Chandigarh: ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಲೀಕ್ ಕೇಸ್.. ಮೂವರು ಅರೆಸ್ಟ್

ಚಂಡೀಗಢ : Chandigarh ಪಂಜಾಬ್ ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವ ವಿದ್ಯಾಲಯದ ಗರ್ಲ್ಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಲೀಕ್ ಕೇಸ್ ಸಂಬಂಧ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ವಿಡಿಯೋಮಾಡಿದ ವಿದ್ಯಾರ್ಥಿನಿ ಸೇರಿದಂತೆ ಈಗ ಅರೆಸ್ಟ್ ಆದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಚಂಡೀಗಢ ವಿವಿ ಹಾಸ್ಟೆಲ್ ನಲ್ಲಿ ಎಂಬಿಎ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋವನ್ನ ಹಾಸ್ಟೆಲ್ ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿಯೇ ಮೊಬೈಲ್ ನಲ್ಲಿ ಚಿತ್ರಿಕರಿಸಿದ್ಲು. ಅಲ್ಲದೇ ಅದನ್ನ ಶಿಮ್ಲಾದಲ್ಲಿರೋ ತನ್ನ ಪ್ರಿಯಕರನಿಗೆ ಕಳುಹಿಸಿದ್ಲು. ಒಟ್ಟು 60 ವಿದ್ಯಾರ್ಥಿನಿಯರ ಸ್ನಾನದದ ವಿಡಿಯೋಗಳನ್ನ ವಿದ್ಯಾರ್ಥಿನಿ ಆತನ ಬಾಯ್ ಫ್ರೆಂಡ್ ಗೆ ಕಳುಹಿಸಿದ್ಲಂತೆ. ಆತ ಆ ವಿಡಿಯೋಗಳನ್ನ ಅಶ್ಲೀಲ ವೆಬ್ ಸೈಟ್ ಗಳಿಗೆ ಅಪಲೋಡ್ ಮಾಡಿದ್ದ ಎನ್ನಲಾಗಿದೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಶನಿವಾರ ವಿವಿ ಆವರಣದಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿತ್ತು. ವಿದ್ಯಾರ್ಥಿನಿಯರೆಲ್ಲ ವಿವಿ ಆವರಣದಲ್ಲಿ ಪ್ರತಿಭಟನೆಗೆ ಇಳಿದಿದ್ರು. ವಿದ್ಯಾರ್ಥಿನಿಯರ ಪ್ರತಿಭಟನೆಗೆ ವಿದ್ಯಾರ್ಥಿಗಳು ಸಹ ಸಾಥ್ ಕೊಟ್ಟಿದ್ರು.

ಪ್ರತಿಭಟನೆ ವೇಳೆ 8 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅನ್ನೋ ವದಂತಿಯೂ ಹಬ್ಬಿತ್ತು. ಬಳಿಕ ಪೊಲೀಸರು ವಿದ್ಯಾರ್ಥಿನಿಯರ ಆತ್ಮಹತ್ಯೆ ಯತ್ನ ಸುದ್ದಿಯನ್ನ ಅಲ್ಲಗಳೆದಿದ್ರು. ಶನಿವಾರ ರಾತ್ರಿ ಚಂಡೀಗಢ ವಿವಿ ಕ್ಯಾಂಪಸ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕಾಗಿಮಿಸಿದ ಪೊಲೀಸರ ವಾಹನಗಳನ್ನೇ ಅಡ್ಡಗಟ್ಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು. ಭಾನುವಾರವೂ ಸಹ ವಿವಿಯಲ್ಲಿ ವಿದ್ಯಾರ್ಥಿಗಳೆಲ್ಲ ಕಪ್ಪು ಬಟ್ಟೆ ಧರಿಸಿಕೊಂಡು ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರು.

https://twitter.com/Harsh_Dahiya_/status/1571230138989449218
https://twitter.com/unapologeticAnk/status/1571225138703765506
https://twitter.com/HaggteZakhm/status/1571199372083490816

ಮತ್ತೊಂದೆಡೆ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಮಾಡಿದ್ದ ವಿದ್ಯಾರ್ಥಿನಿಯನ್ನ ಕೊಠಡಿಯಲ್ಲಿ ಕೂಡಿಹಾಕಿ ವಿದ್ಯಾರ್ಥಿನಿಯರೇ ವಿಚಾರಣೆ ನಡೆಸಿದ್ರು. ಹಾಸ್ಟೆಲ್ ನ ಲೇಡಿ ವಾರ್ಡನ್ ಸಹ ವಿಡಿಯೋ ಮಾಡಿದ್ದ ವಿದ್ಯಾರ್ಥಿನಿಗೆ ತರಾಟೆಗೆ ತೆಗೆದುಕೊಂಡ ವಿಡಿಯೋ ಸಹ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇನ್ನು ವಿದ್ಯಾರ್ಥಿನಿಯರೆಲ್ಲ ಸೇರಿ, ವಿಡಿಯೋ ಮಾಡಿದ್ದಾಳೆ ಎನ್ನಲಾದ ಯುವತಿಯನ್ನ ಪ್ರಶ್ನಿಸಿದಾಗ, ಆಕೆ ವಿಡಿಯೋ ಮಾಡಿ ಅದನ್ನ ಶಿಮ್ಲಾದಲ್ಲಿರೋ ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿರೋದಾಗಿ ಒಪ್ಪಿಕೊಂಡಿದ್ಲು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸ್ಥಳಕ್ಕಾಗಮಿಸಿದ ಮೊಹಾಲಿ ಪೊಲೀಸರು ವಿಡಿಯೋ ಮಾಡಿರೋದಾಗಿ ಒಪ್ಪಿಕೊಂಡಿದ್ದ ವಿದ್ಯಾರ್ಥಿನಿಯನ್ನ ಬಂಧಿಸಿ ಎಫ್ಐಆರ್ ದಾಖಲಿಸಿದ್ರು. ಸದ್ಯ ವಿಡಿಯೋ ಹಂಚಿಕೊಂಡಿದ್ದ ವಿದ್ಯಾರ್ಥಿನಿಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಶಿಮ್ಲಾದಲ್ಲೇ ಪೊಲೀಸರು ಬಂಧಿಸಿದ್ದಾರೆ. ಇದೀಗ ಪಂಜಾಬ್ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ಆದ್ರೆ, ವಿಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿರೋ ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಗುರ್‌ಪ್ರೀತ್‌ ಕೌರ್‌, ಇತರ ಯಾವುದೇ ವಿದ್ಯಾರ್ಥಿನಿಯ ಆಕ್ಷೇಪಾರ್ಹವಾದ ವಿಡಿಯೊ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯ ಮೊಬೈಲನ್ನು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಶಿಮ್ಲಾದಲ್ಲಿ ಅರೆಸ್ಟ್ ಆಗಿರೋ ವಿದ್ಯಾರ್ಥಿನಿಯನ ಭಾಯ್ ಫ್ರೆಂಡ್ ಹೆಸರು ಸನ್ನಿ ಮೆಹ್ತಾ ಅಂತಾ ಗೊತ್ತಾಗಿದ್ದು, ಆತನಿಗೆ 23 ವರ್ಷ ವಯಸ್ಸು ಅಂತಾ ತಿಳಿದು ಬಂದಿದೆ ಅಲ್ದೆ ಈತ ಟ್ರಾವಲ್‌ ಎಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಶಿಮ್ಲಾದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ವ್ಯಕ್ತಿಯ ಮಾಹಿತಿ ಬಹಿರಂಗವಾಗಿಲ್ಲ.  

ಚಂಡೀಗಢ ವಿವಿ ಹಾಸ್ಟೆಲ್ ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಇಂದು ಸಹ ವಿವಿಯಲ್ಲಿ ಪ್ರತಿಭಟನೆ ಮುಂದುವರಿದೆ. ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್ 24 ರವರೆಗೆ ರಜೆ ಘೋಷಿಸಲಾಗಿದೆ. ಕೆಲ ವಿದ್ಯಾರ್ಥಿನಿಯರ ಪೋಷಕರು ಹಾಸ್ಟೆಲ್ ಗೆ ಆಗಮಿಸಿ ತಮ್ಮ ಮಕ್ಕಳನ್ನ ವಾಪಸ್ ಮನೆಗೆ ಕರೆದೊಯ್ಯುತ್ತಿದ್ದಾರೆ.

ಇದನ್ನೂ ಓದಿ : Kerala Lottery : ಅಬ್ಬಬ್ಬಬ್ಬ… ಆಟೋ ಡ್ರೈವರ್ ಗೆ 25 ಕೋಟಿ ಲಾಟ್ರಿ

ಇದನ್ನೂ ಓದಿ : Deepa Powlen Jessica : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

Chandigarh Student, 2 Men At Centre Of Chandigarh Hostel Row Arrested

Comments are closed.