Medical student harasses woman : ನಡುರಸ್ತೆಯಲ್ಲಿ ಮಹಿಳೆ & ಆಕೆಯ ಪುತ್ರಿಗೆ ಚುಡಾಯಿಸಿದ್ದ ಪುಂಡ ವಿದ್ಯಾರ್ಥಿ ಅಂದರ್​..!

ಬೆಂಗಳೂರು: 49 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಮೆಡಿಕಲ್​ ವಿದ್ಯಾರ್ಥಿಯನ್ನು(Medical student harasses woman) ಪೊಲೀಸರು ಬಂಧಿಸಿದ ಆಘಾತಕಾರಿ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ವಿಜಯ್​ ಭಾರದ್ವಾಜ್​ ಎಂದು ಗುರುತಿಸಲಾಗಿದೆ. 28 ವರ್ಷದ ವಿಜಯ್​ ಭಾರದ್ವಾಜ್​​ ಬಿಹಾರದ ಮುಜಾಫರ್​ ನಗರ ಮೂಲದವನಾಗಿದ್ದ. ವಿಜಯ್​ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮೂರನೆ ವರ್ಷದ ವಿದ್ಯಾರ್ಥಿಯಾಗಿದ್ದ. ಈತ ಬನಶಂಕರಿಯಲ್ಲಿ ಪೇಯಿಂಗ್​ ಗೆಸ್ಟ್​ ಆಗಿ ವಾಸವಿದ್ದ ಎನ್ನಲಾಗಿದೆ.


ಅಮೃತಹಳ್ಳಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು ಈ ಸಂಬಂಧ ಪೊಲೀಸರು ಆರೋಪಿ ವಿಜಯ್​ ಭಾರದ್ವಾಜ್ ವಿರುದ್ಧ ಸೆಕ್ಷನ್​ 354 ಎ, 345 ಬಿ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊಸಕೋಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ವೀರಣ್ಣನಪಾಳ್ಯ ಜಂಕ್ಷನ್​​, ಹೆಬ್ಬಾಳ ರಿಂಗ್​ ರಸ್ತೆಯಲ್ಲಿ ವಿಜಯ್​ ತಮ್ಮ ಕಾರನ್ನು ಹಿಂಬಾಲಿಸಲು ಆರಂಭಿಸಿದನು ಎಂದು ಮಹಿಳೆ ದೂರಿದ್ದಾರೆ. ಆರೋಪಿಗಳು ಗೊರಗುಂಟೆ ಪಾಳ್ಯ ಜಂಕ್ಷನ್​ವರೆಗೆ ಕಾರನ್ನು ಹಿಂಬಾಲಿಸಿದ್ದಾರೆ. ಮಹಿಳೆಯ ಪುತ್ರ ಕಾನ್​ಸ್ಟೇಬಲ್​ಗಳ ಸಮೀಪ ಹೋಗಿ ಕಾರನ್ನು ನಿಲ್ಲಿಸಿದ ಬಳಿಕ ಅವರು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.


ದೂರಿನಲ್ಲಿ ಮಹಿಳೆ ತಿಳಿಸಿರುವ ಮಾಹಿತಿಯ ಪ್ರಕಾರ, ವೀರಣ್ಣನ ಪಾಳ್ಯ ಜಂಕ್ಷನ್​ನಲ್ಲಿ ಸುಮಾರು 2 ಗಂಟೆ ಸುಮಾರಿಗೆ ಅವರ ಕಾರು ಪಂಕ್ಚರ್​ ಆಗಿತ್ತು. ಅವರ ಪುತ್ರ ಕಾರನ್ನು ನಿಲ್ಲಿಸಿ ಇದನ್ನು ಸರಿಪಡಿಸುತ್ತಿದ್ದರು. ಈ ವೇಳೆ ಅದೇ ಸ್ಥಳಕ್ಕೆ ಆಗಮಿಸಿದ ವಿಜಯ್​​ ತನ್ನ ಹಾಗೂ ತನ್ನ ಮಗಳ ವಿರುದ್ಧ ಅಶ್ಲೀಲ ಭಾಷಾ ಪ್ರಯೋಗ ಮಾಡಿದ್ದಾನೆ. ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಟೈರ್​ ಬದಲಾಯಿಸುತ್ತಿದ್ದಂತೆಯೇ ನಾವು ಸ್ಥಳದಿಂದ ತೆರಳಿದವು. ಆದರೆ ಆರೋಪಿ ಮಾತ್ರ ನಮ್ಮನ್ನು ಹಿಂಬಾಲಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.


ಆರೋಪಿಯು ತನ್ನ ವಾಹನದಿಂದ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗೊರಗುಂಟೆಪಾಳ್ಯದಲ್ಲಿ ನಮಗೆ ಇಬ್ಬರು ಕಾನ್​ಸ್ಟೇಬಲ್​ಗಳು ಕಾಣಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಆರೋಪಿಗಾಗಿ ಎರಡು ದಿನಗಳ ಕಾಲ ತಲಾಶ್​ ನಡೆಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ.

Bengaluru: Medical student sexually harasses 49-year-old woman and her daughter; arrested

ಇದನ್ನು ಓದಿ : Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್​ ಮಹತ್ವದ ಆದೇಶ

ಇದನ್ನೂ ಓದಿ: Big Relief to Aryan Khan:ಶಾರೂಕ್​ ಪುತ್ರ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​ ನೀಡಿದ ಮುಂಬೈ ಹೈಕೋರ್ಟ್​..!

Comments are closed.