ಅನಧಿಕೃತ ಲಸಿಕೆ ಪ್ರಯೋಗಿಸಿ ಬುಡಕಟ್ಟು ಹೆಣ್ಣುಮಕ್ಕಳ ಹತ್ಯೆ ಆರೋಪ…! ಬಿಲ್ ಗೇಟ್ಸ್ ಬಂಧನಕ್ಕೆ ಒತ್ತಾಯ…!!

ಇತ್ತೀಚಿಗಷ್ಟೇ ವಿವಾಹ ವಿಚ್ಛೇಧನದ ಮೂಲಕ ಸುದ್ದಿಯಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ  ಬಂಧನಕ್ಕೆ ಒತ್ತಡ ವ್ಯಕ್ತವಾಗುತ್ತಿದೆ. ಭಾರತದ ಆದಿವಾಸಿ ಸಮುದಾಯದ ಹೆಣ್ಣುಮಕ್ಕಳ ಮೇಲೆ ಅನಧಿಕೃತ ವೈದ್ಯಕೀಯ ಪ್ರಯೋಗದ ಆರೋಪದಡಿ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿದೆ.

https://kannada.newsnext.live/sandalwood-actor-praneetha-subhas-marriage/

ಸೋಷಿಯಲ್ ಮೀಡಿಯಾದಲ್ಲಿ ಅರೆಸ್ಟ್ ಬಿಲ್ ಗೇಟ್ಸ್  ಹ್ಯಾಷ್ ಟ್ಯಾಗ್(#arrestbillgates) ಟ್ರೆಂಡಿಂಗ್ ನಲ್ಲಿದ್ದು, ಬಿಲ್ ಗೇಟ್ಸ್ ಬಂಡವಾಳ ಹೂಡಿಕೆಯ ಎನ್ಜಿಓ ಸಂಸ್ಥೆಯೊಂದು ವೈದ್ಯಕೀಯ ಪ್ರಯೋಗವೊಂದಕ್ಕೆ ಭಾರತದ ಆದಿವಾಸಿ ಹೆಣ್ಣುಮಕ್ಕಳನ್ನು ಬಳಸಿಕೊಂಡಿದೆ ಎನ್ನಲಾಗಿದೆ.

https://kannada.newsnext.live/hollywood-tarzan-joelara-wife-died-plane-carsh-us-seven-passengers/

ಗ್ರೇಟ್ ಗೇಮ್ ಇಂಡಿಯಾ ಹೆಸರಿನ ಜರ್ನಲ್ ಈ ಕುರಿತು ವರದಿ ಪ್ರಕಟಿಸಿದ್ದು, ಬಿಲ್ ಗೇಟ್ಸ್ ಹಣ ಹೂಡಿಕೆ ಮಾಡಿರುವ ಸಿಯಾಟಲ್  ಮೂಲದ ಬಿಲ್ ಆಂಡ್ ಮೆಲಿಂದಾ ಗೆಸ್ಟ್ ಫೌಂಡೇಶನ್ ಲಸಿಕೆ ಪ್ರಯೋಗ ನಡೆಸಿತ್ತು.

https://kannada.newsnext.live/asian-boxing-champianship-mericom/

ತೆಲಂಗಾಣದ ಖಮ್ಮಮ್ ಎಂಬ ಹಳ್ಳಿಯ ಬುಡಕಟ್ಟು ಜನಾಂಗದ 14 ಸಾವಿರ ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್  ಲಸಿಕೆಯನ್ನು ಅನಧಿಕೃತವಾಗಿ ನೀಡಿತ್ತು ಎನ್ನಲಾಗಿದೆ. ಇದಕ್ಕಾಗಿ ಬಾಲಕಿಯರ ಪೋಷಕರಿಂದಲೂ ಅನುಮತಿ ಪಡೆದರಿರಲಿಲ್ಲ.

ಈ ಲಸಿಕೆ ಪಡೆದ ಹಲವರು ಅನಾರೋಗ್ಯಕ್ಕಾಗಿದ್ದರೇ, ಇನ್ನು ಹಲವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೇಟ್ ಗೇಮ್ ಇಂಡಿಯಾ ಒಂದು ವಿಸ್ಕೃತ ವರದಿ ಪ್ರಕಟಿಸಿತ್ತು. ಮೇ 25 ರಂದು ಬಿಡುಗಡೆಯಾದ ಈ ಬರಹದಲ್ಲಿ ಬಿಲ್ ಗೇಟ್ಸ್ ಹಣಕಾಸಿನ ನೆರವು ಹೊಂದಿದ್ದ ಪಾಥ್ ಎನ್ಜಿಓ ಹೇಗೆ ಬುಡಕಟ್ಟು ಹೆಣ್ಣುಮಕ್ಕಳ ಹತ್ಯೆ ಮಾಡಿತು ಎಂಬುದನ್ನು ವಿವರಿಸಿತ್ತು.

ಈ ವರದಿ ಹಿನ್ನೆಲೆಯಲ್ಲಿ ಭಾರತದಲ್ಲಿ ಬಿಲ್ ಗೇಟ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಂಧಿಸಬೇಕೆಂಬ ಒತ್ತಡ ಕೇಳಿಬಂದಿದೆ.#arrestbillgates

Comments are closed.