Yuvraj Singh Arrest‌ : ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅರೆಸ್ಟ್‌

ನವದೆಹಲಿ : ಭಾರತ ಕ್ರಿಕೆಟ್‌ ತಂಡ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಅವರನ್ನು ಹಸ್ಸಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾ ಗ್ರಾಂನಲ್ಲಿ ಲೈವ್‌ ಈವೆಂಟ್‌ ನಡೆಸುತ್ತಿದ್ದ ವೇಳೆಯಲ್ಲಿ ಮತ್ತೋರ್ವ ಆಟಗಾರರನ್ನು ಉಲ್ಲೇಖಿಸುವ ವೇಳೆಯಲ್ಲಿ ಯುವರಾಜ್‌ ಸಿಂಗ್‌ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣದಿಂದಾಗಿ ಪೊಲೀಸರು ಯುವರಾಜ್‌ ಸಿಂಗ್‌ ಅವರನ್ನು ಬಂಧಿಸಿದ್ದಾರೆ.

ಕಳೆದ ವರ್ಷ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡುತ್ತಿದ್ದಾಗ ಯಜುವೇಂದ್ರ ಚಹಲ್ ವಿರುದ್ದ ಜನಾಂಗೀಯ ನಿಂದನೆಯ ಪದಗಳನ್ನು ಬಳಸಿದ್ದಾರೆ. ಹನ್ಸಿಯ ರಜತ್ ಕಲ್ಸನ್ ಯುವರಾಜ್ ಸಿಂಗ್ ವಿರುದ್ಧ ಐಪಿಸಿ ಮತ್ತು ಎಸ್ಸಿ / ಎಸ್ಟಿ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ಸಿ ಪೊಲೀಸರು ಯುವರಾಜ್‌ ಸಿಂಗ್‌ ಅವರನ್ನು ಬಂಧಿಸಿದ್ದರೂ ಕೂಡ ಮಧ್ಯಂತರ ಜಾಮೀನಿನ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದಾರೆ.

ಯುವರಾಜ್‌ ಸಿಂಗ್‌ ವಿರುದ್ದ ಧರ್ಮದ, ಜನಾಂಗದ ವಿರುದ್ದ ದ್ವೇಷ ಬಿತ್ತಲು ಪ್ರಚೋದಿಸಿ ಆರೋಪದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153 ಎ ಮತ್ತು 153 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಯುವರಾಜ್‌ ಸಿಂಗ್‌ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆಯ ನಡೆಯುವ ವೇಳೆಯಲ್ಲಿಯೇ ಪೊಲೀಸರು ಯುವರಾಜ್‌ ಸಿಂಗ್‌ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಗಂಗೂಲಿ ಶರ್ಟ್‌ ಬಿಚ್ಚಿ, ನ್ಯಾಟ್‌ವೆಸ್ಟ್‌ ಐತಿಹಾಸಿಕ ಟ್ರೋಫಿ ಗೆದ್ದ ನೆನಪಿಗೆ 15 ವರ್ಷ

ಇನ್ನೊಂದೆಡೆಯಲ್ಲಿ ಯುವರಾಜ್‌ ಸಿಂಗ್‌ ಪ್ರಕರಣದಲ್ಲಿ ತಾವು ನಿರಪರಾಧಿಯಾಗಿದ್ದು, ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ಮೊರೆ ಹೋಗಿದ್ದಾರೆ. 2000 ರಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಯುವರಾಜ್‌ ಸಿಂಗ್‌ ಭಾರತ ಟಿ 20 ವಿಶ್ವಕಪ್ ಮತ್ತು 50 ಓವರ್ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ 20 ವಿಶ್ವಕಪ್‌ ನ ಇಂಗ್ಲೆಂಡ್‌ ವಿರುದ್ದ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಬಾರಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ ಕೀರ್ತಿ ಯುವರಾಜ್‌ ಸಿಂಗ್‌ ಅವರಿಗೆ ಸಲ್ಲುತ್ತದೆ. ಭಾರತಕ್ಕಾಗಿ 40 ಟೆಸ್ಟ್, 304 ಏಕದಿನ ಮತ್ತು 57 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಯುವರಾಜ್ 2019 ರಲ್ಲಿ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿಯನ್ನು ಘೋಷಿಸಿದ್ದರು.

ಇದನ್ನೂ ಓದಿ :  17 ವರ್ಷದ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಾ ಟೀಂ ಇಂಡಿಯಾ

ಇದನ್ನೂ ಓದಿ :  ಯಾರಾಗ್ತಾರೆ ಗೊತ್ತಾ ಟೀಂ ಇಂಡಿಯಾ ನಾಯಕ ?

(Yuvraj Singh Arrest, former India cricketer )

Comments are closed.