ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ : ಇಂದು 6,150 ಮಂದಿಗೆ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ‌‌ ಮಹಾಸ್ಪೋಟ ಸಂಭವಿಸಿದೆ. ಒಂದೇ ದಿನ 6,150 ಸೋಂಕು ಪತ್ತೆಯಾಗಿದ್ದು, ಸಕ್ರೀಯ ಪ್ರಕರಣಗಳ 45,107 ಏರಿಕೆಯಾಗಿದೆ.

ಇಂದು 1,02,021 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಬೆಂಗಳೂರು, ಮೈಸೂರು, ಕಲಬುರಗಿ,ಬೀದರ್, ಮಂಡ್ಯ, ಹಾಸನ, ತುಮಕೂರಿನಲ್ಲಿ ಕೊರೊನಾ ಮಹಾಸ್ಪೋಟ ಸಂಭವಿಸಿದೆ.

ಮೈಸೂರು 237,  ಶಿವಮೊಗ್ಗ 49, ತುಮಕೂರು 157, ಉಡುಪಿ 57, ಉತ್ತರ ಕನ್ನಡ 66, ವಿಜಯಪುರ 22, ಯಾದಗಿರಿಯಲ್ಲಿ 16, ಬಾಗಲಕೋಟೆ 18, ಬಳ್ಳಾರಿ 87, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 4,266, ಬೀದರ್ 167, ಚಾಮರಾಜನಗರ 5, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 29, ಚಿತ್ರದುರ್ಗ 21, ದಕ್ಷಿಣ ಕನ್ನಡ 89, ದಾವಣಗೆರೆ 47, ಧಾರವಾಡ 43, ಗದಗ 12, ಹಾಸನ 110, ಹಾವೇರಿ 5, ಕಲಬುರಗಿ 561, ಕೊಡಗು 22, ಕೋಲಾರ 56, ಕೊಪ್ಪಳ 20, ಮಂಡ್ಯದಲ್ಲಿ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟು 45,107 ಸಕ್ರಿಯ ಪ್ರಕರಣಗಳಿದ್ದು, 351 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತರ ಸಂಖ್ಯೆ 10,26,584ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿಯೇ 26 ಜನರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 32,605 ಸಕ್ರಿಯ ಪ್ರಕರಣಗಳಿವೆ‌ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Comments are closed.