Diabetes Drug Sitagliptin :ದೇಶದ ಜನತೆಗೆ ಗುಡ್​ ನ್ಯೂಸ್​ : ಜನೌಷಧಿ ಕೇಂದ್ರಗಳಲ್ಲಿ 60 ರೂಪಾಯಿಗೆ ಮಧುಮೇಹ ಔಷಧಿ

ದೆಹಲಿ : Diabetes Drug Sitagliptin : ದೇಶದ ಜನತೆಗೆ ವೈದ್ಯಕೀಯ ಸೌಲಭ್ಯಗಳು ಕೈಗೆಟಕುವ ದರದಲ್ಲಿ ಸಿಗಬೇಕು ಎಂದು ಕೇಂದ್ರ ಸರ್ಕಾರವು ಒಂದಿಲ್ಲೊಂದು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಲೇ ಇದೆ. ಇದರಲ್ಲಿ ಮುಖ್ಯವಾಗಿ ಆಯುಷ್ಮಾನ್​ ಭಾರತ್​, ಜನೌಷಧಿ ಕೇಂದ್ರ ಹಾಗೂ ಇತ್ತೀಚಿಗೆ ಜಾರಿಗೆ ಬಂದಿರುವ ಆಭಾ ಕಾರ್ಡ್ ಸಾಕಷ್ಟು ಪ್ರಯೋಜನಗಳನ್ನು ಕೇಂದ್ರ ಸರ್ಕಾರವು ಜನತೆಗೆ ನೀಡುತ್ತಿದೆ. ಇದೀಗ ಕೇಂದ್ರ ಸರ್ಕಾರವು ಟೈಪ್​ 2 ಡಯಾಬಿಟಿಸ್​ ಮೆಲ್ಲಿಟಸ್​ನಿಂದ ಬಳಲುತ್ತಿರುವ ರೋಗಿಗಳಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಲು ನೀಡಲಾಗುವ ಸಿಟಾಗ್ಲಿಪ್ಟಿನ್​​​ ಎಂಬ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ಭಾರತೀಯ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಸಂಸ್ಥೆಯು ಈ ಔಷಧವನ್ನು ಬಿಡುಗಡೆ ಮಾಡಿದೆ. ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಕೇವಲ ಅರವತ್ತು ರೂಪಾಯಿ ಮೌಲ್ಯಕ್ಕೆ 10 ಮಾತ್ರೆಗಳು ಸಿಗಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಈ ಮಾತ್ರೆಗಳು 50 ಎಂಜಿ ಹಾಗೂ 100 ಎಂಜಿ ಡೋಸ್​ಗಳಲ್ಲಿ ಲಭ್ಯ ಇರಲಿವೆ. 50 ಎಂಜಿ ಮಾತ್ರೆ ದರ ಅರವತ್ತು ರೂಪಾಯಿ ಆದರೆ 100 ಎಂಜಿ ಮಾತ್ರೆ ದರ ನೂರು ರೂಪಾಯಿ ಇರಲಿದೆ.
ಇದೇ ಮಾತ್ರೆಗಳು ಮಾರುಕಟ್ಟೆಯಲ್ಲಿ 258 ರೂಪಾಯಿಗಳನ್ನು ಹೊಂದಿದೆ. ಆದರೆ ಜನೌಷಧಿ ಕೇಂದ್ರದಲ್ಲಿ 10 ಮಾತ್ರೆಗಳನ್ನು ಹೊಂದಿರುವ ಒಂದು ಪ್ಯಾಕ್​ ಶೇಕಡಾ 60 ರೂಪಾಯಿ ರಿಯಾಯಿತಿಯಲ್ಲಿ ಸಾಮಾನ್ಯ ಜನತೆಯನ್ನು ತಲುಪಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ.


ದೇಶದಲ್ಲಿ ಪ್ರತಿ ವರ್ಷ 680 ಕೋಟಿ ರೂಪಾಯಿ ವಹಿವಾಟನ್ನು ಈ ಜನೌಷಧಿ ಕೇಂದ್ರಗಳು ನಡೆಸುತ್ತವೆ. ಕರ್ನಾಟಕದಲ್ಲಿ 850ಕ್ಕೂ ಅಧಿಕ ಜನೌಷಧಿ ಕೇಂದ್ರಗಳಿದ್ದು ದೇಶದ ಒಟ್ಟು ಆದಾಯದಲ್ಲಿ 20 ಪ್ರತಿಶತ ಪಾಲನ್ನು ಹೊಂದಿದೆ. ಜನೌಷಧಿ ಕೇಂದ್ರಗಳಲ್ಲಿ ಅಧಿಕ ರಕ್ತದೊತ್ತಡ, ನೋವಿನ ಆಯಿಂಟ್​ಮೆಂಟ್​​ಗಳು ಹಾಗೂ ಮಧುಮೇಹ ಮಾತ್ರೆಗಳಿಗೆ ಅತಿಯಾದ ಬೇಡಿಕೆಯಿದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ಮಾತ್ರೆ ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದು ಬಡ ಜನತೆಗೆ ಸಮಸ್ಯೆಯಾಗಿದೆ.

ಇದನ್ನು ಓದಿ :56inch Modi Ji Thali : ಮೋದಿ ಬರ್ತಡೇಗೆ ಬನ್ನಿ: ಊಟ ಮಾಡಿ 8.5 ಲಕ್ಷ ಬಹುಮಾನ ಗೆಲ್ಲಿ….!

ಇದನ್ನೂ ಓದಿ : Narendra Modi Turns 72 : ಪ್ರಧಾನಿ ಮೋದಿಯವರ 5 ಆರೋಗ್ಯಕರ ಜೀವನಶೈಲಿ ಪದ್ಧತಿಗಳು

Government Launched Diabetes Drug Sitagliptin Its Combinations At Rs 60 Per Pack Sold At Generic Pharmacy Janaushadhi Kendras

Comments are closed.