Acid attack on cows : ಹಳೆಯ ದ್ವೇಷಕ್ಕೆ ಹಸುಗಳ ಮೇಲೆ ಆ್ಯಸಿಡ್​ ದಾಳಿ ನಡೆಸಿದ ದುಷ್ಕರ್ಮಿ

ತಮಿಳುನಾಡು : Acid attack on cows: ಹಳೆಯ ದ್ವೇಷಕ್ಕಾಗಿ ಹಲ್ಲೆಗಳು ಹಾಗೂ ಕೊಲೆಗಳು ನಡೆಯೋದನ್ನು ನೀವು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅನೇಕ ಘಟನೆಗಳು ಈಗಾಗಲೇ ನಡೆದಿವೆ . ಆದರೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಮಾನವೀಯತೆ ಮರೆತ ದುಷ್ಕರ್ಮಿಯೊಬ್ಬ ಹಳೆಯ ದ್ವೇಷಕ್ಕಾಗಿ ಮಾಡಬಾರದ ಕೆಲಸ ಮಾಡಿ ಜನರಿಂದ ಹಿಡಿ ಶಾಪವನ್ನು ಹಾಕಿಸಿಕೊಂಡಿದ್ದಾನೆ. ವೈಯಕ್ತಿಕ ದ್ವೇಷಕ್ಕಾಗಿ ಈತ ಗೋವುಗಳ ಮೇಲೆ ಆ್ಯಸಿಡ್​ ಎರಚಿದ್ದಾನೆ.

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದ ಅಯೋಗ್ಯನೊಬ್ಬ ಗೋವುಗಳ ಮೇಲೆ ಆ್ಯಸಿಡ್​ ಎರಚಿದ್ದಾನೆ. ತೋಟದಲ್ಲಿ ಕಟ್ಟಲಾಗಿದ್ದ ಹಸು ಹಾಗೂ ಎಮ್ಮೆಗಳಿಗೆ ಆ್ಯಸಿಡ್​ ಎರೆಚಿ ವಿಕೃತಿ ಮೆರೆದಿದ್ದಾನೆ. ರಾಜಕುಮಾರ್ ಎಂಬವರಿಗೆ ಸೇರಿದೆ ಎಮ್ಮೆ ಹಾಗೂ ಹಸುಗಳು ಆ್ಯಸಿಡ್​ ದಾಳಿಗೆ ಒಳಗಾಗಿವೆ. ಈ ಘಟನೆಯಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ರಾಸುಗಳು ಆ್ಯಸಿಡ್​ ದಾಳಿಗೆ ಒಳಗಾಗಿವೆ.

ಹಸುಗಳ ಬೆನ್ನು, ತಲೆ , ಕಾಲು ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ರೈತ ರಾಜಕುಮಾರ್​ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಈ ಹಸುಗಳು ಆ್ಯಸಿಡ್​ ದಾಳಿಗೆ ಒಳಗಾಗಿರುವುದರಿಂದ ರಾಜಕುಮಾರ್​ಗೆ ದಿಕ್ಕೇ ತೋಚದಂತಾಗಿದೆ. ಆಸಿಡ್​ ದಾಳಿಗೆ ಒಳಗಾದ ಜಾನುವಾರುಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮಾನುಷ ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಮೆಟ್ಟುಪಾಳ್ಯಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

ಇದನ್ನೂ ಓದಿ : Naleen Kumar Kateel : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ನಳೀನ್​ ಕುಮಾರ್​ ವಿರುದ್ಧ ಶುರುವಾಯ್ತು ಅಭಿಯಾನ

ಇದನ್ನೂ ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

ಇದನ್ನೂ ಓದಿ : Tomato Flu 100 cases : ಟೊಮ್ಯಾಟೊ ಜ್ವರ ಭೀತಿ: ಭಾರತದಲ್ಲಿ 9 ವರ್ಷದೊಳಗಿನ ಮಕ್ಕಳಲ್ಲಿ 100 ಪ್ರಕರಣ

Acid attack on cows: Incident in Tamil Nadu

Comments are closed.