Inflammatory Diet : ಚಳಿಗಾಲದಲ್ಲಿ ಉಂಟಾಗುವ ಉರಿಯೂತವನ್ನು ಹೆಚ್ಚಿಸುವ 5 ಆಹಾರಗಳು

ಚಳಿ ತನ್ನ ಪ್ರಕೋಪವನ್ನು ತೋರಿಸುತ್ತಿದೆ. ಹಲವರು ಶೀತ, ಕಫ, ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಜನರು ಬೆಚ್ಚಗಿರುವ ಸಲುವಾಗಿ ಹರ ಸಾಹಸ ಪಡುತ್ತಿದ್ದಾರೆ. ಆದರೂ ಕೆಲವು ದೀರ್ಘಕಾಲದ ಸಮಸ್ಯೆಗಳು ಪ್ರತಿಕೂಲ ಪರಿಸ್ಥಿತಿಯನ್ನು ತರುತ್ತಿದೆ. ಇದಕ್ಕೆ ಕೆಲವು ಆಹಾರಗಳೂ ಸೇರಿವೆ. ಅವುಗಳ ಸೇವನೆಯಿಂದ ಸಮಸ್ಯೆ ಉಲ್ಭಣಗೊಳ್ಳುತ್ತದೆ. ಹಾಗೆ ಕೆಲವು ಆಹಾರಗಳ ಸೇವನೆಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ (Inflammatory Diet). ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌, ಕರಿದ ಪದಾರ್ಥಗಳು, ಆಲ್ಕೋಹಾಲ್‌ಗಳ ಸೇವನೆಯು ತೀವ್ರತರವಾದ ಉರಿಯೂತಕ್ಕೆ ಕಾರಣವಾಗುತ್ತದೆ. ಉರಿಯೂತವನ್ನು ನೈಸರ್ಗಿಕ ಆಹಾರದಿಂದಲೇ ಕಡಿಮೆ ಮಾಡಿಕೊಳ್ಳಬಹುದು. ಋತುಮಾನದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ. ಆಹಾರಗಳು ಉರಿಯೂತವನ್ನು ಉಂಟುಮಾಡುತ್ತಿದ್ದರೆ ಇಲ್ಲಿ ಹೇಳಿರುವ ಆಹಾರ ಪದ್ಧತಿಯು ಪ್ರಯೋಜನಕಾರಿಯಾಗಿದೆ.

ದೀರ್ಘಕಾಲದ ಕಾಯಿಲೆ ಮತ್ತು ಉರಿಯೂತವನ್ನು ಹೆಚ್ಚಿಸುವ ಆಹಾರಗಳು:

ಸಂಸ್ಕರಿಸಿದ ಆಹಾರಗಳು :
ಫ್ರೈಸ್, ಚೀಸೀ ಸ್ಟಿಕ್‌ಗಳು, ಬರ್ಗರ್‌ಗಳು ಮತ್ತು ರೋಲ್‌ಗಳು ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಹೆಚ್ಚಿನ ಹುರಿದ ಆಹಾರಗಳು ಇತರ ಆಹಾರಗಳಿಗಿಂತ ದೇಹದಲ್ಲಿ ಹೆಚ್ಚಿನ ಉರಿಯೂತವನ್ನು ಉಂಟುಮಾಡುತ್ತದೆ. ಆದಷ್ಟು ಇವುಗಳ ಸೇವನೆಯನ್ನು ನಿಲ್ಲಿಸುವುದರಿಂದ ಉರಿಯೂತ ಸಮಸ್ಯೆಯಿಂದ ಕಾಪಾಡಿಕೊಳ್ಳಬಹುದು.

ಸಕ್ಕರೆ:
ನಾವು ಆಹಾರದಲ್ಲಿ ಸಕ್ಕರೆಯನ್ನು ಮಿತಿವಾಗಿ ಬಳಸಬೇಕು ಅಥವಾ ಸಕ್ಕರೆ ತಿನ್ನವುದನ್ನು ಬಿಡಬೇಕು. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ಫ್ರಕ್ಟೋಸ್‌ ನಮ್ಮನ್ನು ಸುರಕ್ಷಿಸಿದರೂ, ಅಧಿಕ ಪ್ರಮಾಣದಲ್ಲಿ ಸೇರಿಸಿದ ಸಕ್ಕರೆಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಆಲ್ಕೋಹಾಲ್:
ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಅಂಗಗಳಿಗೆ ಹಾನಿಯಾಗುತ್ತದೆ. ಮತ್ತು ಇದು ದೇಹದಾದ್ಯಂತ ಉರಿಯೂತವನ್ನು ಉಂಟುಮಾಡುತ್ತದೆ.

ಉಪ್ಪು:
ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿದ್ದರೆ ಅವರು ಹೆಚ್ಚು ಉಪ್ಪನ್ನು ಸೇವಿಸಿದಾಗ ಅವರ ಉರಿಯೂತದ ಪ್ರತಿಕ್ರಿಯೆಯು ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಉಪ್ಪನ್ನೂ ಸಹ ಮಿತವಾಗಿ ತಿನ್ನಿ. ಅವಶ್ಯಕತೆ ಇದ್ದರೆ ಮಾತ್ರ ಉಪ್ಪನ್ನು ಸೇವಿಸಿ.

ಕೆಂಪು ಮಾಂಸ (Red Meat) :
ಕೆಂಪು ಮಾಂಸವು ಹೃದಯದ ಸಮಸ್ಯೆಗಳು, ಅಧಿಕ ಕೊಲೆಸ್ಟ್ರಾಲ್ ಮತ್ತು ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಉರಿಯೂತಕ್ಕೂ ಮತ್ತು ಅವುಗಳಿಗೂ ಪರಸ್ಪರ ಸಂಬಂಧವಿದೆ.

ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಉರಿಯೂತ ಸಮಸ್ಯೆಯಿಂದ ಹೊರಬರಲು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಜೊತೆಗೆ ಪೋಷಕಾಂಶಭರಿತ ಆಹಾರ ಸೇವಿಸಿ.

ಇದನ್ನೂ ಓದಿ : Makar Sankranti 2023 : ಮಕರ ಸಂಕ್ರಾಂತಿ 2023; ದಿನ ಮತ್ತು ಆಚರಣೆ

ಇದನ್ನೂ ಓದಿ : Peanut Health Benefits : ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

(Inflammatory Diet, must avoid these 5 foods to prevent swelling and redness in winter)

Comments are closed.