Kerala NEET exam : ಒಳ ಉಡುಪು ತೆಗೆದು ಪರೀಕ್ಷೆ ಬರೆದವ್ರಿಗೆ, ಮತ್ತೊಂದು ಚಾನ್ಸ್

ಕೊಲ್ಲಂ/ಕೇರಳ :  Kerala NEET exam ನೀಟ್ ಪರೀಕ್ಷೆ ವೇಳೆ ಒಳಉಡುಪು ತೆಗೆಸಿ ಪರೀಕ್ಷೆ ಬರೆಸಿದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಒಳ ಉಡುಪು ತೆಗೆದು ಪರೀಕ್ಷೆ ( inner wear controversy) ಬರೆಯಲು ಆಗದೇ ಸಮಸ್ಯೆಗೊಳಗಾಗಿದ್ದ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗ್ತಿದೆ. ಸೆಪ್ಟೆಂಬರ್ 4 ರಂದು ಮರು ಪರೀಕ್ಷೆ ನಡೆಯಲಿದೆ.

ಜೂನ್ 17 ರಂದು ನಡೆದ ನೀಟ್ ಪರೀಕ್ಷೆ ವೇಳೆ ಕೇರಳದ ಕೊಲ್ಲಂನ ಪರೀಕ್ಷಾ ಕೇಂದ್ರವೊಂದು ರಾಷ್ಟ್ರ ಮಟ್ಟದಲ್ಲಿಸದ್ದು ಮಾಡಿತ್ತು. ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಈ  ಪರೀಕ್ಷಾ ಕೇಂದ್ರಕ್ಕೆ ನೀಟ್ ಎಕ್ಸಾಂ ಬರೆಯಲು ಬಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ವಿದ್ಯಾರ್ಥಿನಿಯರಿಗೆ ಒಳ ಉಡುಪುಗಳನ್ನ ತೆಗೆದು ಬಂದ್ರೆ ಮಾತ್ರ  ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುತ್ತೆ ಅಂತಾ ತಿಳಿಸಿದ್ರು. ಮಾನಸಿಕವಾಗಿ ನೊಂದರೂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದು ಬಂದಿದ್ರು. ಬಳಿಕ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆ ಎದುರಿನಲ್ಲಿ ಈ ವಿಚಾರವನ್ನ ಹೇಳಿಕೊಂಡಾಗ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ದೂರಿನ ಸಂಬಂಧ ಆಂತರಿಕ ತನಿಖೆ ನಡೆಸಿರೋ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಪರೀಕ್ಷಾ ಕೇಂದ್ರದ ಐವರು ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಆರೋಪಿಗಳನ್ನ ಬಂಧಿಸುವಂತೆ ಶಿಫಾರಸ್ಸು ಮಾಡಿತ್ತು.

ಸದ್ಯ ಘಟನೆಯಿಂದ ನೊಂದು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಆಗಿರಲಿಲ್ಲ. ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೊಲ್ಲಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ವರದಿಯಾಗಿದೆ. ಸೆಪ್ಟೆಂಬರ್ 4 ರಂದು ಕೇರಳದ ಕೊಲ್ಲಂನಲ್ಲಿರೋ ಎಸ್.ಎನ್.ಪಬ್ಲಿಕ್ ಸ್ಕೂಲ್ ನಲ್ಲಿ ಪರೀಕ್ಷೆ ನಡೆಸಲಾಗುವುದು ಅಂತಾ ಎನ್ ಟಿ ಎ ತಿಳಿಸಿದೆ. 

ಅದೇ ರೀತಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ಎರಡು ಪರೀಕ್ಷಾ ಕೇಂದ್ರದಲ್ಲಿ ಇಂಥಹುದ್ದೇ ಸಮಸ್ಯೆಯಾಗಿತ್ತು. ಅಲ್ಲೂ ಸಹ ಮರು ಪರೀಕ್ಷೆ ನಡೆಸಲಾಗುವುದು ಅಂತಾ ಎನ್ ಟಿ ಎ ತಿಳಿಸಿದೆ.

ಇದನ್ನೂ ಓದಿ : JEE Advanced 2022 : ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆ: ಪರೀಕ್ಷೆಗೂ ಮುನ್ನ ಈ ಅಂಶ ನೆನಪಿನಲ್ಲಿರಲಿ

ಇದನ್ನೂ ಓದಿ : Virat Kohli not touch bat : “10 ವರ್ಷಗಳಲ್ಲಿ ಮೊದಲ ಬಾರಿ ಒಂದು ತಿಂಗಳು ಬ್ಯಾಟ್ ಮುಟ್ಟಲೇ ಇಲ್ಲ”

Kerala NEET exam- : Re-exam to be conducted for affected students- National Testing Agency- students affected by inner wear controversy

Comments are closed.