Black Fungus : ಗುಣಮುಖರಾದವರನ್ನು ಮತ್ತೆ ಕಾಡುತ್ತೆ ಕಪ್ಪು ಶಿಲೀಂಧ್ರ ಸೋಂಕು

ಬೆಂಗಳೂರು : ಕೊರೊನಾ ಬೆನ್ನಲ್ಲೇ‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಕುರಿತು ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರ ಬರುತ್ತಿದೆ. ಇದೀಗ ಗುಣಮುಖರಾದವರಲ್ಲೇ ಮತ್ತೆ ಕಪ್ಪು ಶಿಲೀಂಧ್ರ ರೋಗ ರಾಣಿಸಿಕೊಳ್ಳುತ್ತೆ ಅನ್ನೋ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.

ಬೆಂಗಳೂರಲ್ಲಿ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಪಡೆದಿದ್ದ ಹಲವರಲ್ಲಿ ಸೋಂಕು ಮತ್ತೆ ಕಾಣಿಸಿ ಕೊಂಡಿದೆ. ಹೀಗಾಗಿ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ನಿಗಾ‌ ಇರಿಸಬೇಕು. ಅಲ್ಲದೇ ವೈದ್ಯರು ಸೂಚಿಸುವ ಪರೀಕ್ಷೆಗಳಿಗೆ ಕಡ್ಡಾಯ ವಾಗಿ ಒಳಗಾಗಬೇಕು ಎಂದು ಬೌರಿಂಗ್‌ ಆಸ್ಪತ್ರೆಯ ವೈದ್ಯ ಡಾ. ಧನ್‌ಪಾಲ್‌ ತಿಳಿಸಿದ್ದಾರೆ.

ಸಾಮಾನ್ಯವಾಗಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ಸಾಮಾನ್ಯವಾಗಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕು. ಆದರೆ ಸರಕಾರ 14 ದಿನಗಳ ನಂತರ ರೋಗಿಗಳನ್ನು ಡಿಸ್ಚಾರ್ಜ್ ಮಾಡುವಂತೆ ಸೂಚನೆ ನೀಡಿದೆ. ಹೀಗಾಗಿ ರೋಗಿಗಳ ಮೇಲೆ ನಿಗಾ ಇರಿಸಲು ವೈದ್ಯರಿಗೆ ಕಷ್ಟಕರವಾಗುತ್ತಿದೆ.

https://kannada.newsnext.live/eating-chicken-attack-black-fungus-is-it-true/amp/

ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡ ತಕ್ಷಣಕ್ಕೆ ವೈದ್ಯರ ಸಲಹೆ ಯನ್ನು ಕಡ್ಡಾಯವಾಗಿ ಪಾಲನೆ‌ ಮಾಡಬೇಕು. ಮಾರಣಾಂತಿಕ ಎನಿಸಿದ್ದರೂ ಕೂಡ ಬ್ಲ್ಯಾಕ್ ಫಂಗಸ್ ವೈರಸ್ ನ್ನು ವೈದ್ಯರ ತಪಾಸಣೆ ಯ ಮೂಲಕ ಗುಣಪಡಿಸಿಕೊಳ್ಳಬಹುದು. ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡ್ರೆ ಭಯ ಬಿಟ್ಟು ಚಿಕಿತ್ಸೆ ಪಡೆಯಿರಿ.

Comments are closed.