Omelette Benefits : ಆಮ್ಲೇಟ್ ಸೇವಿಸಿ ಆರೋಗ್ಯದಿಂದಿರಿ

Omelette Benefits : ಮೊಟ್ಟೆಗಳು ಅತ್ಯುತ್ತಮ ಉಪಹಾರ ಆಹಾರಗಳಲ್ಲಿ ಒಂದಾಗಿದೆ ಮತ್ತು ದಿನದ ಮೊದಲ ಊಟದ ಭಾಗವಾಗಿ ಪ್ರಪಂಚದಾದ್ಯಂತ ಅವುಗಳನ್ನು ಸೇವಿಸಲಾಗುತ್ತದೆ. ಬೆಳಗಿನ ಉಪಾಹಾರಕ್ಕಾಗಿ ಹೆಚ್ಚಿನ ಜನರು ಸ್ಕ್ರಾಂಬಲ್ಡ್ ಮೊಟ್ಟೆಗಳು, ಬಿಸಿಲಿನ ಬದಿಯಲ್ಲಿ ಅಥವಾ ಆಮ್ಲೆಟ್‌ಗಳ ರೂಪದಲ್ಲಿ ತ್ವರಿತ ಮತ್ತು ಕ್ಲಾಸಿಕ್ ಮೊಟ್ಟೆ ಭಕ್ಷ್ಯಗಳನ್ನು ಸೇವಿಸಲು ಬಯಸುತ್ತಾರೆ. ಆರೋಗ್ಯಕರ ಉಪಹಾರ ಆಹಾರಗಳಲ್ಲಿ ಆಮ್ಲೆಟ್‌ಗಳು ಒಂದಾಗಿದ್ದರೂ, ನಾವು ಬಯಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನಮ್ಮ ದೇಹವನ್ನು ಸೇರಿಸುತ್ತೇವೆ.

ನಾವು ಸೇವಿಸುವ ಆಹಾರ ಪೌಷ್ಟಿಕಾಂಶ ಯುತವಾಗಿ ಇರಬೇಕು ಇಲ್ಲದಿದ್ದಲ್ಲಿ ಅದು ನಮ್ಮ ದೇಹದ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ನಾವು ಯಾವುದೇ ಆಹಾರ ಸೇವನೆ ಮಾಡಿದರೂ ಮೊದಲು ಅದರಲ್ಲಿರುವ ಪೌಷ್ಟಿಕ ಸತ್ವಗಳ ಮತ್ತು ಖನಿಜಾಂಶಗಳ ಕಡೆಗೆ ಗಮನ ಕೊಡಬೇಕು. ಅತೀ ಹೆಚ್ಚು ಪೋಷಕಾಂಶಗಳಿರುವ ಆಹಾರಗಳ ಪೈಕಿ ಮೊಟ್ಟೆಯು ಒಂದಾಗಿದೆ. ಒಂದು ಮೊಟ್ಟೆಯಲ್ಲಿ ದಿನಕ್ಕೆ ಬೇಕಾಗಿರುವಂತಹ ಎಲ್ಲಾ ಬಗೆಯ ಪೋಷಕಾಂಶಗಳು ಸಿಗುತ್ತದೆ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ಹೆಚ್ಚಿನವರು ಮೊಟ್ಟಿಯಿಂದ ದೂರವಿರುತ್ತಾರೆ ಆದರೆ ಮೊಟ್ಟೆಯಲ್ಲಿ ಇರುವ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೇವಲ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಹಾನಿಕರ ಉಳಿದಂತೆ ಯಾರುಬೇಕಾದರು ಮೊಟ್ಟೆಯನ್ನು ಭಯವಿಲ್ಲದೆ ಸೇವಿಸಬಹುದು.

ಮೊಟ್ಟೆಯನ್ನು ಬೇಯಿಸಿ ಅಥವಾ ಇತರ ಕೆಲವು ವಿಧಾನಗಳಿಂದ ಬಳಸಬಹುದಾಗಿದೆ ಮೊಟ್ಟೆಯಿಂದ ಮಾಡುವ ಸುಲಭ ಹಾಗೂ ರುಚಿಕರ ತಿಂಡಿ ಎಂದರೆ ಅದು ಆಮ್ಲೇಟ್. ಬಹಳಷ್ಟು ಮಂದಿ ಆಮ್ಲೇಟ್ ಅನ್ನು ಉಪಾಹಾರವಾಗಿ ಬಳಸುತ್ತಾರೆ ಇದರಿಂದ ಸಾಕಷ್ಟು ಲಭಾಗಳು ಇವೆ. 100 ಗ್ರಾಂ ಸಾಮಾನ್ಯ ಆಮ್ಲೆಟ್ ನಲ್ಲಿ 155 ಕೆಸಿಎಎಲ್ ಇದ್ದು, ಇದು ದೇಹಕ್ಕೆ ಒಳ್ಳೆಯ ಶಕ್ತಿ ಒದಗಿಸುವುದು. ಅಥ್ಲೆಟಿಕ್ ಗಳು ಕೂಡ ಬೆಳಗ್ಗಿನ ಉಪಾಹಾರಕ್ಕೆ ಆಮ್ಲೆಟ್ ಸೇವನೆ ಮಾಡುವರು. ಮೊಟ್ಟೆಯನ್ನು ಪ್ರೋಟೀನ್ ನ ಮೂಲ ಎಂದು ಹೇಳಲಾಗುತ್ತದೆ. 100 ಗ್ರಾಂ ಮೊಟ್ಟೆಯಲ್ಲಿ 12.6 ಪ್ರೋಟೀನ್ ಇದೆ.

ನಮ್ಮ ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಆಮ್ಲೇಟ್ ಬಹಳಷ್ಟು ಸಹಾಯ ಮಾಡುತ್ತದೆ. ಅಲ್ಲದೆ ಅಧಿಕ ತೂಕ ಉಳ್ಳವರು ಬೆಳಗ್ಗಿನ ಉಪಹರದಲ್ಲಿ ಆಮ್ಲೇಟ್ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲದೆ ಆಮ್ಲೇಟ್ ಸ್ನಾಯುಗಳನ್ನು ಬಲಪಡಿಸಿ, ರಕ್ತಸಂಚಾರ ಸುಗಮವಾಗುವಂತೆ ಮಾಡುತ್ತದೆ. ದೃಷ್ಠಿ ಸಂಬಂಧಿ ಕಾಯಿಲೆಗಳಿಗೂ ಆಮ್ಲೇಟ್ ಉಪಯುಕ್ತ ಹಾಗಾಗಿ ದಿನನಿತ್ಯ ಆಮ್ಲೇಟ್ ಸೇವಿಸುವುದರಿಂದ ನಾನಾ ಬಗೆಯ ಲಾಭಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Fiscal Wisdom: ಆರ್ಥಿಕ ಸ್ಥಿರತೆಗೆ ಸರಳ ಸೂತ್ರಗಳು

ಇದನ್ನೂ ಓದಿ: Benefits of Swimming: ಈಜುವುದರಿಂದ ಆಗುತ್ತೆ ಎಂತವರಿಗೂ ಒತ್ತಡ ನಿವಾರಣೆ!

(Best Breakfast: Omelette Health Benefits)

Comments are closed.