How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?

ಭೂಮಿ (Earth) ಮೇಲೆ ನಾವು ತಟಸ್ಥವಾಗಿ ನಿಂತಿದ್ದೇವೆ ಎಂದು ನಿಮಗೆ ಅನಿಸಿರಬಹುದು. ಹಾಗಿದ್ರೆ ಅದು ಕೇವಲ ಭ್ರಮೆ. ನಾವು ಸಂಚರಿಸುತ್ತಾ ಇರುತ್ತೇವೆ. ಯಾಕೆಂದರೆ, ಭೂಮಿ ಸೂರ್ಯನ ಸುತ್ತ ಸುತ್ತುತ್ತಾ ಇರುತ್ತದೆ. ಅಷ್ಟೇ ಅಲ್ಲ ಬಾಸ್ಕೆಟ್ ಬಾಲ್ ಹಿಡಿದು ಬೆರಳಲ್ಲಿ ತಿರುಗಿಸುವಂತೆ ಭೂಮಿಯು ತನ್ನ ಭ್ರಮಣ ಪಥದಲ್ಲಿ ಸುತ್ತುತ್ತ ಇರುತ್ತದೆ (Earth Spins on its axis).

ಭೂಮಿ ತನ್ನದೇ ಪಥದಲ್ಲಿ ಸುತ್ತುವುದರಿಂದ ಹಗಲು ರಾತ್ರಿ ಉಂಟಾಗುತ್ತದೆ. ಹೀಗೆ ಸುತ್ತುವುದಕ್ಕೆ ಭೂಮಿಗೆ 24 ಗಂಟೆಗಳು ಬೇಕಾಗುತ್ತದೆ. ಇನ್ನು ಸರಿಯಾಗಿ ಹೇಳಿದರೆ, 23 ಗಂಟೆ, 56 ನಿಮಿಷ ಹಾಗೂ 4 ಸೆಕೆಂಡ್. ಸೂರ್ಯನ ಸುತ್ತ ಭೂಮಿ 24898 ಮೈಲುಗಳನ್ನು ( 40070 ಕಿಮಿ) ಸುತ್ತುತ್ತದೆ. ಅಂದರೆ ಗಂಟೆಗೆ ಸುಮಾರು1670 ಕಿಮಿ ವೇಗವಾಗಿದೆ. ಈಗಾಗಲೇ ಮಿಲ್ಕಿ ವೇ, ಭೂಮಿ, ಸೋಲಾರ್ ಸಿಸ್ಟಮ್ ಹಾಗೂ ಗ್ರಹಗಳ ಕುರಿತು ಈಗಾಗಲೇ ಸಾಕಷ್ಟು ಥಿಯರಿಗಳು (Theory) ಬಂದಿವೆ. ಅವೆಲ್ಲವನ್ನೂ ಓದಿದರೆ ಅಚ್ಚರಿ ಅನಿಸುತ್ತದೆ.

ಭೂಮಿಯ ವೇಗ ಎಷ್ಟು?
ಸ್ಪೇಸ್. ಕಾಮ್ ಪ್ರಕಾರ ಸೂರ್ಯನ ಸುತ್ತಲಿನ 40070 ಕಿಲೋಮೀಟರ್ ಸಂಚರಿಸಲು ಭೂಮಿಗೆ 24 ಗಂಟೆ ತಗುಲುತ್ತದೆ. ಅಂದರೆ , 1670 ಕಿಮಿ/ಗಂಟೆ ಎಂದರ್ಥ.
ಭೂಮಿಯ ಸುತ್ತುವಿಕೆಯ ವೇಗವು ತ್ರಿಕೋನ ಮಿತಿ ಫಾರ್ಮುಲಾ ಬಳಸಿ ಲೆಕ್ಕ ಹಾಕಲಾಗುತ್ತದೆ.

ಭೂಮಿ ಸೂರ್ಯನ ಸುತ್ತ ಸುತ್ತುವ ವೇಗ ಎಷ್ಟು ಗೊತ್ತಾ?
ಭೂಮಿಯು ಸೂರ್ಯನ ಸುತ್ತ ಸುತ್ತುವ ವೇಗವನ್ನು ಕೆಪ್ಲರ್ ಫಾರ್ಮುಲಾ ಬಳಸಿ ಅಳೆಯಲಾಗುತ್ತದೆ. ಈತನ ಪ್ರಕಾರ ಎಲ್ಲ ಗ್ರಹಗಳೂ ಒಂದೇ ಶೇಪ್ ಹೊಂದಿದೆ. ವಾಸ್ತವವಾಗಿ ಇದು ಸುಳ್ಳು. ಪ್ರತಿಯೊಂದು ಗ್ರಹವೂ ವಿಭಿನ್ನ ಆಕಾರ ಹೊಂದಿದೆ. ಪ್ರತಿ ಗ್ರಹದ ಆಕಾರವನ್ನು ಎಸೆಂಟ್ರಿಸಿಟಿ ಬಳಸಿ ಅಳೆಯಲಾಗುತ್ತದೆ. ಈ ಎಸೆಂಟ್ರಿಸಿಟಿ 0ಯಿಂದ 1ರವರೆಗೆ ಆಗಿದೆ. ಸೊನ್ನೆ ಆದರೆ ಅದು ಪರ್ಫೆಕ್ಟ್ ಸರ್ಕಲ್ ಆಗಿದೆ ಎಂದರ್ಥ. 1 ಇದ್ದರೆ ಫ್ಲ್ಯಾಟ್ ಆಗಿದೆ ಎಂದು ಅರ್ಥ. ಭೂಮಿಯು ಭೂಮಿಯ ಸುತ್ತ ಸುತ್ತಲು ಅಂದಾಜು 365 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ಲಾನೆಟರಿ ಸ್ಪೀಡ್ ಲೆಕ್ಕ ಹಾಕಲು ಭೂಮಿ ಹಾಗೂ ಸೂರ್ಯನ ನಡುವಿನ ಅಂತರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ

(How fast is Earth Moving around the sun?)

Comments are closed.