ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಪ್ರಣಿತಾ

ಬೆಂಗಳೂರು : ಸ್ಯಾಂಡಲ್‍ವುಡ್ ಖ್ಯಾತ ನಟಿ ಪ್ರಣಿತಾ ಸುಭಾಷ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪ್ರಣಿತಾ ಉದ್ಯಮಿ ನಿತಿನ್ ರಾಜ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ಮದುವೆಯನ್ನು ಸರಳವಾಗಿ ನಡೆಸಲ ಗಿದೆ. ಕೇವಲ ಕುಟುಂಬ ಸದಸ್ಯರಿಗೆ ಮಾತ್ರವೇ ಮದುವೆಗೆ ಆಹ್ವಾನ ನೀಡಲಾಗಿತ್ತು ಎನ್ನಲಾಗುತ್ತಿದೆ‌. ಆದರೆ ನಟಿ ಪ್ರಣಿತಾ ತಮ್ಮ ವಿವಾಹದ‌ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ‌.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಣಿತಾ ಹಾಗೂ ನಿತಿನ್ ರಾಜ್ ಅವರ ವಿವಾಹದ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಅಭಿಮಾನಿಗಳು ಕೂಡ ನೂತನ ವಧು ವರರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

ನಟಿ ಪ್ರಣಿತಾ ಸ್ಯಾಂಡಲ್‌‌ ಮಾತ್ರವಲ್ಲದೇ ತಮಿಳು, ತೆಲುಗು ಮಿಂಚು ಹರಿಸಿದ್ದಾರೆ. ಅಲ್ಲದೇ ಹಂಗಾಮಾ 2 ಹಾಗೂ ಭುಜ್ ಸಿನಿಮಾಗಳ ಮೂಲಕ ಸದ್ಯದಲ್ಲಿಯೇ ಬಾಲಿವುಡ್ ಗೆ ಎಂಟ್ರಿಕೊಡಲಿದ್ದಾರೆ.

ನಟಿ ಪ್ರಣಿತಾ ಅವರು ಅದ್ದೂರಿಯಾಗಿಯೇ  ಮದುವೆಯಾಗಲು ಪ್ಲ್ಯಾನ್ ಮಾಡಿ ಕೊಂಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಪ್ಲ್ಯಾನ್ ಬದಲಾಯಿಸಿಕೊಂಡಿದ್ದಾರೆ.

ಹೀಗಾಗಿ ಸಂಬಂಧಿಕರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

Comments are closed.