ನಮ್ಮ ಮೆಟ್ರೋದಲ್ಲಿ ಉದ್ಯೋಗ ಅವಕಾಶ : ಮಾಸಿಕ 1.65 ಲಕ್ಷ ರೂ.‌ವೇತನ ಕೂಡಲೇ ಅರ್ಜಿ ಸಲ್ಲಿಸಿ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವಿವಿಧ ಹುದ್ದೆಗಳ (BMRCL Recruitment 2023) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅಡಿಯಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL)ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

  • ಜನರಲ್ ಮ್ಯಾನೇಜರ್ (F&A) : 1 ಹುದ್ದೆ
  • ಹೆಚ್ಚುವರಿ ಜನರಲ್ ಮ್ಯಾನೇಜರ್ (F&A) : 2 ಹುದ್ದೆಗಳು
  • ಡೆಪ್ಯುಟಿ ಜನರಲ್ ಮ್ಯಾನೇಜರ್ (F&A): 1 ಹುದ್ದೆ
  • ಸಹಾಯಕ ಜನರಲ್ ಮ್ಯಾನೇಜರ್ (F&A) : 3 ಹುದ್ದೆಗಳು
  • ಮ್ಯಾನೇಜರ್ (F&A) : 2 ಹುದ್ದೆಗಳು
  • ಅಸಿಸ್ಟೆಂಟ್ ಮ್ಯಾನೇಜರ್ (F&A) : 5 ಹುದ್ದೆಗಳು
  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಗುತ್ತಿಗೆ) : 1 ಹುದ್ದೆ
  • ಮ್ಯಾನೇಜರ್ (ಗುತ್ತಿಗೆ) : 1 ಹುದ್ದೆ
  • ಅಸಿಸ್ಟೆಂಟ್ ಮ್ಯಾನೇಜರ್ (ಗುತ್ತಿಗೆ) : 1 ಹುದ್ದೆ

ಹುದ್ದೆವಾರು ವಿದ್ಯಾರ್ಹತೆಯ ವಿವರ :

  • ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮತ್ತು ಪದವೀಧರರಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
  • ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗಾಗಿ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿಟೆಕ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆವಾರು ವಯೋಮಿತಿ ವಿವರ :

  • ಜನರಲ್ ಮ್ಯಾನೇಜರ್ (F&A) : ಗರಿಷ್ಠ 55 ವರ್ಷ ಮೀರಿರಬಾರದು.
  • ಹೆಚ್ಚುವರಿ ಜನರಲ್ ಮ್ಯಾನೇಜರ್(F&A) :ಗರಿಷ್ಠ 50 ವರ್ಷ ಮೀರಿರಬಾರದು.
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A) : ಗರಿಷ್ಠ 45 ವರ್ಷ ಮೀರಿರಬಾರದು.
  • ಸಹಾಯಕ ಜನರಲ್ ಮ್ಯಾನೇಜರ್(F&A) : ಗರಿಷ್ಠ 40 ವರ್ಷ ಮೀರಿರಬಾರದು.
  • ಮ್ಯಾನೇಜರ್(F&A) : ಗರಿಷ್ಠ 40 ವರ್ಷ ದಾಟಿರಬಾರದು.
  • ಸಹಾಯಕ ವ್ಯವಸ್ಥಾಪಕರು(F&A) : ಗರಿಷ್ಠ 35 ವರ್ಷ ದಾಟಿರಬಾರದು.
  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಗುತ್ತಿಗೆ) : ಗರಿಷ್ಠ 45 ವರ್ಷ ಮೀರಿರಬಾರದು.
  • ಮ್ಯಾನೇಜರ್ (ಗುತ್ತಿಗೆ) : ಗರಿಷ್ಠ 40 ವರ್ಷ ದಾಟಿರಬಾರದು.
  • ಸಹಾಯಕ ವ್ಯವಸ್ಥಾಪಕರು (ಗುತ್ತಿಗೆ) : ಗರಿಷ್ಠ 35 ವರ್ಷ ಮೀರಿರಬಾರದು.


ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯ ಮೂಲಕ ಅಭ್ಯರ್ಥಿಗಳು ಪಡೆಯಬಹುದು.

ಹುದ್ದೆವಾರು ಮಾಸಿಕ ವೇತನದ ವಿವರ :

  • ಜನರಲ್ ಮ್ಯಾನೇಜರ್ (F&A) : 1,65,000 ರೂ.
  • ಹೆಚ್ಚುವರಿ ಜನರಲ್ ಮ್ಯಾನೇಜರ್ (F&A) :1,50,000 ರೂ.
  • ಡೆಪ್ಯುಟಿ ಜನರಲ್ ಮ್ಯಾನೇಜರ್ (F&A) : 1,40,000 ರೂ.
  • ಸಹಾಯಕ ಜನರಲ್ ಮ್ಯಾನೇಜರ್ (F&A) : 85,000 ರೂ.
  • ಮ್ಯಾನೇಜರ್ (F&A) : 75,000 ರೂ.
  • ಸಹಾಯಕ ವ್ಯವಸ್ಥಾಪಕರು (F&A) : 50,000 ರೂ.
  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಗುತ್ತಿಗೆ) : 1,40,000 ರೂ.
  • ಮ್ಯಾನೇಜರ್ (ಗುತ್ತಿಗೆ) :75,000 ರೂ.
  • ಸಹಾಯಕ ವ್ಯವಸ್ಥಾಪಕರು (ಗುತ್ತಿಗೆ) : 50,000 ರೂ.

ಪ್ರಮುಖ ದಿನಾಂಕದ ವಿವರ :
ಈ ಹುದ್ದೆಗಳಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 7, 2023 ಮೊದಲು ಅರ್ಜಿ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ : Post Office Recruitment 2023 : ಅಂಚೆ ಇಲಾಖೆ ನೇಮಕಾತಿ : 98083 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Karnataka Bank Recruitment 2023: ಕರ್ನಾಟಕ ಬ್ಯಾಂಕ್‌ ನೇಮಕಾತಿ, ವೇತನ : 84000 ರೂ.

ಇದನ್ನೂ ಓದಿ : ADA Recruitment 2023 : ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನೇಮಕಾತಿ: ವೇತನ 81100 ರೂ

ಅರ್ಜಿ ಸಲ್ಲಿಸುವ ವಿಧಾನ :
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL)ನಲ್ಲಿ ಖಾಲಿ ಇರುವ ಹುದ್ದೆಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಅರ್ಜಿ ಸಲ್ಲಿಸಲು ಯಾವುದೇ ತೊಂದರೆಗಳಿದ್ದರೆ, ಇ-ಮೇಲ್ ಐಡಿ [email protected] ಮೂಲಕ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಕೂಡ ಅರ್ಜಿಗಳನ್ನು ಕಳುಹಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಫಾರ್ಮ್‌ ಹಾಗೂ ಅಗತ್ಯ ದಾಖಲೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ)ಗಳೊಂದಿಗೆ ಫೆಬ್ರವರಿ 7, 2023 ಮೊದಲು ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು- 560027 ಕಳುಹಿಸಬೇಕಾಗಿದೆ.

BMRCL Recruitment 2023 : Job opportunity in our Metro : Salary 1.65 Lakhs per month apply immediately

Comments are closed.