ದುಬೈ-ಬೌಂಡ್ ಫೆಡ್ಎಕ್ಸ್ ವಿಮಾನ‌ಕ್ಕೆ ಹಕ್ಕಿ ಢಿಕ್ಕಿ : ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ನವದೆಹಲಿ : (Dubai-bound FedEx flight) ದುಬೈಗೆ ತೆರಳುತ್ತಿದ್ದ ಫೆಡ್‌ಎಕ್ಸ್‌ ವಿಮಾನವೊಂದಕ್ಕೆ ಹಕ್ಕಿ ಢಿಕ್ಕಿಯಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಫೆಡ್ಎಕ್ಸ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಗೆ ತೆರಳುತ್ತಿದ್ದ ಫೆಡ್‌ ಎಕ್ಸ್‌ ವಿಮಾನ ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಆದ್ದರಿಂದ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಲಿಯರೆನ್ಸ್ ಮಾಡುವ ಮೊದಲು ತಂತ್ರಜ್ಞರು ಯಾವುದೇ ತಾಂತ್ರಿಕ ದೋಷಕ್ಕಾಗಿ ವಿಮಾನವನ್ನು ಪರಿಶೀಲಿಸಬಹುದು.

ಒಂದು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, ಪುಣೆಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನವನ್ನು ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಭುವನೇಶ್ವರದ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ.

ಫೆಬ್ರವರಿಯಲ್ಲಿ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಸೂರತ್‌ನಿಂದ ದೆಹಲಿಗೆ ಇಂಡಿಗೋ ವಿಮಾನವು ಟೇಕ್‌ಆಫ್ ಸಮಯದಲ್ಲಿ ಹಕ್ಕಿ ಹೊಡೆದಿದ್ದರಿಂದ ಅದನ್ನು ಅಹಮದಾಬಾದ್‌ನಲ್ಲಿ ಭೂಸ್ಪರ್ಶ ಮಾಡಲಾಯಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅಹಮದಾಬಾದ್‌ನಿಂದ ದೆಹಲಿಗೆ ಹಾರುತ್ತಿದ್ದ ಆಕಾಶ ಏರ್ ವಿಮಾನವು ಹಕ್ಕಿಗೆ ಢಿಕ್ಕಿ ಹೊಡೆದಾಗ ಮತ್ತೊಂದು ಘಟನೆ ಸಂಭವಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಪ್ರಕಾರ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 1,900 ಅಡಿ ಎತ್ತರದಲ್ಲಿ ಹಕ್ಕಿ ಹೊಡೆದ ಪರಿಣಾಮವಾಗಿ ರೇಡೋಮ್ ಹಾನಿಗೊಳಗಾಗಿದೆ.

ಇದನ್ನೂ ಓದಿ : ಸಿನಿಮಾ ರೇಟಿಂಗ್‌ ಲಿಂಕ್‌ ಕ್ಲಿಕ್‌ ಮಾಡಿ 1.12 ಕೋಟಿ ರೂ. ಕಳೆದುಕೊಂಡ ದಂಪತಿ

ಇದನ್ನೂ ಓದಿ : Fire incident in market: ಸಂಜಯ್‌ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ : ಹಲವು ಅಂಗಡಿಗಳು ಬೆಂಕಿಗಾಹುತಿ

Dubai-bound FedEx flight: Bird strikes Dubai-bound FedEx flight: Emergency declared at Delhi airport

Comments are closed.