Narendra Modi Turns 72 : ಪ್ರಧಾನಿ ಮೋದಿಯವರ 5 ಆರೋಗ್ಯಕರ ಜೀವನಶೈಲಿ ಪದ್ಧತಿಗಳು

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ (Largest Democracy) ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ (PM Modi) ಯವರ ಕೆಲಸ ಅತ್ಯಂತ ಕಠಿಣ ಮತ್ತು ಅಷ್ಟೇ ಕ್ಲಿಷ್ಟಕರ. ಎಂಟು ವರ್ಷಗಳಿಗಿಂತಲೂ ಹೆಚ್ಚು ಕಾಲ ಒತ್ತಡವನ್ನು ನಿಭಾಯಿಸುತ್ತಾ ಬಂದಿರುವ ಪ್ರಧಾನಿ ಮೋದಿಯವರು (Narendra Modi Turns 72 ) ಇಂದು ಅಂದರೆ ಸೆಪ್ಟೆಂಬರ್‌ 17, 2022 ಕ್ಕೆ 72 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಸುದೀರ್ಘ 72 ವಸಂತಗಳ ಕಾಲ ತಮ್ಮ ಆರೋಗ್ಯ ಕಾಪಾಡಿಕೊಂಡು ಬಂದಿರುವ ಮೋದಿಯವರದು ಆರೋಗ್ಯಕರ ಜೀವನಶೈಲಿ ಅಭ್ಯಾಸ (Healthy Lifestyle Habits). ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸಹಾಯ ಮಾಡುವ ಅವರ ಆರೋಗ್ಯಕರ ಜೀವನಶೈಲಿ ಅಭ್ಯಾಗಳು ಇಲ್ಲಿದೆ.

ಬೆಳಗಿನ ವ್ಯಾಯಾಮ:
ನಾನು ಉಸಿರಾಟದ ವ್ಯಾಯಾಮ ಮಾಡುತ್ತೇನೆ ಮತ್ತು ಪ್ರಕೃತಿಯ 5 ಅಂಶಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದಿಂದ ಪ್ರೇರಿತವಾದ ಪಥದಲ್ಲಿ ನಡೆಯುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ತಮ್ಮ ಒಂದು ವಿಡಿಯೋವನ್ನು ಹೀಗೆ ಟ್ವೀಟ್ ಮಾಡಿದ್ದರು. “ಯೋಗದ ಹೊರತಾಗಿ, ನಾನು ಪಂಚತತ್ವಗಳು ಅಥವಾ ಪ್ರಕೃತಿಯ 5 ಅಂಶಗಳಿಂದ ಪ್ರೇರಿತವಾದ ಪಥದಲ್ಲಿ ನಡೆಯುತ್ತೇನೆ – ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ. ಇದು ಅತ್ಯಂತ ಉಲ್ಲಾಸದಾಯಕ ಮತ್ತು ಪುನರ್ಯೌವನಗೊಳಿಸುತ್ತದೆ. ನಾನು ಉಸಿರಾಟದ ವ್ಯಾಯಾಮವನ್ನು ಸಹ ಅಭ್ಯಾಸ ಮಾಡುತ್ತೇನೆ” ಎಂದು ಅವರು 2018 ರಲ್ಲಿ ಟ್ವೀಟ್ ಮಾಡಿದ್ದರು.

ಯೋಗ :
ಪ್ರಧಾನಿ ಮೋದಿಯವರು ಯಾವಾಗಲೂ ಯೋಗಾಭ್ಯಾಸವನ್ನೇ ಶಕ್ತಿಯಿಂದ ನಂಬಿದ್ದಾರೆ. ಜನರು ಫಿಟ್‌ ಆಗಿರಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಪ್ರಧಾನಿ ಅವರು ತಾವು ಯೋಗದಿಂದಲೇ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿರುತ್ತಾರೆ. ಕೋವಿಡ್‌ ಸಂಕ್ರಾಮಿಕವು ಇಡೀ ಜಗತ್ತನ್ನು ಅಪ್ಪಳಿಸುತ್ತಿರುವ ಸಮಯದಲ್ಲಿ ಮೋದಿಯವರು ‘ ಹಲವು ವರ್ಷಗಳಿಂದ ಯೋಗಾಭ್ಯಾಸವನ್ನು ಮಾಡುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಾನು ಅದನ್ನು ಪ್ರಯೋಜನಕಾರಿ ಎಂದು ಕಂಡುಕೊಂಡಿದ್ದೇನೆ’ ಎಂದು ಹೇಳಿದ್ದರು. ‘ನನಗೆ ಸಮಯ ಸಿಕ್ಕಾಗಲೆಲ್ಲಾ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಯೋಗ ನಿದ್ರಾಭ್ಯಾಸವನ್ನು ಮಾಡುತ್ತೇನೆ’ ಎಂದು ಪ್ರಧಾನಿ ಹೇಳಿದ್ದರು.

ಆಯುರ್ವೇದದ ಪ್ರಬಲವಾದ ನಂಬಿಕೆ:
ಪ್ರಧಾನಿ ಮೋದಿ ಅವರು ಆಯುರ್ವೇದವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಜಗತ್ತು ಶೀಘ್ರದಲ್ಲೇ ಯೋಗದ ನಂತರ ಭಾರತದ ಪ್ರಾಚೀನ ಆಯುರ್ವೇದ ತತ್ವಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಿದ್ದರು. ಇದನ್ನು ವೈಜ್ಞಾನಿಕವಾಗಿ ಇತರ ದೇಶಗಳಿಗೆ ವಿವರಿಸುವಲ್ಲಿ ಯುವಕರು ಮುಂದಾಳತ್ವ ವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ : Desi Detox Drinks : ಈ ದೇಸಿ ಪಾನೀಯಗಳ ಬಗ್ಗೆ ಗೊತ್ತಾ; ಇವು ಹಬ್ಬದ ನಂತರ ಕಾಡುವ ಅಜೀರ್ಣ ಸಮಸ್ಯೆ ದೂರ ಮಾಡಬಲ್ಲದು

ಸಾಮಾನ್ಯ ಕಾಯಿಲೆಗಳಿಗೆ ಹಳೆಯ ಮನೆಮದ್ದುಗಳು :
ಸಂದರ್ಶನವೊಂದರಲ್ಲಿ, ಬಿಸಿನೀರು ಕುಡಿಯುವ ಮೂಲಕ ಮತ್ತು ಉಪವಾಸ ಕ್ರಮವನ್ನು ಆಚರಿಸುವ ಮೂಲಕ ಶೀತವನ್ನು ಗುಣಪಡಿಸಿಕೊಳ್ಳುವುದಾಗಿ ಪ್ರಧಾನಿ ಬಹಿರಂಗಪಡಿಸಿದರು. ಇದಲ್ಲದೆ, ಸಾಮಾನ್ಯ ಕಾಯಿಲೆಗಳಿಗೆ ಹಿಂದಿನ ಕಾಲದಿಂದ ಬಂದ ಮನೆಮದ್ದುಗಳನ್ನೇ ಅವಲಂಬಿಸುವಂತೆ ಪ್ರಧಾನಿಯವರು ದೇಶವಾಸಿಗಳನ್ನು ಪ್ರೋತ್ಸಾಹಿಸುತ್ತಾರೆ.

ಆರೋಗ್ಯಕರ ಉಪಹಾರ :
ಪಿಎಂ ಮೋದಿ ತಮ್ಮ ದಿನವನ್ನು ಆರೋಗ್ಯಕರ ಉಪಹಾರದೊಂದಿಗೆ ಪ್ರಾರಂಭಿಸುತ್ತಾರೆ. ಇದರಲ್ಲಿ ಹೆಚ್ಚಾಗಿ ಪೋಹಾ (ಅವಲಕ್ಕಿ) ಮತ್ತು ಶುಂಠಿ ಚಹಾ ಇರುತ್ತದೆ. ಪ್ರಧಾನಿ ಮೋದಿ ಕಟ್ಟುನಿಟ್ಟಾದ ಸಸ್ಯಾಹಾರಿ. ಆದ್ದರಿಂದ ಅವರ ಆಹಾರದಲ್ಲಿರುವುದು ಹಣ್ಣುಗಳು ಮತ್ತು ತರಕಾರಿಗಳು. ಅವರು ಹೆಚ್ಚಾಗಿ ಇಷ್ಟಪಡುವುದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮತ್ತು ಗುಜರಾತಿ ಅಡುಗೆಗಳನ್ನು. ಮೋದಿ ಅವರು ಅವಕಾಶ ಸಿಕ್ಕಾಗಲೆಲ್ಲಾ ಅವುಗಳನ್ನು ಸವಿಯುತ್ತಾರಂತೆ.

ಇದನ್ನೂ ಓದಿ : Iron Deficiency : 40 ರ ನಂತರ ಮಹಿಳೆಯರಲ್ಲಿ ಕಾಣಿಸುವ ಹಿಮೋಗ್ಲೋಬಿನ್‌ ಕೊರೆತೆಗೆ ಇದೇ ಕಾರಣ; ಅದನ್ನು ಸರಿಪಡಿಸಿಕೊಳ್ಳಲು ಹೀಗೆ ಮಾಡಿ

Narendra Modi Turns 72 healthy lifestyle habits

Comments are closed.