Super 10 League : ಕ್ರಿಕೆಟ್+ಸಿನಿಮಾ: ಕಿಚ್ಚನ ಸೂಪರ್ 10 ಲೀಗ್‌ನಲ್ಲಿ ಆಡಲಿದ್ದಾರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್

ಬೆಂಗಳೂರು: (Chris Gayle Super 10 League) ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kichcha Sudeep) ಮತ್ತೊಂದು ಸಾಹಸಕ್ಕೆ ರೆಡಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ಕಪ್ (KCC) ಟೂರ್ನಿ ಆಯೋಜಿಸಿ ಖ್ಯಾತ ಅಂತಾರಾಷ್ಟ್ರೀಯ ಆಟಗಾರರನ್ನು ಆಡಿಸಿದ್ದ ಸುದೀಪ್, ಈಗ ಸೂಪರ್ 10 ಕ್ರಿಕೆಟ್ ಲೀಗ್ ನಡೆಸಲು ಮುಂದಾಗಿದ್ದಾರೆ. ಕಿಚ್ಚನ ಸೂಪರ್ 10 ಲೀಗ್’ನಲ್ಲಿ ವೆಸ್ಟ್ ಇಂಡೀಸ್’ನ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ (Chris Gayle) ಆಡಲಿದ್ದಾರೆ. ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು, ಸಿನಿಮಾ ತಾರೆಗಳು ಮತ್ತು ಕಾರ್ಪೊರೇಟ್ ಸೆಕ್ಟರ್’ನವರು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 10 ಓವರ್’ಗಳ ಪಂದ್ಯಗಳನ್ನೊಳಗೊಂಡ ಟೂರ್ನಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಬೆಂಗಳೂರಿನಲ್ಲಿ ನಡೆಯಲಿದೆ.

ಸೂಪರ್ 10 ಟೂರ್ನಿಯಲ್ಲಿ ಆಡುವ ಬಗ್ಗೆ ಪ್ರತಿಕ್ರಿಸಿಯಿರುವ ವಿಂಡೀಸ್ ಕ್ರಿಕೆಟ್ ಲೆಜೆಂಡ್ ಕ್ರಿಸ್ ಗೇಲ್ “ಭಾರತೀಯ ಸಿನಿಮಾದ ಖ್ಯಾತರೊಂದಿಗೆ, ನನ್ನ ಕ್ರಿಕೆಟ್ ಜೊತೆಗಾರರೊಂದಿಗೆ ಆಡಲು ಉತ್ಸುಕನಾಗಿದ್ದೇನೆ. 10 ಓವರ್’ಗಳ ಫಾರ್ಮ್ಯಾಟ್’ನ ಟೂರ್ನಿ ಇದಾಗಿದ್ದು, ಭರ್ಜರಿ ಮನರಂಜನೆ ಇರಲಿದೆ. ಡಿಸೆಂಬರ್’ನಲ್ಲಿ ನಡೆಯುವ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

ಇನ್ನು ಸೂಪರ್ 10 ಟೂರ್ನಿಯ ರೂವಾರಿ ಕಿಚ್ಚ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು “ಕ್ರಿಕೆಟ್ ಮತ್ತು ಸಿನಿಮಾ ಸ್ನೇಹಿತರೊಂದಿಗೆ ಬೆರೆಯಲು ಸೂಪರ್ 10 ಲೀಗ್ ಒಂದು ಅದ್ಭುತ ಅವಕಾಶ” ಎಂದಿದ್ದಾರೆ. ದಿನೇಶ್ ಕುಮಾರ್ ಎಂಬವರು ಸೂಪರ್ 10 ಲೀಗ್’ನ ಸಿಇಒ ಮತ್ತು ಸಂಸ್ಥಾಪಕರಾಗಿದ್ದು, ಅವರಿಗೆ ನಟ ಸುದೀಪ್ ಬೆನ್ನೆಲುಬಾಗಿ ನಿಂತಿದ್ದಾರೆ.

2018 ಹಾಗೂ 2019ರಲ್ಲಿ ಕಿಚ್ಚ ಸುದೀಪ್ ಆಯೋಜಿಸಿದ್ದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಭಾರೀ ಗಮನ ಸೆಳೆದಿತ್ತು. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಕನ್ನಡ ಸಿನಿಮಾ ತಾರೆಗಳು, ಕೆಪಿಎಲ್ ಆಟಗಾರರು ಮತ್ತು ಪತ್ರಕರ್ತರು ಆಡಿದ್ದರು. 2ನೇ ಆವೃತ್ತಿಯಲ್ಲಿ ಈ ಮೂವರ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಆಡಂ ಗಿಲ್’ಕ್ರಿಸ್ಟ್, ತಿಲಕರತ್ನೆ ದಿಲ್ಶಾನ್, ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನೆರ್ ಮತ್ತು ಓವೈಸ್ ಶಾ ಆರು ತಂಡಗಳ ಪರ ಆಡಿದ್ದರು.

ಇದನ್ನೂ ಓದಿ : T20 World Cup : ಕೆ.ಎಲ್ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, 2ನೇ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು

ಇದನ್ನೂ ಓದಿ : M S Dhoni : ಸಚಿನ್ ತೆಂಡೂಲ್ಕರ್ ಅವರಂತೆ ಆಡಲು ಬಯಸಿದ್ದೆ ಆದ್ರೆ, ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

Chris Gayle Paly with Kiccha Sudeep Super 10 League

Comments are closed.