಿತಿಯಲ್ಲಿ ಅರೆನಗ್ನ ಯುವತಿಯ ಮೃತದೇಹ ಪತ್ತೆಯಾಗಿದೆ. ಇದರ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಫ್ರಿನ್ಸ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ರುಂಡಭಾಗ ಎಸೆದ ಸ್ಥಳ ಪರಿಶೀಲನೆಗೆ ಆರೋಪಿಯನ್ನು ಕರೆದೊಯ್ದಾಗ ಆತ ಆ ಸ್ಥಳದಲ್ಲಿ ತಾನು ಬಚ್ಚಿಟ್ಟಿದ್ದ ನಾಡ ಬಂದೂಕಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆರೋಪಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : Shraddha letter: ಕೊನೆಗೂ ಹೇಳಿದಂತೆ ಮಾಡಿಯೇ ಬಿಟ್ಟ ಅಫ್ತಾಬ್; 2 ವರ್ಷಗಳ ಹಿಂದೆಯೇ ಪತ್ರದಲ್ಲಿ ಅಫ್ತಾಬ್ ಕ್ರೂರತೆಯನ್ನು ಬಿಚ್ಚಿಟ್ಟಿದ್ದ ಶೃದ್ಧಾ

ಇದನ್ನೂ ಓದಿ : ಧರ್ಮಸ್ಥಳ ಬಳಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, 7 ಮಂದಿ ಗಂಭೀರ

30 Injured In Firecracker Explosion In Odisha Kendrapara

Comments are closed.