Earthquakes : ಅಸ್ಸಾಂ, ಮಣಿಪುರ, ಮೇಘಾಲಯದಲ್ಲಿ ಲಘು ಭೂಕಂಪ

ನವದೆಹಲಿ : ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ 4.1 ತೀವ್ರತೆ, ಮೇಘಾಲಯದ ಮಣಿಪುರದ ಚಾಂಡೆಲ್ ಮತ್ತು ಪಶ್ಚಿಮ ಖಾಸಿ ಬೆಟ್ಟಗಳಲ್ಲಿ 3.0 ಮತ್ತು 2.6 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಎನ್‌ಸಿಎಸ್ (ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ) ತಿಳಿಸಿದೆ. ಮುಂಜಾನೆ 2 ಗಂಟೆ 4 ನಿಮಿಷದ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಅಸ್ಸಾಂನ ಸೋನಿತ್ ಪುರದಲ್ಲಿ ಕಳೆದ ಮೂರು ದಿನಗಳಿಂದಲೂ ಭೂಕಂಪನ ದಾಖಲಾಗುತ್ತಿದೆ. ಆದ್ರೆ ಮೂರು ದಿನಗಳ ಕಾಲವೂ ಲಘು ಭೂಕಂಪನ ಸಂಭವಿಸಿದೆ. ಆದ್ರೆ ಮಣಿಪುರದ ಚಾಂಡೆಲ್ ಪ್ರದೇಶದಲ್ಲಿ ಪ್ರಬಲ ಭೂಕಂಪನ ವರದಿಯಾಗಿದೆ. ಈ ಹಿಂದೆ, ಮೇ 23 ರಂದು ಉಕ್ರುಲ್‌ನಲ್ಲಿ 109 ಕಿಲೋಮೀಟರ್ ಆಳದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ.

ನಿರಂತರವಾಗಿ ಭೂಕಂಪನ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಜನರು ಮನೆಯ ಒಳಗೆ ಸುರಕ್ಷಿತವಾಗಿರುವಂತೆ ಸೂಚನೆಯನ್ನು ನೀಡಿದೆ. ಅಲ್ಲದೇ ಭೂಕಂಪನ ಸಾಧ್ಯತೆಯಿರುವ ಪ್ರದೇಶದಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ.

Comments are closed.