54 Chinese App Banned : ಮತ್ತಷ್ಟು ಚೀನಾ ಆ್ಯಪ್‌ಗಳಿಗೆ ನಿಷೇಧ ಹೇರಿದ ಭಾರತ; ಈ ಆ್ಯಪ್‌ಗಳನ್ನು ನೀವು ಬಳಸುತ್ತಿದ್ದೀರಾ ಚೆಕ್ ಮಾಡಿ

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ 2020ರ ಜೂನ್‌ 15ರ ರಾತ್ರಿ ಘರ್ಷಣೆಯಲ್ಲಿ 20 ಸೈನಿಕರು ಸಾವನ್ನಪ್ಪಿದ ಬಳಿಕೆ ಚೀನಾ ವಿರುದ್ಧ ಅನೇಕ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾರತ, ಈಗ ಮತ್ತೆ 54 ಮೊಬೈಲ್‌ ಅಪ್ಲಿಕೇಷನ್‌ಗಳನ್ನು (Chinese App Banned ) ನಿಷೇಧಿಸಿದೆ. ಈ ಮೂಲಕ ಚೀನಾದ ಒಟ್ಟು 231 ಆಪ್‌ಗಳು ಈವರೆಗೂ ನಿಷೇಧಕ್ಕೆ ಒಳಗಾಗಿವೆ. ದೇಶದ ಭದ್ರತೆಗೆ ಈ ಆಪ್‌ಗಳಿಂದ ಅಪಾಯ ಉಂಟಾಗಬಹುದು ಎಂದು ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದೆ.

ನಿಷೇಧಕ್ಕೆ ಒಳಗಾದ ಆಪ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ: ಸ್ವೀಟ್‌ ಸೆಲ್ಪೀ ಎಚ್‌ಡಿ, ಬ್ಯೂಟಿ ಕ್ಯಾಮೆರಾ: ಸೆಲ್ಪೀ ಕ್ಯಾಮೆರಾ, ಈಕ್ವಲೈಸರ್‌ ಆಂಡ್ ಬಾಸ್ ಬೂಸ್ಟರ್‌, ಕ್ಯಾಮ್‌ಕಾರ್ಡ್‌ ಫಾರ್‌ ಸೇಲ್ಸ್‌ಫೋರ್ಸ್‌ ಇಎನ್‌ಟಿ, ಇಸೋಲ್ಯಾಂಡ್‌ 2: ಆಶಸ್‌ ಆಫ್ ಟೈಮ್‌ ಲೈಟ್‌, ವಿವಾ ವಿಡಿಯೋ ಎಡಿಟರ್‌, ಟೆನ್ಸೆಂಟ್‌ ಎಕ್ಸ್‌ರಿವರ್‌, ಆನ್‌ಮಿಯೋಜಿ ಚೆಸ್‌, ಆನ್‌ಮಿಯೋಜಿ ಅರೆನಾ, ಆಪ್‌ಲಾಕ್‌, ಡ್ಯುಲ್‌ ಸ್ಪೇಸ್‌ ಲೈಟ್‌ ಮುಂತಾದವು ಸೇರಿವೆ.

ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯ ಘರ್ಷಣೆ ನಡೆದ 20 ದಿನದಲ್ಲೇ ಚೀನಾ ಮೂಲದ 47 ಆ್ಯಪ್​ಗಳನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. ಎರಡನೇ ಹಂತದಲ್ಲಿ 2020ರ ಸೆಪ್ಟೆಂಬರ್​ನಲ್ಲಿ 118 ಆ್ಯಪ್​ಗಳು, ಮೂರನೇ ಹಂತದಲ್ಲಿ ಅದೇ ವರ್ಷ ನವೆಂಬರ್​ನಲ್ಲಿ 43 ಆ್ಯಪ್​ಗಳ ಬಳಕೆಯನ್ನು ಭಾರತದಲ್ಲಿ ತಡೆಯಲಾಯಿತು. 2021ರ ಜೂನ್​ ಅಂತ್ಯದಲ್ಲಿ ಟಿಕ್​ಟಾಕ್​, ವಿಚಾಟ್​, ಹೆಲೋ ಸೇರಿ 59 ಚೀನಾ ಆ್ಯಪ್​ಗಳನ್ನು ನಿಷೇಧಗೊಂಡವು. ಒಟ್ಟಾರೆ ಚೀನಾದ 321 ಆ್ಯಪ್​ ನಿಷೇಧಗೊಂಡಿವೆ. ಈ ಆ್ಯಪ್​ಗಳು ಭಾರತದ ಬಳಕೆದಾರರ ಮಾಹಿತಿಯನ್ನು ಗುಪ್ತವಾಗಿ ಚೀನಾಕ್ಕೆ ರವಾನಿಸುತ್ತಿವೆ ಎಂಬ ಬೇಹುಗಾರಿಕಾ ಮಾಹಿತಿಯ ಆಧಾರದ ಮೇಲೆ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಐಟಿ ಕಾಯ್ದೆ 69ಎ ಸೆಕ್ಷನ್​ ಅನ್ವಯ ಈ ಕ್ರಮ ಜರುಗಿಸಿದೆ. ಆ್ಯಪ್​ಗಳ ನಿಷೇಧಿಸುವುದು ವಿಶ್ವ ವ್ಯಾಪಾರ ಒಕ್ಕೂಟದ ಒಪ್ಪಂದ ಉಲ್ಲಂಘನೆ ಎಂದು ಪ್ರತಿ ಸಾರಿ ಭಾರತ ಆ್ಯಪ್​ ನಿಷೇಧಿಸಿದಾಗಲೆಲ್ಲಾ ಚೀನಾ ಟೀಕಿಸುತ್ತಿದೆ.

ಇದನ್ನೂ ಓದಿ: ISRO PSLV C52 ನಭಕ್ಕೆ ಜಿಗಿದ ವಿಡಿಯೋ ನೋಡಿ; 3 ಉಪಗ್ರಹಗಳು ನಭ ಸೇರಿದ ಶುಭಸುದ್ದಿ ನೀಡಿದ ಇಸ್ರೋ

(Chinese App Banned : India to ban 54 Chinese apps that pose threat)

Comments are closed.