School girl : ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

ಕೊಚ್ಚಿ: ಸಿನಿಮಾದಲ್ಲಿ ನಟಿಸಲು ಆಮಿಷವೊಡ್ಡಿ ಶಾಲಾ ಬಾಲಕಿಯೋರ್ವಳನ್ನು( school girl ) ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ಆಲುವಾ ಶ್ರೀಮೂಲನಗರಂ ವಟ್ಟೆಕಟ್ಟುಪರಂಬಿಲ್‌ ಎಂಬಲ್ಲಿ ನಡೆದಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಶಿಕ್ಷಕನನ್ನು ರಾಜು ಎಂದು ಗುರುತಿಸಲಾಗಿದೆ. ಶಿಕ್ಷಕಿಯೋರ್ವಳು ಬಾಲಕಿಗೆ ಸಿನಿಮಾದಲ್ಲಿ ನಟಿಸಲು ಅವಕಾಶವನ್ನು ಕೊಡುವುದಾಗಿ ತಿಳಿಸಿ, ಮನೆಗೆ ಕರೆ ತರುತ್ತಿದ್ದಳು ಈ ವೇಳೆಯಲ್ಲಿ ರಾಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿನಿ ಮನೆಗೆ ಬಂದು ನಡೆದ ಘಟನೆಯನ್ನು ಪೋಷಕರ ಬಳಿಯಲ್ಲಿ ಹೇಳಿಕೊಂಡಿದ್ದಾಳೆ. ಈ ಕುರಿತು ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ರಾಜುವನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದನ್ನೂ ಓದಿ : ಮಹಿಳಾ ಶಾಸಕಿ ಅಶ್ಲೀಲ ವಿಡಿಯೋ ವೈರಲ್

ಇದನ್ನೂ ಓದಿ : ಇಂಟನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ವಕೀಲ ರಾಜೇಶ್‌ ಭಟ್‌ ಮನೆಯಲ್ಲಿ ಶೋಧ ಕಾರ್ಯ

( Acting Lure in cinema : The arrest of a teacher who sexually abused a school girl in Kerala)

Comments are closed.