Delhi bomb scare : ಮಾಸ್ಕೋ-ದೆಹಲಿ ವಿಮಾನದಲ್ಲಿ ಬಾಂಬ್ ಬೆದರಿಕೆ

ನವದೆಹಲಿ: delhi bomb scare : ಮಾಸ್ಕೋದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ SU 232 ವಿಮಾನದಲ್ಲಿ ಬಾಂಬ್ ಇರಿಸಿರುವ ಕುರಿತು ಬೆದರಿಕೆ ಕರೆಯೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ 3.20ರ ಸುಮಾರಿಗೆ ವಿಮಾನವು ಲ್ಯಾಂಡ್ ಆಗುತ್ತಿದ್ದಂತೆಯೇ ದೆಹಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಕೂಡಲೇ ಪ್ರಯಾಣಿಕರನ್ನು ಡಿಬೋರ್ಡ್ ಮಾಡಲಾಗಿದೆ. ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಗುರುವಾರ ರಾತ್ರಿ 11.15ಕ್ಕೆ ವಿಮಾನದಲ್ಲಿ ಬಾಂಬ್ ಇರುವ ಕುರಿತು ಕರೆ ಬಂದಿದೆ. ಕೂಡಲೇ ಅಲರ್ಟ್ ಆದ ದೆಹಲಿ ಪೊಲೀಸರು ವಿಮಾನ ಲ್ಯಾಂಡ್ ಆಗುವವರೆಗೂ ಅಲರ್ಟ್ ಆಗಿದ್ದರು. ರನ್ ವೇನಲ್ಲಿ ಇಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರೀಯ ದಳದ ಸಹಕಾರದೊಂದಿಗೆ ಕಾರ್ಯಾಚರಣೆಯನ್ನು ನಡೆಸಲಾಯಿತು. ವಿಮಾನದಲ್ಲಿ ಒಟ್ಟು 386 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು.

ಬಾಂಬ್ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇತರರ ವಿಮಾನಗಳಲ್ಲಿಯೂ ಪರಿಶೀಲನೆಯ ಕಾರ್ಯ ನಡೆಸಲಾಗಿದೆ. ಇನ್ನು ಬಾಂಬ್ ಬೆದರಿಕೆ ಕರೆಯ ಕುರಿತು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : ಟೀಚರ್ ಜೊತೆ ಪ್ರೀತಿ.. ಲವ್ ಬ್ರೇಕ್ ಅಪ್.. ಸಾವಿಗೆ ಶರಣಾದ ವಿದ್ಯಾರ್ಥಿ.. ಶಿಕ್ಷಕಿ ಅರೆಸ್ಟ್

ಇದನ್ನೂ ಓದಿ : LPG cylinders ration shops : ಗುಡ್ ನ್ಯೂಸ್‌ : ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್‌

Delhi bomb scare call received for Delhi Moscow flight passengers safe

Comments are closed.