Chhath Puja 2022 : ಛತ್ ಪೂಜೆ 2022 : ಈ ಮಂಗಳಕರ ಹಬ್ಬದ ವಿಧಿ ವಿಧಾನಗಳು ನಿಮಗೆ ಗೊತ್ತಾ ?

ಛತ್‌ ಪೂಜೆಯ(Chhath Puja 2022 ) ಹಬ್ಬವು ಪವಿತ್ರ ಸ್ನಾನ ಮಾಡಿಕೊಂಡು, ಪೂರ್ವದಲ್ಲಿ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರೊಂದಿಗೆ ಪ್ರಾರಂಭಗೊಂಡು, ಸಂಜೆಯ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವ ಮೂಲಕ ಕೊನೆಗೊಳ್ಳುತ್ತದೆ. ಈ ಪೂಜೆಯನ್ನು ಆಚರಿಸುವವರು ಅದರ ಸಿದ್ಧತೆಗಳನ್ನು ದೀಪಾವಳಿಯ ಮೊದಲು ಪ್ರಾರಂಭಿಸುತ್ತಾರೆ. ಈ ಹಬ್ಬದ ಆಚರಣೆಯ ಕ್ರಮವು ಅತ್ಯಂತ ಕಠಿಣ ರೀತಿಯಲ್ಲಿ ಇರುತ್ತದೆ. ಅನೇಕ ಜನರು ಬೆಳಗ್ಗೆ ಪವಿತ್ರ ಸ್ನಾನದೊಂದಿಗೆ ನೀರು ಕೂಡ ಕುಡಿಯದೇ ಉಪವಾಸವನ್ನು ಕೈಗೊಳ್ಳುತ್ತಾರೆ. ಹಾಗಾಗಿ ಈ ಹಬ್ಬದ ಆಚರಣೆಯು ಅತ್ಯಂತ ಕಷ್ಟಕರವಾದ ಉಪವಾಸವೆಂದು ಪರಿಗಣಿಸಲಾಗುತ್ತದೆ. ಛತ್ ಪೂಜೆಯ ಹಬ್ಬವನ್ನು ಹೆಚ್ಚಾಗಿ ಬಿಹಾರ, ಜಾರ್ಖಂಡ್ ಮತ್ತು ದೇಶದ ಇನ್ನಿತರ ಸ್ಥಳಗಳಲ್ಲಿನ ಜನರು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ಆಚರಿಸುತ್ತಾರೆ.

ಈ ವರ್ಷದ ಛತ್‌ ಪೂಜೆ ಅಕ್ಟೋಬರ್ 28 ಶುಕ್ರವಾರದಿಂದ ಉಪವಾಸದೊಂದಿಗೆ ಪ್ರಾರಂಭಿಸುತ್ತಾರೆ. ಅಕ್ಟೋಬರ್ 29 ಮತ್ತು ಅಕ್ಟೋಬರ್ 30 ರಂದು ಸೂರ್ಯದೇವನನ್ನು ಭಕ್ತರು ಅಸ್ತಮಿಸುವ ಸೂರ್ಯನನ್ನು ಪೂಜೆ ಮಾಡಿದ್ದರೆ, ಮರುದಿನ ಅಕ್ಟೋಬರ್ 31 ರಂದು ಉದಯಿಸುವ ಸೂರ್ಯದೇವನಿಗೆ ಅರ್ಘ್ಯವನ್ನು ನೀಡುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಭೂಮಿ ಮೇಲಿನ ಸಕಲ ಜೀವರಾಶಿಯ ಬದುಕಿಗೆ ಕಾರಣನಾದ ಸೂರ್ಯನ ಆರಾಧನೆಯನ್ನು ಛತ್‌ ಪೂಜೆಯ ಮೂಲಕ ಪೂಜಿಸಲಾಗುತ್ತದೆ. ವಿಶೇಷವಾಗಿ ಈ ಹಬ್ಬದ ಆಚರಣೆಯಲ್ಲಿ ಸೂರ್ಯದೇವನನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಅಭಿಲಾಷೆಯನ್ನು ಪೂರೈಸುತ್ತಾನೆ ಎನ್ನುವುದು ಜನರ ನಂಬಿಕೆಯಾಗಿರುತ್ತದೆ.

ಈ ಹಬ್ಬದ ಆಚರಣೆಯಲ್ಲಿ ಕುಟುಂಬ ಅಭಿವೃದ್ಧಿ, ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯ, ಯಾವುದೇ ರೋಗವನ್ನು ಗುಣಪಡಿಸಲು, ಸಂತೋಷ ಮತ್ತು ಸಮೃದ್ಧ ಜೀವನಕ್ಕಾಗಿ ಛತ್ ಪೂಜೆಯನ್ನು ಮಾಡುತ್ತಾರೆ. ಛತ್ ಪೂಜೆಯನ್ನು ನೀರನ್ನು ಕುಡಿಯದೇ ಉಪವಾಸ ಮಾಡುವುದರ ಜೊತೆಗೆ ಸೂರ್ಯ ಉದಯದಿಂದ ಸೂರ್ಯಸ್ತದವರೆಗೂ ನೀರಿನಲ್ಲಿ ನಿಂತು ಧ್ಯಾನ ಮಾಡುದರೊಂದಿಗೆ ಸೂರ್ಯದೇವನಿಗೆ ಅರ್ಘ್ಯವನ್ನು ಸಮರ್ಪಣೆ ಮಾಡುವುದರ ಮೂಲಕ ಕಠಿಣ ಆಚರಣೆಯನ್ನು ಮಾಡುತ್ತಾರೆ. ಈ ಹಬ್ಬವನ್ನು ನಾಲ್ಕು ದಿನಗಳ ಆಚರಿಸಲಾಗುತ್ತದೆ. ನಾಲ್ಕು ದಿನಗಳಲ್ಲಿ ಉಪ್ಪು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸದೇ ಶುದ್ಧ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಅದು ಪ್ರಸಾದ ರೂಪದಲ್ಲಿ ಇರುವ ಸಿಹಿತಿನಿಸು, ಹಣ್ಣುಗಳು ಮತ್ತು ಬಿದಿರಿನ ಕಣಲನ್ನು ಮಾತ್ರ ಸೇವಿಸುತ್ತಾರೆ. ಆ ನಾಲ್ಕು ದಿನದ ಪೂಜಾ ವಿಧಿ ವಿಧಾನಗಳು ಈ ಕೆಳಗಿನಂತಿದೆ.


ಛತ್‌ ಪೂಜೆಯ ನಾಲ್ಕು ದಿನದ ಆಚರಣೆ :


ಮೊದಲನೇ ದಿನ :
ಛತ್‌ ಪೂಜೆಯ ಮೊದಲ ದಿನ ಭಕ್ತರು ಗಂಗಾನದಿಯಲ್ಲಿ ಮುಳುಗು ಹಾಕಿ ಅದರ ಪವಿತ್ರಜಲವನ್ನು ಮನೆಗೊಯ್ದು ಮನೆಯ ಸುತ್ತಮುತ್ತಲಿನ ಜಾಗಗಳಿಗೆ ಸಿಂಪಡಿಸಿ ಸ್ಚಚ್ಛಗೊಳಿಸುತ್ತಾರೆ. ಹಾಗೆ ದಿನದಲ್ಲಿ ಒಂದು ಹೊತ್ತು ಮಾತ್ರ ಆಹಾರವನ್ನು ಸೇವಿಸುತ್ತಾರೆ.
ಎರಡನೇ ದಿನ:
ಪಂಚಮಿಯ ದಿನ ಛತ್‌ಗೆ ಮೊದಲ ದಿನ ಇಡೀ ದಿನ ಉಪವಾಸ ಮಾಡುತ್ತಾರೆ. ಸೂರ್ಯಸ್ತದ ನಂತರ ಸ್ವಲ್ಪ ಪ್ರಸಾದ ರೂಪದ ಆಹಾರವನ್ನು ಸೇವಿಸುತ್ತಾರೆ. ಈ ದಿನ ಭೂಮಿತಾಯಿ ಪೂಜೆಯ ನಂತರ ಅಕ್ಕಿಪಾಯಸ, ಪೂರಿಗಳು ಮತ್ತು ಬಾಳೆಹಣ್ಣುಗಳನ್ನು ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ವಿತರಿಸುತ್ತಾರೆ. ಈ ದಿನದ ನಂತರ ೩೬ ಗಂಟೆಗಳ ಕಾಲ ನೀರನ್ನು ಕುಡಿಯದೇ ಉಪವಾಸವನ್ನು ಮಾಡುತ್ತಾರೆ.
ಮೂರನೇ ದಿನ :
ಈ ದಿನ ಪ್ರಸಾದ ತಯಾರಿಕೆಯಲ್ಲಿ ದಿನ ಕಳೆಯುತ್ತಾರೆ. ಈ ದಿನ ಕುಟುಂಬವರ್ಗ, ಬಂಧುಬಳಗದ ಜೊತೆ ನೀರಿರುವ (ನದಿ, ಕೊಳ,)ಸ್ಥಳಕ್ಕೆ ಹೋಗಿ ಮುಳುಗುತ್ತಿರುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ಸೇರಿ ಸೂರ್ಯನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ದಿನದ ಪೂಜೆಯು ಹಬ್ಬದ ರೀತಿಯಲ್ಲಿ ಜಾನಪದ ಗೀತೆಯೊಂದಿಗೆ ನಡೆಯುತ್ತದೆ. ಈ ಜನಪದ ಗೀತೆಗಳು ಛತ್‌ ಪೂಜೆ ಆಚರಣೆಯ ಸಂಸ್ಕೃತಿ , ಸಾಮಾಜಿಕ ಸಂಬಂಧ, ಪೌರಾಣಿಕತೆ ಬಿಹಾರ ಮತ್ತು ಉತ್ತರ ಪ್ರದೇಶಗಳ ಇತಿಹಾಸವನ್ನು ಬಿಂಬಿಸುತ್ತದೆ. ಈ ಛತ್‌ ಪೂಜೆಯನ್ನು ಹೆಚ್ಚಾಗಿ ಮಗು ಹುಟ್ಟಿದ ಸಂಭ್ರಮವಿದ್ದರೆ ಆಚರಿಸುತ್ತಾರೆ. ಈ ಮೂರನೆಯ ದಿನದ ಈ ಆಚರಣೆಯನ್ನು ದೀಪಗಳೊಂದಿಗೆ ಆಚರಿಸುತ್ತಾರೆ. ಅಸ್ತಮಿತ ಸೂರ್ಯನಿಗೆ ಇಲ್ಲಿ ಪೂಜೆ ಮಾಡುತ್ತಾರೆ.
ನಾಲ್ಕನೆಯ ದಿನ:
ಛತ್‌ ಪೂಜೆಯ ಕೊನೆಯ ದಿನ ಜನರು ಕುಟುಂಬ ಸದಸ್ಯರೊಂದಿಗೆ ಸೂರ್ಯೋದಯಕ್ಕೂ ಮೊದಲೇ ನದಿ ತೀರಕ್ಕೆ ಹೋಗುತ್ತಾರೆ. ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದಕ್ಕಾಗಿ ನದಿ ತೀರಕ್ಕೆ ತೆರಳುತ್ತಾರೆ. ಕುಟುಂಬ ಸದಸ್ಯರು ತಮ್ಮ ಅಕ್ಕಪಕ್ಕ ಮನೆಗಳು ಹಾಗೂ ಬಂಧುಗಳ ಮನೆಗೆ ಹೋಗಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ನದಿ ತೀರದಲ್ಲಿ ಬೆಳಗಿನ ಜಾವದಲ್ಲಿ ಛತ್‌ ಪೂಜೆಯ ಆಚರಣೆಯನ್ನು ನೋಡಲು ಚೆನ್ನಾಗಿರುತ್ತದೆ.


ಛತ್‌ ಪೂಜೆಯ ಆಚರಣೆಯಲ್ಲಿ ಕೆಲವೊಂದು ಅನುಸರಿಸಬೇಕಾದ ಕ್ರಮಗಳನ್ನು ಒಳ್ಳಗೊಂಡಿರುತ್ತದೆ. ಈ ಹಬ್ಬದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಮಾಡಬಾರದ ಕ್ರಮಗಳು ಈ ಕೆಳಗಿನಂತಿವೆ.

ಛತ್ ಪೂಜೆಯಲ್ಲಿ ಅನುಸರಿಸಬೇಕಾದ ಕ್ರಮಗಳು :

  • ಛತ್ ಪೂಜೆ ಆಚರಣೆಗಳಲ್ಲಿ ತೊಡಗುವವರು ಮೊದಲು ಸ್ನಾನ ಮಾಡುವುದು ಮುಖ್ಯವಾಗಿರುತ್ತದೆ.
  • ಈ ಪೂಜೆಗೆ ಪ್ರಸಾದವನ್ನು ತಯಾರಿಸುವಾಗ ಮೊದಲು ಕೈ ಮತ್ತು ಪಾದಗಳು ಸಂಪೂರ್ಣವಾಗಿ ಸ್ವಚ್ಛವಾಗಿರಿಸಿಕೊಂಡಿರಬೇಕಾಗುತ್ತದೆ.
  • ಪೂಜೆಯ ಮೊದಲು ಕುಟುಂಬದ ಹಿರಿಯರ ಆಶೀರ್ವಾದ ಪಡೆದು ಸೂರ್ಯ ದೇವರನ್ನು ಪೂಜಿಸಬೇಕಾಗುತ್ತದೆ.
  • ಛತ್‌ ಪೂಜೆಯ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಸೂರ್ಯದೇವನಿಗೆ ಸಂಬಂಧಿಸಿದ ವ್ರತ ಕಥಾವನ್ನು ಪಠಿಸುವುದು ಅಥವಾ ಕೇಳುವುದು ಅಗತ್ಯವಾಗಿರುತ್ತದೆ.
  • ಛತ್‌ ಪೂಜೆಯಲ್ಲಿ ಮಹಿಳೆಯರು ಸ್ನಾನದ ನಂತರ ಮೊದಲು ಮಾಡಬೇಕಾದ ಮತ್ತು ಆಚರಣೆಯೆಂದರೆ ಕಿತ್ತಳೆ ವರ್ಮಿಲಿಯನ್ ಅನ್ನು ಅನ್ವಯಿಸಬೇಕಾಗುತ್ತದೆ.

ಇದನ್ನೂ ಓದಿ : Diwali Laxmi Puja 2022 : ದೀಪಾವಳಿಗೆ ಸೂರ್ಯ ಗ್ರಹಣದ ಕರಿನೆರಳು : ಲಕ್ಷ್ಮೀ ಪೂಜೆ ಮಾಡುವುದಾದರೂ ಎಂದು

ಇದನ್ನೂ ಓದಿ : Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”

ಛತ್ ಪೂಜೆಯಲ್ಲಿ ಅನುಸರಿಸಬಾರದ ಕ್ರಮಗಳು:

  • ಈ ಪೂಜೆಯ ಆಚರಣೆಯ ಸಂದರ್ಭದಲ್ಲಿ ಅಶುಚಿಯಾದ ಬಟ್ಟೆಗಳನ್ನು ಧರಿಸಬಾರದು. ಬದಲಿಗೆ ಹೊಸ ಬಟ್ಟೆಗಳನ್ನು ಧರಿಸಬೇಕು.
  • ಪೂಜೆಯ ವೇಳೆ ಮೊದಲು ಸ್ನಾನ ಮಾಡದೆ ಹಾಗೂ ಕೈಗಳನ್ನು ತೊಳೆಯದೆ ಪೂಜಾ ಸಾಮಗ್ರಿಗಳನ್ನು ಮುಟ್ಟಬಾರದು.
  • ಪೂಜೆಯ ಸಮಯದಲ್ಲಿ ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕು.
  • ಪೂಜೆ ಪ್ರಾರಂಭಿಸುವ ಮೊದಲು ಏನನ್ನೂ ಕೂಡ ತಿನ್ನಬಾರದು.
  • ಛತ್ ಪೂಜೆಯ ಸಮಯದಲ್ಲಿ ಮಾಂಸಾಹಾರಿಗಳು ಅದನ್ನು ಸೇವಿಸಬಾರದು.

Chhath Puja 2022 : Do you know the rituals of this auspicious festival?

Comments are closed.