Jignesh Mevani :ದಲಿತ ನಾಯಕ ಜಿಗ್ನೇಶ್​ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ

ಗುಜರಾತ್​ : Jignesh Mevani : 2016ರಲ್ಲಿ ಗುಜರಾತ್​ ವಿಶ್ವ ವಿದ್ಯಾಲಯ ಸಮೀಪ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದಲಿತ ನಾಯಕ ಹಾಗೂ ಶಾಸಕ ಜಿಗ್ನೇಶ್​ ಮೇವಾನಿಗೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಸ್ಥಳೀಯ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದಲ್ಲಿ ಜಿಗ್ನೇಶ್​ ಮೇವಾನಿ ಜೊತೆಯಲ್ಲಿ ಇನ್ನೂ 18 ಮಂದಿಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.


ಗುಜರಾತ್​ನಲ್ಲಿ ಪಕ್ಷೇತರ ಶಾಸಕನಾಗಿರುವ ಜಿಗ್ನೇಶ್​ ಮೇವಾನಿ 2016ರಲ್ಲಿ ತಮ್ಮ ಬೆಂಬಲಿಗರ ಜೊತೆಯಲ್ಲಿ ಸೇರಿಕೊಂಡು ಗುಜರಾತ್​​ನ ವಿಶ್ವವಿದ್ಯಾಲಯದಲ್ಲಿರುವ ಲಾ ಭವನ್​ ಕಟ್ಟಡಕ್ಕೆ ಡಾ. ಬಿ ಆರ್​ ಅಂಬೇಡ್ಕರ್​ ಹೆಸರನ್ನು ಇಡಬೇಕೆಂದು ಆಗ್ರಗಿಸಿ ಗುಜರಾತ್​ನ ವಿಶ್ವ ವಿದ್ಯಾಲಯ ಸಮೀಪದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು ಈ ಪ್ರತಿಭಟನೆಯಲ್ಲಿ ಭಾಗಿಯಾದವರಿಗೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಸ್ಥಳೀಯ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 700 ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.


ಇದು ಮಾತ್ರವಲ್ಲದೇ ಶಾಸಕ ಜಿಗ್ನೇಶ್​ ಮೇವಾನಿ ಮೇ ತಿಂಗಳಲ್ಲಿ ಅನುಮತಿ ಪಡೆಯದೇ ಆಜಾದಿ ಮೆರವಣಿಗೆ ನಡೆಸಿದ್ದ ಒಂಬತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಮೆಹ್ಸನಾದ ಮ್ಯಾಜಿಸ್ಟ್ರೇಟ್​ ನ್ಯಾಯಾಲಯವು ಮೂರು ತಿಂಗಳು ಜೈಲು ಶಿಕ್ಷೆಯನ್ನು ನೀಡಿತ್ತು. ಇದಾದ ಬಳಿಕ ಇದೀಗ ಮತ್ತೆ ಜಿಗ್ನೇಶ್​ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.


ಜಿಗ್ನೇಶ್​ ಮೇವಾನಿ ನೇತೃತ್ವದ ರಾಷ್ಟ್ರೀಯ ದಲಿತ್​ ಅಧಿಕಾರ್ ಮಂಚ್​ನ ಕೆಲವು ಸದಸ್ಯರು ಹಾಗೂ ಎನ್​ಸಿಪಿ ಪದಾಧಿಕಾರಿ ರಷ್ಮಾ ಪಟೇಲ್​​ ಸೇರಿದಂತೆ ಹತ್ತು ಮಂದಿ 2017ರ ಜುಲೈ ತಿಂಗಳಲ್ಲಿ ಭಾರತೀಯ ದಂಡ ಸಂಹಿತೆ 143ರ ಅಡಿಯಲ್ಲಿ ಅಕ್ರಮ ಕೂಡುವಿಕೆ ನಡೆಸಿದ್ದ ಪ್ರಕರಣದಲ್ಲಿ ದೋಷಿ ಎಂದು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಜೆಎ ಪರ್ಮಾರ್​ ಆದೇಶ ನೀಡಿದ್ದರು. ಆದರೆ ಈ ಪ್ರಕರಣ ಸಂಬಂಧ ಅರ್ಜಿ ಹೈಕೋರ್ಟ್​ ಮೆಟ್ಟಿಲೇರಿದೆ. ಹೀಗಾಗಿ ಜಿಗ್ನೇಶ್​ ಮೇವಾನಿ ದೋಷಿ ಎಂದು ನೀಡಲಾಗಿದ್ದ ತೀರ್ಪನ್ನು ತಡೆ ಹಿಡಿಯಲಾಗಿದೆ.

ಇದನ್ನು ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : Ipl 2023: ಪಂಜಾಬ್​ ಕಿಂಗ್ಸ್​ ಮುಖ್ಯ ಕೋಚ್​ ಸ್ಥಾನದಿಂದ ಅನಿಲ್​ ಕುಂಬ್ಳೆ ಔಟ್​ : ಟ್ರೆವೋರ್​ ಬೇಲಿಸ್​ ಇನ್​

Dalit leader Jignesh Mevani sentenced to six months in jail

Comments are closed.