India Corona Updates : ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : 46,759 ಮಂದಿಗೆ ಸೋಂಕು, 509 ಮಂದಿ ಸಾವು

ನವದೆಹಲಿ : ಭಾರತದಲ್ಲಿ ಕೆಳೆದ ಕೆಲವು ತಿಂಗಳಿನಿಂದ ಇಳಿಕೆ ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು ಇದೀಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇಂದು ದೇಶದಲ್ಲಿ ಬರೋಬ್ಬರಿ 46,759 ಹೊಸ ಪ್ರಕರಣ ದಾಖಲಾಗಿದ್ದು, 509 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ.

ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರೋದು ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದಲೂ ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ದೇಶದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿನ ಪ್ರಮಾಣದ ಶೇ.80ರಷ್ಟು ಪ್ರಕರಣ ಇದೀಗ ಕೇರಳ ರಾಜ್ಯವೊಂದರಲ್ಲಿಯೇ ದಾಖಲಾಗುತ್ತಿದೆ. ನಿನ್ನೆಯೂ ಕೂಡ 30 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ46,759 ಹೊಸ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 3,26,49,947ಕ್ಕೆ ಏರಿಕೆಯನ್ನು ಕಂಡಿದೆ. ಇನ್ನು ಒಂದೇ ದಿನ 509 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಕೊರೊನಾ ಹೆಮ್ಮಾರಿಗೆ 4,37,370 ಮಂದಿ ಬಲಿಯಾಗಿದ್ದಾರೆ. ಇನ್ನು 3,18,52,802 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಸದ್ಯ ದೇಶದಲ್ಲಿ 3,59,775 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಗೆ ಹಾಗೂ ಹೋಮ್‌ ಐಸೋಲೇಷನ್‌ ಮೂಲಕ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : 4 ಕೋಟಿ ಕೊರೊನಾ ಲಸಿಕೆ ನೀಡಿದ ಕರ್ನಾಟಕ : ವಿಶ್ವದ ಅತೀ ದೊಡ್ಡ ಉಚಿತ ಲಸಿಕಾ ಅಭಿಯಾನ

ನಿನ್ನೆ ದೇಶದಾದ್ಯಂತ ಕೊರೊನಾ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಒಂದೇ ದಿನ 1,03,35,290 ಮಂದಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಈ ಮೂಲಕ ದೇಶದಲ್ಲಿ 62,29,89,134 ಮಂದಿಗೆ ಕೊರೊನಾ ಲಸಿಕೆಯನ್ನು ನೀಡುವ ಕಾರ್ಯವನ್ನು ಮಾಡಲಾಗಿದೆ.

ಇದನ್ನೂ ಓದಿ : No Vaccine No Ration : ಕೊರೊನಾ ಲಸಿಕೆ ಪಡೆಯದಿದ್ರೆ ಪಡಿತರ ಕಡಿತ : ಚರ್ಚೆ ಹುಟ್ಟು ಹಾಕಿದೆ ತಹಶೀಲ್ದಾರ್‌ ಆದೇಶ

Comments are closed.