IPL Trading : 9 ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್, ಐವರು RCBಯಿಂದ ಔಟ್

ಬೆಂಗಳೂರು : ಐಪಿಎಲ್-2023 ರ (IPL Trading)ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಒಂಬತ್ತು ಮಂದಿ ಆಟಗಾರರನ್ನು ಉಳಿಸಿಕೊಂಡಿದ್ದು, ಐವರು ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ರಾಯಲ್ ಚಾಲೆಂಜರ್ಸ್ ತಂಡದ ನಂಬಲು ಅರ್ಹಾ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದೆ.

ಮುಂದಿನ ವರ್ಷ ನಡೆಯುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಡಿಸೆಂಬರ್ 23ರಂದು ಆಟಗಾರರ ಮಿನಿ ಹರಾಜು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 15ರೊಳಗೆ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ರಿಟೇನ್ ಹಾಗೂ ರಿಲೀಸ್ ಮಾಡಲಾಗಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಟೇನ್ ಹಾಗೂ ರಿಲೀಸ್ ಮಾಡಲಾಗಿರುವ ಆಟಗಾರರ ಪಟ್ಟಿ newsnextಗೆ ಲಭ್ಯವಾಗಿದೆ.

ನಾಯಕ ಫಾಫ್ ಡುಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ದಿನೇಶ್ ಕಾರ್ತಿಕ್, ಯುವ ಬ್ಯಾಟ್ಸ್‌ಮ್ಯಾನ್ ರಜತ್ ಪಾಟಿದಾರ್, ಶ್ರೀಲಂಕಾ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಡಿಸಿಲ್ವಾ, ಭಾರತದ ಯುವ ವೇಗಿ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಮತ್ತು ಶಹಬಾಜ್ ಅಹ್ಮದ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಆಕಾಶ್ ದೀಪ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲೀ ಮತ್ತು ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್’ಡ್ರೊಫ್ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ಈ ಪೈಕಿ ಜೇಸನ್ ಬೆಹ್ರೆನ್’ಡ್ರೊಫ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡಿ ಆಗಿದ್ದಾರೆ.

ರಾಯಲ್ ಚಾಲೆಂಜರ್ಸ್ ತಂಡ ಉಳಿಸಿಕೊಂಡ ಆಟಗಾರರು:
ಫಾಫ್ ಡು’ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ವನಿಂದು ಹಸರಂಗ ಡಿಸಿಲ್ವಾ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್.

ಇದನ್ನೂ ಓದಿ : IPL Trading : ಪ್ರಮುಖ ವೇಗಿಯನ್ನು ಮುಂಬೈ ಇಂಡಿಯನ್ಸ್‌ಗೆ ನೀಡಿದ ರಾಯಲ್ ಚಾಲೆಂಜರ್ಸ್

ಇದನ್ನೂ ಓದಿ : Sachin Tendulkar : ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು : ಒಂದೇ ಪಂದ್ಯದಿಂದ ತಂಡವನ್ನು ನಿರ್ಣಯಿಸಬೇಡಿ : ಸಚಿನ್ ತೆಂಡೂಲ್ಕರ್

ಇದನ್ನೂ ಓದಿ : MS Dhoni With Amit Shah : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ಎಂಎಸ್‌ ಧೋನಿ : ಪೋಟೋ ವೈರಲ್

ರಾಯಲ್ ಚಾಲೆಂಜರ್ಸ್ ತಂಡ ರಿಲೀಸ್ ಮಾಡಿದ ಆಟಗಾರರು:
ಆಕಾಶ್ ದೀಪ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲೀ, ಜೇಸನ್ ಬೆಹ್ರೆನ್’ಡ್ರೊಫ್.

IPL Trading : Royal Challengers retain 9 players, five out from RCB

Comments are closed.