Kohli reveals bonding with Rohit: ರೋಹಿತ್ ಶರ್ಮಾ ಜೊತೆಗಿನ ವಿಶೇಷ ಬಾಂಧವ್ಯದ ಗುಟ್ಟು ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಬೆಂಗಳೂರು: Virat Kohli Rohit Sharma bonding : ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಕಾಲವೊಂದಿತ್ತು. ಕೊಹ್ಲಿ ನಾಯಕನಾಗಿ ಯಶಸ್ಸು ಗಳಿಸುತ್ತಿದ್ದಾಗ ನಾಯಕತ್ವದ ಮೇಲೆ ರೋಹಿತ್ ಶರ್ಮಾ ಕಣ್ಣು ಬಿದ್ದಿದ್ದೂ ಇದೆ. ಟೀಮ್ ಇಂಡಿಯಾದಲ್ಲಿ ರೋಹಿತ್ ಮತ್ತು ಕೊಹ್ಲಿ ನಡುವಿನ ಶೀತಲ ಸಮರ ಹಲವಾರು ಬಾರಿ ಬಹಿರಂಗವಾಗಿದ್ದೂ ಇದೆ.

ಆದರೆ ಇದೀಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇಬ್ಬರೂ ಒಂದಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ರೋಹಿತ್ ಶರ್ಮಾ ಸಂಭ್ರಮಿಸಿದ್ದರು. ಅಷ್ಟರ ಮಟ್ಟಿಗೆ ಇಬ್ಬರೂ ಒಂದಾಗಿದ್ದಾರೆ (Virat Kohli and Rohit Sharma bonding). ಇದೀಗ ರೋಹಿತ್ ಶರ್ಮಾ ಜೊತೆಗಿನ ಬಾಂಧವ್ಯದ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರೋಹಿತ್ ಮತ್ತು ತಮ್ಮ ನಡುವಿನ ಬಾಂಧವ್ಯದ ಗುಟ್ಟನ್ನು ಕೊಹ್ಲಿ ಬಿಚ್ಚಿಟ್ಟಿದ್ದಾರೆ.

“ನಾವಿಬ್ಬರೂ ದೊಡ್ಡ ಟೂರ್ನಮೆಂಟ್’ಗಳನ್ನು ಗೆಲ್ಲುವುದರ ಬಗ್ಗೆ ಮತ್ತು ಅದಕ್ಕೆ ಸಿದ್ಧತೆ ನಡೆಸುವುದರ ಬಗ್ಗೆ ಪರಸ್ಪರ ಚರ್ಚೆ ನಡೆಸುತ್ತಲೇ ಇರುತ್ತೇವೆ. ನಾನು ಒಂದು ತಿಂಗಳ ವಿಶ್ರಾಂತಿಯ ನಂತರ ತಂಡಕ್ಕೆ ಮರಳಿದಾಗ ಟೀಮ್ ಇಂಡಿಯಾದ ವಾತಾವರಣ ಅದ್ಭುತವಾಗಿತ್ತು. ಅದನ್ನು ನೋಡಿ ನನ್ನ ಉತ್ಸಾಹ ಹೆಚ್ಚಾಯಿತು. ನಾವಿಬ್ಬರೂ ತಂಡಕ್ಕೆ ಏನೂ ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಆಟದ ಕುರಿತಾಗಿ ನಮ್ಮಿಬ್ಬರ ದೃಷ್ಠಿಕೋನ ಯಾವಾಗಲೂ ಒಂದೇ ಆಗಿರುತ್ತದೆ. ಅದು ಭಾರತವನ್ನು ಗೆಲ್ಲಿಸುವುದಾಗಿರುತ್ತದೆ. ತಂಡದಲ್ಲಿರುವ ಸಣ್ಣ ಸಣ್ಣ ಹುಳುಕಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ಜೊತೆಯಾಗಿ ಚರ್ಚೆ ನಡೆಸುತ್ತೇವೆ. ಕೆಲ ಸಂದರ್ಭಗಳಲ್ಲಿ ನಾನು ರೋಹಿತ್’ಗೆ ಸಲಹೆಗಳನ್ನು ನೀಡುತ್ತೇನೆ. ಅವರೂ ನನ್ನೊಂದಿಗೆ ಚರ್ಚೆ ನಡೆಸುತ್ತಾರೆ. ನಾವಿಬ್ಬರೂ ನಮ್ಮ ಪ್ರಮುಖ ಗುರಿಯತ್ತ ಗಮನ ಕೇಂದ್ರೀಕರಿಸಿದ್ದೇವೆ” ಎಂದು ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

35 ವರ್ಷದ ರೋಹಿತ್ ಶರ್ಮಾ ಮತ್ತು 34 ವರ್ಷದ ವಿರಾಟ್ ಕೊಹ್ಲಿ 2008ರಿಂದಲೂ ಭಾರತ ತಂಡದ ಪರ ಜೊತೆಯಾಗಿ ಆಡುತ್ತಿದ್ದಾರೆ. ರೋಹಿತ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ರೆ, ವಿರಾಟ್ ಕೊಹ್ಲಿ 2008ರಲ್ಲಿ ಭಾರತ ಪರ ಮೊದಲ ಪಂದ್ಯವಾಡಿದ್ದರು. ರೋಹಿತ್ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿದ್ರೆ, ವಿರಾಟ್ ಕೊಹ್ಲಿ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದಲ್ಲಿದ್ದರು. 2013ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎಂ.ಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆದ ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 9 ವರ್ಷಗಳಿಂದ ಮರೀಚಿಕೆಯಾಗುತ್ತಲೇ ಬಂದಿರುವ ಐಸಿಸಿ ಟ್ರೋಫಿಯನ್ನು ಈ ಬಾರಿ ಗೆಲ್ಲಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಣ ತೊಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಭಾರತ ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕಗಳನ್ನು ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದಾರೆ. ಭಾನುವಾರ ಪರ್ತ್’ನಲ್ಲಿ ನಡೆಯಲಿರುವ ಸೂಪರ್-12 ಹಂತದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ದಕ್ಷಿಣ ಆಫ್ರಿಕಾ (India vs South Africa) ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Hardik Pandya follows Dhoni strategy : ಹಾರ್ದಿಕ್ ಪಾಂಡ್ಯ ಬ್ಯಾಟಲ್ಲಿ ಧೋನಿ ಸಕ್ಸಸ್ ತಂತ್ರ, ಪವರ್ ಹಿಟ್ಟಿಂಗ್‌ಗೆ ಮಹೀ ಮಂತ್ರ ಪಾಲಿಸುತ್ತಿದ್ದಾರೆ ಆಲ್ರೌಂಡರ್

ಇದನ್ನೂ ಓದಿ : T20 World Cup 2022: ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ

Virat Kohli and Rohit Sharma bonding in cricket T20 World Cup 2022 India vs South Africa

Comments are closed.