Sai Dharam Tej : ಖ್ಯಾತ ಟಾಲಿವುಡ್‌ ನಟ ಸಾಯಿಧರ್ಮ ತೇಜ್‌ ಬೈಕ್‌ ಅಪಘಾತ : ಗಂಭೀರ ಸ್ಥಿತಿಯಲ್ಲಿ ಚಿರಂಜೀವಿ ವಂಶದ ಕುಡಿ

ಹೈದರಾಬಾದ್: ಟಾಲಿವುಡ್‌ ನ ನಟ ಚಿರಂಜೀವಿ ವಂಶದ ಕುಡಿ ತೆಲುಗು ಖ್ಯಾತ ನಟ ಸಾಯಿಧರ್ಮ ತೇಜ್ ಅವರ ಬೈಕ್‌ ಅಪಘಾತಕ್ಕೆ ಈಡಾಗಿದ್ದು, ಸಾಯಿಧಮ್‌ ತೇಜ್‌ ಅವರು ಕೋಮಾ ಸ್ಥಿತಿಗೆ ತಲುಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈದ್ರಾಬಾದ್‌ನ ಮಾದಾಪುರ ಕೇಬಲ್‌ ಬ್ರಿಡ್ಜ್‌ ಬಳಿಯಲ್ಲಿ ತನ್ನ ಸ್ಪೋಟ್ಸ್‌ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ. ಸಾಯಿಧರ್ಮ್‌ ತೇಜ್‌ ಅವರ ಬಲಗಣ್ಣು, ಎದೆ ಭಾಗ, ಭುಜ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಮೆದುಳು ಹಾಗೂ ಇತರ ಸೂಕ್ತ ಭಾಗಕ್ಕೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ ಎಂದಿದ್ದಾರೆ. ಅವರನ್ನು ಹೈದ್ರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಯಿಧರ್ಮ ತೇಜ್‌ ಅವರಿಗೆ ಪಿಟ್ಸ್‌ ಬಂದು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗುತ್ತಿದೆ.

ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇನ್ನು ಸಾಯಿಧರ್ಮ ತೇಜ್‌ ಅವರ ಬೈಕ್‌ ಅಪಘಾತವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಯಿಧರ್ಮ ತೇಜ್‌ ಸದ್ಯ ಕೋಮಾ ಸ್ಥಿತಿಯಲ್ಲಿ ವೈದ್ಯರು ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

ಇದನ್ನೂ ಓದಿ : ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು ಎಂದ‌‌ ನಟಿ !  ಅಷ್ಟಕ್ಕೂ ಯಾರೀಕೆ ಗೊತ್ತಾ ?

( Tollywood actor Sai Dharam Tej meets with a road accident; suffers injuries )

Comments are closed.