Amaranthus: ಹರಿವೆ ಸೊಪ್ಪಿನಲ್ಲೂ ಇದೆ ಔಷದೀಯ ಗುಣಗಳು

(Amaranthus) ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗೂ ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ. ಇದರ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂತಲೂ ಕರೆಯುತ್ತಾರೆ. ಇದನ್ನ ಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರುಕಟ್ಟೆಗಳಲ್ಲೂ ಲಭ್ಯವಿದೆ. ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು.

ಈ ಸೊಪ್ಪು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಸೊಪ್ಪು ಹೆಚ್ಚಿನ ನಾರಿನಂಶವನ್ನು ಹೊಂದಿದ್ದು, ಪ್ರೊಟೀನ್, ವಿಟಮಿನ್ಸ್‌, ಕ್ಯಾಲ್ಸಿಯಂ, ಐರನ್, ಮೆಗ್ನೇಷಿಯಂ ಇನ್ನು ಅನೇಕ ಪೋಷಕಾಂಶಗಳನ್ನು ಹೊಂದಿದೆ ಮತ್ತು ಹರಿವೆ ಸೊಪ್ಪು ದೇಹಕ್ಕೆ ತಂಪನ್ನು ಸಹ ನೀಡುತ್ತದೆ. ಇದರ ವೈಜ್ಞಾನಿಕ ಹೆಸರು “Amaranthus”.ಇವಷ್ಟೇ ಅಲ್ಲದೇ ಹರಿವೆ ಸೊಪ್ಪು ಅನೇಕ ಔಷಧ ಗುಣಗಳನ್ನು ಕೂಡ ಹೊಂದಿದೆ.

ಹರಿವೆ ಸೊಪ್ಪಿ(Amaranthus)ನಲ್ಲಿ ಯಾವೆಲ್ಲಾ ಔಷದೀಯ ಗುಣಗಳಿವೆ ಎಂಬುದನ್ನು ತಿಳಿಯೋಣ:

ಹರಿವೆ ಸೊಪ್ಪನ್ನು ನಾವು ನಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ನಮ್ಮ ದೇಹದಲ್ಲಿನ ಜೀರ್ಣಕ್ರಿಯೆಯನ್ನು ಸರಾಗವಾಗುವಂತೆ ಮಾಡುತ್ತದೆ.
ಕೆಲವು ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಅತಿಯಾದ ಋತುಸ್ರಾವ ಉಂಟಾಗುವ ಸಮಸ್ಯೆ ಇರುತ್ತದೆ. ಇದಕ್ಕೆ ಹರಿವೆಸೊಪ್ಪು ದಿವ್ಯ ಔಷಧವಾಗಿದೆ. ದಿನನಿತ್ಯ ನಿಯಮಿತವಾಗಿ ದಂಟಿನ ಸೊಪ್ಪು ಹಾಗು ಅದರ ಎಲೆ ಕಾಂಡಗಳನ್ನು ನಮ್ಮ ಆಹಾರದಲ್ಲಿ ಉಪಯೋಗಿಸುವುದರಿಂದ ಅತಿಯಾದ ಋತುಸ್ರಾವವಾಗುತ್ತಿದ್ದರೆ ಅದು ಕಡಿಮೆಯಾಗುತ್ತದೆ.
ಚಿಕ್ಕ ಮಕ್ಕಳಿಗೆ ಹರಿವೆಸೊಪ್ಪಿನ ರಸ , ನಿಂಬೆರಸ ಮತ್ತು ಜೇನುತುಪ್ಪ ಬೆರಸಿ ಕುಡಿಸುವುದರಿಂದ ಇದು ಮಕ್ಕಳ ಬೆಳೆವಣಿಗೆಗೆ ಸಹಾಯವಾಗುತ್ತದೆ.
ಹರಿವೆ ಸೊಪ್ಪನ್ನು ಬಾಣಂತಿಯರು ತಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ ಎದೆ ಹಾಲಿನ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಜೊತೆಗೆ ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ.
ಹರಿವೆ ಸೊಪ್ಪನ್ನು ನಾವು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಗೆ ಸಹಾಯವಾಗಿ ಮಲಭದ್ದತೆಯನ್ನು ದೂರ ಮಾಡುತ್ತದೆ.
ಕೆಲವು ಹೆಣ್ಣು ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂತವರು ಹರಿವೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಕೂದಲಿಗೆ ದೊರಕುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಬಾಯಿಯಲ್ಲಿ ಹುಣ್ಣು ಆದವರು ಹರಿವೆ ಸೊಪ್ಪನ್ನು ಜಗಿಯುವುದರಿಂದ ಅಥವಾ ಹರಿವೆ ಸೊಪ್ಪಿನಲ್ಲೇ ಇನ್ನಿತರ ಖಾದ್ಯಗಳನ್ನ ತಯಾರಿಸಿಕೊಂಡು ತಿನ್ನುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.ಅಲ್ಲದೆ ವಸಡುಗಳ ಸಮಸ್ಯೆಯು ಇದರಿಂದ ಕಡಿಮೆಯಾಗುತ್ತದೆ.

ಇದನ್ನೂ ಓದಿ : Indigestion Problem Solution:ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : Face Toner:ಮುಖದ ಕಾಂತಿ ಹೆಚ್ಚಿಸುವ ಟೋನರ್‌ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಹರಿವೆ ಸೊಪ್ಪನ್ನ ಉಪಯೋಗಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನ ಕೂಡ ಸಮತೋಲನದಲ್ಲಿಡಬಹುದು.
ಹರಿವೆ ಸೊಪ್ಪನ್ನ ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಸುವಲ್ಲಿಯೂ ಕೂಡ ಸಹಕಾರಿಯಾಗಿದೆ.
ಹರಿವೆ ಸೊಪ್ಪು ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

(Amaranthus) Amaranth is one of the vegetables that we use. Its leaves are green in color and light red in color. It is also called Danti Soppu due to its thick stalk. It is usually grown in rural areas. It is also available in markets. Many types of dishes can be prepared from this green leafy vegetable.

Comments are closed.