Narendra Giri: ಶಿಷ್ಯನ ಕಿರುಕುಳಕ್ಕೆ ಗುರು ಬಲಿ: ಅಖಾಡ ಪರಿಷದ್ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಸೊಸೈಡ್

ಪ್ರಯಾಗ್ ರಾಜ್: ಅಖಿಲ ಭಾರತೀಯ ಆಖಾಡ ಪರಿಷದ್  ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಪ್ರಯಾಗ್ ರಾಜ್ ನ ಶ್ರೀಮಠ ಮಘಾಂಬರಿ ಗಡ್ಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 62 ವರ್ಷದ ನರೇಂದ್ರ ಗಿರಿ ಮೃತದೇಹ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಶಿಷ್ಯನಿಂದ ಎದುರಾದ ಮಾನಸಿಕ ಹಿಂಸೆ ತಡೆಯಲಾಗದೇ ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವುದಾಗಿ ಮಹಾಂತ್ ನರೇಂದ್ರ ಗಿರಿ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಈ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ದೇಶದಲ್ಲಿ ಮಾನ್ಯತೆ ಪಡೆದಿರುವ 13 ಹಿಂದೂ ಸನ್ಯಾಸ ಸಂಸ್ಥೆಗಳ ಸರ್ವೋಚ್ಛ ನಿರ್ಣಾಯಕ ಸಂಸ್ಥೆಯಾಗಿರುವ ಎಬಿಎಪಿಯ ಮುಖ್ಯಸ್ಥರಾಗಿದ್ದ ನರೇಂದ್ರ್ ಗಿರಿ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸೂಕ್ತ ತನಿಖೆ ನಡೆಯಬೇಕೆಂಬ ಆಗ್ರಹ ಭಕ್ತ ವಲಯದಿಂದ ವ್ಯಕ್ತವಾಗಿದೆ.

ಘಟನೆ ನಡೆದ ವೇಳೆ ಯಾವುದೇ ಶಿಷ್ಯರು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವ ವೇಳೆ ಶಿಷ್ಯರು ನರೇಂದ್ರ್ ಗಿರಿ ಮೃತದೇಹವನ್ನು ಕುಣಿಕೆಯಿಂದ ಕೆಳಕ್ಕೆ ಇಳಿಸಿದ್ದರು ಎನ್ನಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪೊಲೀಸ ಉನ್ನತ  ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ನರೇಂದ್ರ್ ಗಿರಿ ಆರ್ಥಿಕ ಅವ್ಯವಹಾರದ ಕಾರಣಕ್ಕೆ ತಮ್ಮ ಶಿಷ್ಯ ಆನಂದ ಗಿರಿಯನ್ನು ಆಶ್ರಮಯದಿಂದ ಹೊರಹಾಕಿದ್ದರು ಎನ್ನಲಾಗಿದೆ. ಬಳಿಕ ಆತ ಮತ್ತೆ ಕ್ಷಮೆಯಾಚಿಸಿ ಮರಳಿ ಬಂದಿದ್ದ. ಆದರೆ ಈ ಸಂಧಾನ ಬಹುಕಾಲ ಉಳಿಯದೇ ನರೇಂದ್ರ ಗಿರಿಯವರಿಗೆ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಅವರು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

(Narendra giri found dead in prayagrajs math)

Comments are closed.