Kargil Vijay Divas 2022: ಕಾರ್ಗಿಲ್​​ ವಿಜಯ್​ ದಿವಸದ ಮಹತ್ವ, ಇತಿಹಾಸದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Kargil Vijay Divas 2022:ಇಂದಿಗೆ 23 ವರ್ಷಗಳ ಹಿಂದೆ ನಡೆದ ಕಾರ್ಗಿಲ್​ ಯುದ್ಧದಲ್ಲಿ ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತವು ವಿಜಯವನ್ನು ಸಾಧಿಸಿದ ಸವಿ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ದೇಶದಲ್ಲಿ ಕಾರ್ಗಿಲ್​ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಈ ಯುದ್ಧದ ಸಂದರ್ಭದಲ್ಲಿ ಲೆಹ್​ ಲಡಾಕ್​ ಪ್ರಾಂತ್ಯದಲ್ಲಿ ಒಳ ನುಸುಳಿ ಬಂದಿದ್ದ ಪಾಕಿಸ್ತಾನಿ ಸೈನ್ಯವನ್ನು ಭಾರತೀಯ ಯೋಧರು ಕಠಿಣ ಹೋರಾಟವನ್ನು ಕೈಗೊಂಡು ಅವರನ್ನು ಹೊಡೆದುರುಳಿಸಿದರು ಆಪರೇಷನ್​ ವಿಜಯ್​​ನ ಭಾಗವಾಗಿ ಟೈಗರ್​ ಹಿಲ್​ ಸೇರಿದಂತೆ ವಿವಿಧ ಪ್ರದೇಶಗಳನ್ನು ಭಾರತೀಯ ಸೈನ್ಯವು ವಶಪಡಿಸಿಕೊಂಡಿತು. ಲಡಾಖ್​​ನ ಕಾರ್ಗಿಲ್​ನಲ್ಲಿ 60 ದಿನಗಳಿಗೂ ಅಧಿಕ ಕಾಲ ಈ ಸಂಘರ್ಷ ನಡೆದಿತ್ತು.

ಕಾರ್ಗಿಲ್​ ಯುದ್ಧದ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವನ್ನು ಸಲ್ಲಿಸುವ ನಿಮಿತ್ತ ಪ್ರತಿ ವರ್ಷ ಈ ದಿನವನ್ನು ಕಾರ್ಗಿಲ್​ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಸ್ಮರಿಸುವ ಹಿಂದಿನ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.


ಕಾರ್ಗಿಲ್​ ವಿಜಯ್​ ದಿವಸ 2022 : ಇತಿಹಾಸ ಹಾಗೂ ಮಹತ್ವ :
1971ರಲ್ಲಿ ಇಂಡೋ – ಪಾಕ್​ ಯುದ್ಧದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇತ್ತು . 1998ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ಲಾಹೋರ್​ ಘೋಷಣೆಗೆ ಸಹಿ ಹಾಕಿದ್ದರು. ಅಲ್ಲದೇ ಕಾಶ್ಮೀರದ ಸಮಸ್ಯೆಗೆ ಶಾಂತಿಯುತವಾಗಿ ಪರಿಹಾರವನ್ನು ಕೈಗೊಳ್ಳೋಣ ಎಂದೂ ನಿರ್ಧರಿಸಲಾಗಿತ್ತು. ಆದರೆ ಪಾಕಿಸ್ತಾನ ಮಾತ್ರ ಬೆನ್ನು ಹಿಂದೆ ಚೂರಿ ಹಾಕುವ ಕೆಲಸವನ್ನು ಅದಾಗಲೇ ಆರಂಭಿಸಿತ್ತು. ಆಗಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅಂದಿನ್​ ಪಾಕ್​ ಪ್ರಧಾನಿ ನವಾಜ್​ ಷರೀಫ್​ ಜೊತೆಯಲ್ಲಿ ಸ್ನೇಹ ಹಸ್ತ ಚಾಚಿದ್ದರು. ಆದರೆ ಪಾಕ್​ ಮಾತ್ರ ಕಾರ್ಗಿಲ್​ ಮಾರ್ಗವಾಗಿ ಭಾರತದ ಒಳಗೆ ನುಸುಳಲು ಎಲ್ಲಾ ರೀತಿಯ ಪ್ಲಾನ್​ ಮಾಡಿತ್ತು.


ಅದು ಜನವರಿ – ಫೆಬ್ರವರಿ ಸಮಯ. ಈ ಸಮಯದಲ್ಲಿ ಅತಿಯಾದ ಚಳಿ ಇರೋದ್ರಿಂದ ಭಾರತೀಯ ಯೋಧರು ಗಡಿಯಲ್ಲಿ ಪೆಟ್ರೋಲಿಂಗ್​ ಮಾಡೋದಿಲ್ಲ ಎಂದು ಕಾರ್ಗಿಲ್​ನ ವಿವಿಧ ಭಾಗಗಳಲ್ಲಿ ಒಳ ನುಸುಳಿದ ಪಾಕ್​ ಸೈನ್ಯ ಅಲ್ಲಲ್ಲಿ ಡೇರೆ ಹೂಡಿತ್ತು. ಪಾಕಿಸ್ತಾನವು ಕಾಶ್ಮೀರ ಹಾಗೂ ಲಡಾಕ್​ ನಡುವಿನ ಸಂಪರ್ಕವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿತ್ತು, ಪಾಕ್​ ಒಳ ನುಸುಳುವಿಕೆಯನ್ನು ಆಪರೇಷನ್​ ಭದ್ರ್​ ಎಂದು ಹೆಸರಿಸಲಾಗಿತ್ತು.
ಭಾರತೀಯ ಪಡೆಗಳು ಸಿಯಾಚಿನ್​ ಗ್ಲೇಸಿಯರ್​ನಿಂದ ಹಿಂದೆ ಸರಿಯುವಂತೆ ಮಾಡುವುದು ಆಪರೇಷನ್​ ಭದ್ರ್​​ದ ಭಾಗವಾಗಿತ್ತು . 1999ರ ಮೇ ಹಾಗೂ ಜುಲೈ ನಡುವೆ ಕಾರ್ಗಿಲ್​ ಜಿಲ್ಲೆಯಲ್ಲಿ ಯುದ್ಧ ನಡೆಯಿತು. ಆ ಸಮಯದಲ್ಲಿ ಅಂದಿನ ಪಾಕ್​ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್​ ಪರ್ವೇಜ್​ ಮುಷರಫ್​​ ಯುದ್ಧದ ಹಿಂದೆ ಇದ್ದರು ಎನ್ನಲಾಗಿದೆ. 2007ರಲ್ಲಿ ಈ ಎಲ್ಲಾ ವಿಚಾರಗಳನ್ನು ಸ್ವತಃ ನವಾಜ್​ ಷರೀಫ್​ ಬಹಿರಂಗಗೊಳಿಸಿದ್ದಾರೆ.ಮೊದ ಮೊದಲು ಇದು ಬಂಡುಕೋರರ ಕೃತ್ಯ ಎಂದು ವಾದಿಸಿದ್ದ ಪಾಕ್​ ಬಳಿಕ ಕದನದ ಹಿಂದೆ ಇರುವುದು ಎಂಬ ಸತ್ಯವನ್ನು ಒಪ್ಪಿಕೊಂಡಿತ್ತು.


ಯುದ್ಧದ ಎರಡನೇ ಹಂತದಲ್ಲಿ ಯುದ್ಧದ ತಂತ್ರದ ಸಾರಿಗೆ ಮಾರ್ಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತವು ಪಾಕ್​ಗೆ ತಕ್ಕ ಉತ್ತರವನ್ನು ನೀಡಿತ್ತು. ಭಾರತೀಯ ವಾಯುಪಡೆಯ ಸಹಾಯದಿಂದ ಅಂತಿಮ ಹಂತದಲ್ಲಿ ಭಾರತವು ಯುದ್ಧವನ್ನು ಮುಕ್ತಾಯಗೊಳಿಸಿತು.


ಕಾರ್ಗಿಲ್​ ವಿಜಯ್​ ದಿವಸ್​​ ಆಚರಣೆಯ ಮೂಲಕ ಕಾರ್ಗಿಲ್​ ಯುದ್ಧದಲ್ಲಿ ಮಡಿದ ವೀರ ಯೋಧರನ್ನು ಗೌರವಿಸಲಾಗುತ್ತದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಪ್ರತಿ ವರ್ಷ ಇಂಡಿಯಾ ಗೇಟ್​​ ಬಳಿಯಲ್ಲಿ ಅಮರ್​ ಜವಾನ್​​ ಜ್ಯೋತಿಯಲ್ಲಿ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತಾರೆ.


ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.. ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ದಿವಸ್ ಮೋಟಾರ್ ಬೈಕ್ ಯಾತ್ರೆಗೆ ಚಾಲನೆ ನೀಡಿದೆ.

ಇದನ್ನು ಓದಿ : Lovlina Borgohain : ‘ಮಾನಸಿಕ ಕಿರುಕುಳ ನೀಡ್ತಿದ್ದಾರೆ’ : ಭಾರತೀಯ ಬಾಕ್ಸಿಂಗ್​ ಒಕ್ಕೂಟದ ವಿರುದ್ಧ ಒಲಿಂಪಿಕ್​ ಪದಕ ವಿಜೇತೆ ಗಂಭೀರ ಆರೋಪ

ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ

Kargil Vijay Divas 2022: Date, History, Significance, and Commemorations

Comments are closed.