Pollution Lockdown: ದೆಹಲಿಯಲ್ಲಿ ಲಾಕ್‌ಡೌನ್‌ : ಆನ್‌ಲೈನ್‌ ಕ್ಲಾಸ್‌, ವರ್ಕ್‌ಫ್ರಂ ಹೋಮ್‌

ದೆಹಲಿ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಿತ್ತು. ಆದ್ರೀಗ ದೆಹಲಿಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್‌ (Pollution Lockdown) ಜಾರಿ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ಆನ್‌ಲೈನ್‌ ತರಗತಿ ನಡೆಸಲು ಸೂಚಿಸಲಾಗಿದ್ದು, ಖಾಸಗಿ ಕಚೇರಿ ಸಿಬ್ಬಂದಿ ವರ್ಕ್‌ ಫ್ರಂ ಹೋಂ ಕೈಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಅಷ್ಟಕ್ಕೂ ದೆಹಲಿಯಲ್ಲಿ ಈ ಬಾರಿ ಲಾಕ್‌ಡೌನ್‌ ಹೇರಿಕೆಯಾಗುತ್ತಿರೋದು ಕೊರೊನಾ ಕಾರಣಕ್ಕಾಗಿ ಅಲ್ಲ, ಬದಲಾಗಿ ವಾಯುಮಾಲಿನ್ಯದಿಂದಾಗಿ.

ಭಾನುವಾರದಿಂದಲೇ ದೆಹಲಿಯಲ್ಲಿ ಲಾಕ್‌ಡೌನ್‌ ( Pollution Lockdown) ಜಾರಿ ಮಾಡಲಾಗುತ್ತಿದೆ. ಸದ್ಯಕ್ಕೆ ಒಂದು ವಾರದ ಮಟ್ಟಿಗೆ ಕಠಿಣ ನಿಯಮ ಜಾರಿ ಮಾಡಲಾಗಿದೆ. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಮಾಡಲು ಚಿಂತನೆ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ವಿ.ರಮಣ ನೇತೃತ್ವದ ತ್ರಿ ಸದಸ್ಯ ಪೀಠ ವಾಯು ಮಾಲಿನ್ಯದ ಪ್ರಮಾಣಕ್ಕೆ ಕಳವಳ ವ್ಯಕ್ತಪಡಿಸಿತ್ತು. ಮಾಲಿನ್ಯ ನಿಯಂತ್ರಣದ ಕುರಿತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ರೈತರು ಗೋಧಿ ಬೆಳೆ ಕಟಾವು ಸುಡುತ್ತಿದ್ದು, ಮಾಲಿನ್ಯಕ್ಕೆ ಕಾರಣವೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಆದರೆ ಪ್ರತೀ ಬಾರಿಯೂ ಮಾಲಿನ್ಯ ಏರಿಕೆಯಾದಾಗ ರೈತರನ್ನೇ ಟಾರ್ಗೇಟ್‌ ಮಾಡುವುದು ಸರಿಯಲ್ಲ ಎಂದು ರೈತ ಸಂಘಟನೆಗಳು ಹೇಳಿವೆ. ಒಟ್ಟಿನಲ್ಲಿ ದೆಹಲಿ ಮಾಲಿನ್ಯದಿಂದಾಗಿ ತತ್ತರಿಸಿ ಹೋಗಿದೆ.

ಇದನ್ನೂ ಓದಿ : ನ.19 ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ : 600 ವರ್ಷಗಳ ಬಳಿಕ ಸುದೀರ್ಘ ಗ್ರಹಣ

ಇದನ್ನೂ ಓದಿ : Puneeth Eye : ಸಾವಿನಲ್ಲೂ ಸಾರ್ಥಕತೆ : 10 ಅಂಧರ ಬಾಳಿಗೆ ಬೆಳಕಾಗಲಿದೆ ಅಪ್ಪು ಕಣ್ಣು

(Delhi Air Pollutions lockdown school online class government and private office work from home)

Comments are closed.