ಭಾನುವಾರ, ಏಪ್ರಿಲ್ 27, 2025
HomeNationalಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

- Advertisement -

ಛತ್ತೀಸ್‌ಗಢ : ಪತಿ ಪತ್ನಿಯ ನಡುವೆ ವಿರಸ ಮೂಡುವುದು ಸಹಜ. ಇದೇ ಕಾರಣಕ್ಕೆ ಹಲವರು ಡೈವೋರ್ಸ್‌ (divorce) ಪಡೆಯುತ್ತಿದ್ದಾರೆ. ಇಲ್ಲೋಬ್ಬ ಪತಿರಾಯ ಪತ್ನಿಗೆ ಜೀವನಾಂಶ ನೀಡುವುದನ್ನು ತಪ್ಪಿಸಲು ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ (Husband recording wifes phone conversation)ಮಾಡಿದ್ದಾರೆ. ಆದ್ರೆ ಹೈಕೋರ್ಟ್‌ (High Court) ಇದರಿಂದ ಪತ್ನಿಯ ಖಾಸಗಿತನಕ್ಕೆ ಉಲ್ಲಂಘನೆ (violation of her privacy) ಆಗಿದೆ ಎಂದು ತೀರ್ಪು ನೀಡಿದೆ.

ಪತಿಯು ತನ್ನ ಪತ್ನಿಯ ದೂರವಾಣಿ ಸಂಭಾಷಣೆಯನ್ನು ಆಕೆಗೆ ತಿಳಿಯದೇ ರೆಕಾರ್ಡ್‌ (wife Call Recording) ಮಾಡುವುದರಿಂದ ಆಕೆಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ಸಂವಿಧಾನ 21 ನೇ ವಿಧಿಯ ಅಡಿಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಛತ್ತೀಸ್‌ಗಢದ ಮಹಾಸಮುಂಡ್‌ ಜಿಲ್ಲೆಯ ದಂಪತಿ ಡೈವೋರ್ಸ್‌ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ವೇಳೆಯಲ್ಲಿ ಮಹಿಳೆ ತನಗೆ ಜೀವನಾಂಶ ನೀಡುವಂತೆ ನ್ಯಾಯಾಲಕ್ಕೆ ಮನವಿ ಮಾಡಿಕೊಂಡಿದ್ದರು. 2019ರಿಂದಲೂ ನ್ಯಾಯಾಲಯ ಜೀವನಾಂಶಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸುತ್ತಿತ್ತು

Chhattisgarh High Court Order Husband recording wife's phone conversation is violation of her privacy
Image Credit to Original Source

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ ? ಈ ಕೆಲಸ ಮಾಡಿದ್ರೆ ಇಂದೇ ಜಮೆ ಆಗುತ್ತೆ

ಆದರೆ ಪತಿ, ತನ್ನ ಪತ್ನಿಯ ಮೊಬೈಲ್‌ ಕರೆಯನ್ನು ರೆಕಾರ್ಡ್‌ ಮಾಡಿಸಿ, ಪತ್ನಿಯ ವ್ಯಭಿಚಾರ ನಡೆಸುತ್ತಿದ್ದಾಳೆ ಅಂತಾ ಕೌಟುಂಬಿಕ ನ್ಯಾಯಾಲಯಕ್ಕೆ ನಿರೂಪಿಸಿದ್ದಾನೆ. ಪತ್ನಿ ಮೊಬೈಲ್‌ ರೆಕಾರ್ಡ್‌ ಜೊತೆಗೆ ಮಹಿಳೆಯನ್ನು ನ್ಯಾಯಾಲಯಕ್ಕೆ ವಿಚಾರಣೆಗೂ ಒಳಪಡಿಸಿದ್ದ.

ಈ ವೇಳೆಯಲ್ಲಿ ಪತ್ನಿಯನ್ನು ಮರು ವಿಚಾರಣೆಗೆ ಒಳಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಸಿದ್ದ. ಅಲ್ಲದೇ ವಿಚ್ಛೇದನದ ನಂತರ ಆಕೆಗೆ ಜೀವನಾಂಶವನ್ನು ಪಾವತಿಸಬೇಕಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ. ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯರು 2022 ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಈ ಗೃಹಿಣಿಯರಿಗೆ ಮಾತ್ರವೇ ನಾಳೆ ಜಮೆ ಆಗಲಿದೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ

ಸುಧೀರ್ಘ ಒಂದು ವರ್ಷಗಳ ವಾದ ವಿವಾದಗಗಳನ್ನು ಆಲಿಸಿರುವ ಹೈಕೋರ್ಟ್ (Chhattisgarh High Court) ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಮಹತ್ವದ ತೀರ್ಪು ನೀಡಿದ್ದಾರೆ. ಅಲ್ಲದೇ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದ್ದಾರೆ. ಪತಿ ತನ್ನ ಪತ್ನಿಯ ದೂರವಾಣಿ ಸಂಭಾಷಣೆಯನ್ನು ಆಕೆಗೆ ತಿಳಿಯದೆ ರೆಕಾರ್ಡ್ ಮಾಡಿರುವುದರಿಂದ ಆಕೆಯ ಖಾಸಗಿತನಕ್ಕೆ ಧಕ್ಕೆಯಾಗಿದೆ. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಅರ್ಜಿದಾರರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್‌ನಲ್ಲಿ ಮಹಿಳೆಯ ಪರ ವಕೀಲರಾದ ವೈಭವ್ ಎ ಗೋವರ್ಧನ್ ವಾದ ಮಂಡಿಸಿದ್ದರು.

Chhattisgarh High Court Order Husband recording wife's phone conversation is violation of her privacy
Image Credit to Original Source

ಅಲ್ಲದೇ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ ಈ ಹಿಂದೆ ನೀಡಿದ್ದ ಹಲವು ತೀರ್ಪನ್ನು ವಕೀಲರು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಛತ್ತೀಸ್‌ಗಢ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ ಮತ್ತು ಇನ್ನೊಬ್ಬರಿಗೆ ತಿಳಿಯದೆ ಮೊಬೈಲ್ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಗೌಪ್ಯತೆಯ ಹಕ್ಕು ಅನುಚ್ಛೇದ 21 ರಿಂದ ಜೀವಿಸುವ ಹಕ್ಕಿನ ಅತ್ಯಗತ್ಯ ಅಂಶವಾಗಿದೆ. ಆದ್ದರಿಂದ, ಈ ನ್ಯಾಯಾಲಯದ ಅಭಿಪ್ರಾಯದಲ್ಲಿ, ಕೌಟುಂಬಿಕ ನ್ಯಾಯಾಲಯವು CrPC ಯ ಸೆಕ್ಷನ್ 311 ರ ಅಡಿಯಲ್ಲಿ ಅರ್ಜಿಯನ್ನು ಅನುಮತಿಸುವಲ್ಲಿ ಕಾನೂನಿನ ದೋಷವನ್ನು ಎತ್ತಿಹಿಡಿದಿದೆ.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 65 ರ ಅಡಿಯಲ್ಲಿ ನೀಡಲಾದ ಪ್ರಮಾಣಪತ್ರದೊಂದಿಗೆ, ಅದರ ಪ್ರಕಾರ, ವಿದ್ವಾಂಸ ಕೌಟುಂಬಿಕ ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ಅವರು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Chhattisgarh High Court Order Husband recording wife’s phone conversation is violation of her privacy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular