Colors Kannada Serial Kannadathi : ಸಾನಿಯಾ ಕೆಣುಕಿದ್ದರೂ ತಾಳ್ಮೆ ಕಳೆದುಕೊಳ್ಳುತ್ತಿಲ್ಲ ಭುವಿ

(Colors Kannada Serial Kannadathi)ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳು ಹೊಸ ಸಂಚಲನವನ್ನೆ ಮೂಡಿಸುತ್ತಿದೆ. ಅದರಲ್ಲೂ ಕನ್ನಡತಿ ಧಾರಾವಾಹಿಯಲ್ಲಿ ಬರುವ ಭುವನೇಶ್ವರಿ ಪಾತ್ರಧಾರಿ ನಿರಗಳವಾಗಿ ಕನ್ನಡವನ್ನು ಮಾಡುತ್ತಿರುವ ರೀತಿಯು ಕರ್ನಾಟಕದಾದ್ಯಂತ ಜನಮನ್ನಣೆಯನ್ನು ಪಡೆದುಕೊಂಡಿದೆ. ಭುವಿಗೆ ಮೊದಲಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಾಟವನ್ನು ಸಾನಿಯಾ ಕೊಡುತ್ತಾ ಬಂದಿರುತ್ತಾಳೆ. ಆದರೆ ಭುವಿ ತನ್ನ ತಾಳ್ಮೆಯಿಂದ ಎಲ್ಲಾವನ್ನು ನಿಭಾಯಿಸಿಕೊಂಡು ಬಂದಿದ್ದಾಳೆ.

(Colors Kannada Serial Kannadathi)ರತ್ನಮ್ಮಾ ತಮ್ಮ ವಿದ್ಯಾಸಂಸ್ಥೆಯಾದ ಮಾಲಾ ಸಂಸ್ಥೆಯ ವಾರ್ಷಿಕ ಸಭೆಯ ಜವಬ್ದಾರಿಯನ್ನು ತನ್ನ ಸೊಸೆ ಭುವಿಗೆ ವಹಿಸಿಕೊಡುತ್ತಾಳೆ. ಅದರಂತೆ ಭುವಿಯನ್ನು ಸಭೆಯನ್ನು ನಡೆಸುತ್ತಾಳೆ. ಆದರೆ ಇದನ್ನೂ ಮಾಲಾ ಸಂಸ್ಥೆಯ ಎಂಡಿ ಆಗಿರುವ ಸಾನಿಯಾ ಸಹಿಸುವುದಿಲ್ಲ. ಪ್ರತಿದಿನ ಒಂದಲ್ಲಾ ಒಂದು ಕೆಟ್ಟ ಪ್ಲಾನ್‌ಗಳನ್ನು ಮಾಡಿದರೂ ಯಾವುದು ಕೂಡ ಕಾರ್ಯರೂಪಕ್ಕೆ ಬರದೇ ವಿಫಲಗೊಳ್ಳುತ್ತಾಳೆ. ಇನ್ನೂ ಧಾರಾವಾಹಿಯಲ್ಲಿ ರತ್ನಮಾಲಾಳ ಮಗ ಹರ್ಷನನ್ನು ಭುವಿ ಮದುವೆಯಾಗಿ ಹಾಯಾಗಿ ಸಂಸಾರ ನಡೆಸುತ್ತಿರುತ್ತಾಳೆ. ರತ್ನಮ್ಮಾ ತಮ್ಮ ಸಂಪೂರ್ಣ ಆಸ್ತಿಯನ್ನು ಸೌಪರ್ಣಿಕ ಹೆಸರಲ್ಲಿ ಬರೆದಿರುವುದರಿಂದ ಅದು ಯಾರು ಎನ್ನುವ ಕುತೂಹಲ ಸಾನಿಯಾಗೆ ಮೊದಲಿನಿಂದಲೂ ಇದ್ದಿರುತ್ತದೆ. ಸಾನಿಯಾ ಸೌಪರ್ಣಿಕ ಯಾರು ಎಂದು ತಿಳಿಯುವುದಕ್ಕಾಗಿ ತುಂಬಾ ಪ್ರಯತ್ನವನ್ನು ಪಡುತ್ತಾಳೆ. ಆದರೆ ತನ್ನ ಎಲ್ಲಾ ಪ್ರಯತ್ನದಲ್ಲೂ ವಿಫಲಗೊಳ್ಳತ್ತದೆ. ಹರ್ಷ ಮತ್ತು ಭುವಿಯ ನಂತರ ಸೌಪರ್ಣಿಕ ಬೇರೆ ಯಾರು ಅಲ್ಲ ಭುವಿ ಎನ್ನುವುದು ತಿಳಿಯುತ್ತದೆ. ಹಾಗೆ ರತ್ನಮ್ಮ ತನ್ನೆಲ್ಲಾ ಜವಬ್ದಾರಿಯನ್ನು ಒಂದೊಂದಾಗಿ ಭುವಿಗೆ ಒಪ್ಪಿಸುತ್ತಾ ಬರುತ್ತಾಳೆ.

ರತ್ನಮ್ಮಾ ಕಳೆದ 25 ವರ್ಷಗಳಿಂದ ಮಾಲಾ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ತಪ್ಪದೇ ಭಾಗಿಯಾಗುತ್ತಿದ್ದಳು. ಈ ಬಾರಿಯ ಸಭೆಗೆ ತನ್ನ ಬದಲಿಗೆ ಸೊಸೆ ಭುವಿಯನ್ನು ಕಳುಹಿಸಿದ್ದಾಳೆ. ಭುವಿ ಕೂಡ ಸಭೆಯನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾಳೆ. ಎಂದಿನಂತೆ ಸಭೆಗೆ ರತ್ನಮ್ಮಾನ ಬದಲು ಭುವಿ ಹಾಜರಾಗಿದ್ದನ್ನು ನೋಡಿ ಸಾನಿಯಾ ಅಪಸ್ವರ ತೆಗೆಯುತ್ತಾಳೆ. ಆದರೆ ಸಾನಿಯಾ ಎಷ್ಟೇ ಕೆಣುಕಿದ್ದರೂ ಭುವಿ ಬಹಳ ತಾಳ್ಮೆಯಿಂದ ಸಭೆಯನ್ನು ನಡೆಸುತ್ತಾಳೆ. ಹಾಗೆ ಸಾನಿಯಾ ತಂದ ಒಂದು ಕಡತವನ್ನು ಗಮನಿಸಿದ ಭುವಿ ಅದನ್ನು ಪ್ರಶ್ನೆ ಮಾಡುತ್ತಾಳೆ. ಆಗ ಸಾನಿಯಾ ಅದನ್ನು ಅಡಗಿಸಲು ಪ್ರಯತ್ನ ಪಡುತ್ತಾಳೆ. ಭುವಿ ಸಭೆಯ ನಿಯಮದಂತೆ ಯಾವುದೇ ಕಡತವನ್ನು ಅನುಮೋದನೆ ಮಾಡಬೇಕಾದರೆ ಪರಿಶೀಲಿಸಬೇಕಾಗುತ್ತದೆ. ಯಾವುದೇ ಕಡತವನ್ನು ಪರಿಶೀಲಿಸದೇ ಅನುಮೋದನೆ ಅಂದರೆ ಮಂಜೂರು ಮಾಡಲು ಕಷ್ಟವಾಗುತ್ತದೆ ಎಂದು ಹೇಳುತ್ತಾಳೆ.

ಈ ಕಡತವನ್ನು ಅಡಗಿಸಿ ಇಡುವುದರ ಹಿಂದಿರುವ ಉದ್ದೇಶ ಶಾಲೆ ಕಟ್ಟಲು ಎಂದು ಇರಿಸಿದ ಜಾಗದಲ್ಲಿ ಸಾನಿಯಾ ಕ್ಲಬ್‌ ನಿರ್ಮಾಣ ಮಾಡಲು ಹೊರಟ್ಟಿದ್ದಾಳೆ. ಈ ವಾರ್ಷಿಕ ಸಭೆಯಲ್ಲಿ ಹೇಗಾದರೂ ಮಾಡಿ ಆ ಸ್ಥಳವನ್ನು ಕ್ಲಬ್‌ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಳ್ಳುವ ಉಪಾಯವನ್ನು ಮಾಡಿಕೊಂಡಿದ್ದಳು. ಆದರೆ ಭುವಿ ಆ ಫೈಲ್‌ನ್ನು ಗಮನಿಸಿದ್ದರಿಂದ ಅದರಲ್ಲಿ ಇರುವ ವಿಚಾರವನ್ನು ತಿಳಿದು ಶಾಕ್‌ ಆಗುತ್ತಾಳೆ. ಹಾಗೆ ಇದನ್ನು ರತ್ನಮಾಲಾ ಸಹಿ ಇಲ್ಲದೇ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಭುವಿ ಜೋರಾಗಿ ಹೇಳಿದ್ದರಿಂದ ಸಾನಿಯಾ ಸೈಲೆಂಟ್‌ ಆಗುತ್ತಾಳೆ. ಹಾಗೆ ಭುವಿ ಆ ಪೈಲ್‌ನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾಳೆ. ಸಾನಿಯಾಗೆ ಈ ಉಪಾಯ ಕೂಡ ವಿಫಲಗೊಂಡಿರುದಕ್ಕೆ ಭುವಿ ಮೇಲೆ ಇನ್ನಷ್ಟು ಕೋಪಗೊಳ್ಳುತ್ತಾಳೆ.

ಇದನ್ನೂ ಓದಿ : Colors Kannada Serial Kannadathi : ಕನ್ನಡತಿ : ಸಂಸ್ಥೆಯ ಜವಾಬ್ದಾರಿ ಭುವಿಯ ಹೆಗಲೇರಿಸಿದ ರತ್ನಮ್ಮಾ

ಇದನ್ನೂ ಓದಿ : Kannadathi Serial : ಗಟ್ಟಿ ತರ್ಕ, ನ್ಯೂಸ್‌ ರಿಪೋಟರ್‌ ಹುನ್ನಾರಕ್ಕೆ ತಣ್ಣೀರೆರಚಿದ ಭುವಿ

ಇತ್ತಕಡೆ ರತ್ನಮಾಲಾ ತೀವ್ರ ಅನಾರೋಗದಿಂದ ಚಿಕಿತ್ಸೆಗೆಂದು ಅಮೇರಿಕಕ್ಕೆ ಹೋಗಿ ಬಂದರು ಚಿಕಿತ್ಸೆ ಅಷ್ಟೇನೂ ಪರಿಣಾಮಾವಾಗಿಲ್ಲ. ಮರಳಿ ಬಂದ ಮೇಲೆ ಮರೆವಿನ ಕಾಯಿಲೆ ಕೂಡ ಪ್ರಾರಂಭವಾಯಿತು. ಅದು ಸಾಲದು ಎನ್ನುವಂತೆ ವೈರೆಸ್‌ ದಾಳಿ ಕೂಡ ಅವರ ದೇಹದ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾಗಿ ರತ್ನಮ್ಮನ್ನು ತಪಾಸಣೆಗೊಳಿಸಿದ ವೈದ್ಯರು ಕೂಡ ಮುಂದೆ ಆರೋಗ್ಯದ ಸಮಸ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ರತ್ನಮ್ಮಾ ತಾನು ಸಾಯುವುದಕ್ಕೂ ಮೊದಲು ತನ್ನೆಲ್ಲಾ ಆಸ್ತಿ ವಿವರವನ್ನು ಭುವಿಗೆ ಹೇಳಿ ಒಪ್ಪಿಸಬೇಕೆಂದು ನೋಡುತ್ತಾಳೆ. ಆದರೆ ರತ್ನಮ್ಮಾಗೆ ತಾನು ಶೀಘ್ರದಲ್ಲೇ ಸಾಯಬಹುದು ಎನ್ನುವ ಆತಂಕ ಕೂಡ ಹೆಚ್ಚಾಗಿದೆ. ಮುಂದೆ ಎನ್ನಾಗುತ್ತದೆ ಎನ್ನುವ ಕುತೂಹಲ ನಿಮ್ಮನ್ನು ಕಾಡುತ್ತಿದ್ದರೆ ತಪ್ಪದೇ ಧಾರಾವಾಹಿಯನ್ನು ವೀಕ್ಷಿಸಿ.

Colors Kannada Serial Kannadathi : Bhuvi is not losing patience even though Sania is complaining

Comments are closed.