Amarnath Yatra : ಅಮರನಾಥ ಯಾತ್ರೆ ಆಗಸ್ಟ್ 23 ರಿಂದ ತಾತ್ಕಾಲಿಕ ಸ್ಥಗಿತ

ನವದೆಹಲಿ : ಯಾತ್ರಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಹಳಿಗಳ ಬದಲಾವಣೆ ಮತ್ತು ದುರಸ್ಥಿ ಕಾರ್ಯಗಳನ್ನು ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ 62 ದಿನಗಳ ಅಮರನಾಥ ಯಾತ್ರೆಯನ್ನು (Amarnath Yatra) ಆಗಸ್ಟ್ 23 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಹೊಸದಿಲ್ಲಿ: ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಹಳಿಗಳ ಪುನಶ್ಚೇತನ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಆಗಸ್ಟ್ 23ರಿಂದ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ ಎಂದು ಜಮ್ಮು ಕಾಶ್ಮೀರ ಸರಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್) ಪ್ರಕಟಣೆ ಹೊರಡಿಸಿದೆ.

ಅಮರನಾಥ ಯಾತ್ರೆ ಈ ಬಾರಿ ಸುಮಾರು 62 ದಿನಗಳ ಕಾಲ ನಡೆಯಲಿದೆ. ಯಾತ್ರಿಗಳ ಅನುಕೂಲಕ್ಕಾಗಿ ಯಾತ್ರೆಯನ್ನು ಆಗಸ್ಟ್ 23 ರಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗುತ್ತದೆ. ಆದರೆ ಸಂಪೂರ್ಣ ಅಮರನಾಥ ಯಾತ್ರೆಯು 31 ಆಗಸ್ಟ್ 2023 ರಂದು ಚಾಡಿ ಮುಬಾರಕ್ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಸಾಂಪ್ರದಾಯಿಕ ಪಹಲ್ಗಾಮ್‌ ಮಾರ್ಗದ ಮೂಲಕ ಚಾಡಿ ಮುಬಾರಕ್‌ ಕಾರ್ಯಕ್ರಮ ನಡೆಯಲಿದೆ ಎಂದು ಡಿಐಪಿಆರ್ ಹೇಳಿದೆ.

ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದಾರೆ. ಅಲ್ಲದೇ ಅಗಾಧ ಸಂಖ್ಯೆಯಲ್ಲಿ ಈ ಬಾರಿ ಕಾಲ್ತುತಳಿ ಸಂಭವಿಸಿತ್ತು. ಇದುವರೆಗೆ ಒಟ್ಟು 4.4 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಪವಿತ್ರ ಅಮರನಾಥ ದೇಗುಲದಲ್ಲಿ ದರ್ಶನ ಪಡೆದಿದ್ದಾರೆ. ಆದರೆ ಇದೀಗ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಅಲ್ಲದೇ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಯತ್ರಾ ಹಳಿಗಳ ತುರ್ತಾಗಿ ದುರಸ್ತಿ ಮತ್ತು ನಿರ್ವಹಣೆಯನ್ನು ಕೈಗೊಂಡಿರುವುದರಿಂದ ಪವಿತ್ರ ಸ್ಥಳಕ್ಕೆ ಹೋಗುವ ಎರಡೂ ಹಳಿಗಳಲ್ಲಿ ಯಾತ್ರಾರ್ಥಿಗಳ ಸಂಚಾರವನ್ನು ದೇಗುಲ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ : Crime News : ರೈಲಿನಲ್ಲಿ ವಿಷ ಬೆರೆಸಿದ ಸಿಹಿತಿಂಡಿ ಸೇವಿಸಿ ಇಬ್ಬರ ಸಾವು, ಆರು ಮಂದಿ ಅಸ್ವಸ್ಥ

ಈ ಬಾರಿ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗದ ಮೂಲಕ ಅಮರನಾಥ ಯಾತ್ರೆಯು ಆರಂಭಗೊಂಡಿತ್ತು. ಇದೀಗ ಭಕ್ತರ ಸುರಕ್ಷತೆಯ ಜೊತೆಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಲುವಾಗಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ಅಮರನಾಥ ಯಾತ್ರೆಯು ಮತ್ತೆ ಯಾವಾಗ ಆರಂಭವಾಗಲಿದೆ ಅನ್ನೋ ಕುರಿತು ಮಾಹಿತಿ ಲಭ್ಯವಾಗಿಲ್ಲ.

Amarnath Yatra : Amarnath Yatra is temporarily suspended from August 23

Comments are closed.