Virat Kohli not touch bat : “10 ವರ್ಷಗಳಲ್ಲಿ ಮೊದಲ ಬಾರಿ ಒಂದು ತಿಂಗಳು ಬ್ಯಾಟ್ ಮುಟ್ಟಲೇ ಇಲ್ಲ”

ಬೆಂಗಳೂರು: (Virat Kohli not touch bat) ಆಧುನಿಕ ಕ್ರಿಕೆಟ್’ನಲ್ಲಿ ಕಮಿಟ್ಮೆಂಟ್’ಗೆ ಮತ್ತೊಂದು ಹೆಸರೇ ವಿರಾಟ್ ಕೊಹ್ಲಿ. ಆಧುನಿಕ ಕ್ರಿಕೆಟ್ ದಿಗ್ಗಜನೆಂದೇ ಕರೆಸಿ ಕೊಂಡಿರುವ ಕಿಂಗ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 70 ಶತಕಗಳನ್ನು ಪೂರ್ತಿಗೊಳಿಸಿದ ಲೆಜೆಂಡ್. ಇದೀಗ ವಿರಾಟ್ ಕೊಹ್ಲಿ ಕಳೆದ ಒಂದು ತಿಂಗಳಲ್ಲಿ ತಮ್ಮ ಜೀವನದಲ್ಲಿ ನಡೆದ ಅಚ್ಚರಿಯ ಸಂಗತಿ ಯೊಂದನ್ನು ಬಿಚ್ಚಿಟ್ಟಿದ್ದಾರೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿ ಒಂದು ತಿಂಗಳು ಪೂರ್ತಿ ತಾವು ಕ್ರಿಕೆಟ್ ಬ್ಯಾಟನ್ನು ಟಚ್ ಮಾಡಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿಯನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಹೊರಗೆಡವಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ದಯನೀಯ ವೈಫಲ್ಯ ಎದುರಿಸುತ್ತಿರುವ ಕೊಹ್ಲಿ, ಇಂಗ್ಲೆಂಡ್ ಪ್ರವಾಸದ ನಂತರ ಕ್ರಿಕೆಟ್’ನಿಂದ ಬಿಡುವು ಪಡೆದಿದ್ದರು. ಈ ವೇಳೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಜೊತೆ ಯುರೋಪ್ ಪ್ರವಾಸಕ್ಕೆ ತೆರಳಿದ್ದ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

ಅತಿಯಾದ ಮಾನಸಿಕ ಒತ್ತಡದಿಂದ ಹೊರಬರಲು ಕ್ರಿಕೆಟ್’ನಿಂದ ಒಂದು ತಿಂಗಳು ದೂರವಾಗಿದ್ದ ಕೊಹ್ಲಿ ಆ ಸಂದರ್ಭದಲ್ಲಿ ಒಮ್ಮೆಯೂ ಬ್ಯಾಟ್ ಮುಟ್ಟಿರಲಿಲ್ಲ ಎಂದಿದ್ದಾರೆ.
“ಕಳೆದ 10 ವರ್ಷಗಳಲ್ಲಿ ಮೊದಲ ಬಾರಿ ನಾನು ಒಂದು ತಿಂಗಳು ಪೂರ್ತಿ ಬ್ಯಾಟ್ ಮುಟ್ಟಲೇ ಇಲ್ಲ. ಮನಸ್ಸಿನಲ್ಲಿ ಆಟದ ಕಡೆಗಿನ ಸೆಳೆತ, ಆ ತೀವ್ರತೆ ಹೆಚ್ಚುತ್ತಿರುವಂತೆ ಕಂಡು ಬರುತ್ತಿತ್ತು. ಆದರೆ ದೇಹ ಬೇರೆಯದ್ದೇ ಹೇಳುತ್ತಿತ್ತು. ಸ್ವಲ್ಪ ಬಿಡುವು ತೆಗೆದುಕೊಂಡು ಹೆಜ್ಜೆ ಹಾಕು ಎಂದು ದೇಹ ಹೇಳುತ್ತಿರುವಂತೆ ಭಾಸವಾಗುತ್ತಿತ್ತು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ನನ್ನನ್ನು ಮಾನಸಿಕವಾಗಿ ತುಂಬಾ ಸದೃಢ ವ್ಯಕ್ತಿಯೆಂದೇ ಜನ ನೋಡಿದ್ದಾರೆ ಮತ್ತು ನಾನು ಆ ರೀತಿ ಇದ್ದೇನೆ. ಆಜರೆ ಎಲ್ಲರಿಗೂ ಒಂದು ಮಿತಿ ಎಂಬುದಿರುತ್ತದೆ, ಆ ಮಿತಿಯನ್ನು ನಾವು ಅರಿತುಕೊಳ್ಳಬೇಕು. ಇಲ್ಲವಾದರೆ ಯಾವುದೂ ನಾವಂದುಕೊಂಡಂತೆ ನಡೆಯುವುದಿಲ್ಲ. ಈ ಅವಧಿ ನನಗೆ ತುಂಬಾ ಪಾಠಗಳನ್ನು ಕಲಿಸಿದೆ. ಇಂತಹ ಒಂದು ಹಂತ ನನ್ನ ಜೀವನದಲ್ಲಿ ಬರಲು ನಾನು ಅವಕಾಶವನ್ನೇ ನೀಡಿರಲಿಲ್ಲ. ಅದು ಬಂದಾಗ ಅದನ್ನು ಸ್ವೀಕರಿಸಿದೆ” ಎಂದು ವಿರಾಟ್ ಕೊಹ್ಲಿ ತಮ್ಮ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸದ್ಯ ಏಷ್ಯಾ ಕಪ್ ಟೂರ್ನಿಗಾಗಿ ಭಾರತ ತಂಡದ ಜೊತೆ ದುಬೈನಲ್ಲಿರುವ ವಿರಾಟ್ ಕೊಹ್ಲಿ, ಏಷ್ಯಾ ಕಪ್’ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸಲ್ಲಿದ್ದಾರೆ. ಹಾಲಿ ಚಾಂಪಿಯನ್ ಭಾರತ ತಂಡ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ : Virat Kohli 100 T20 Match : ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಈ ಮಹೋನ್ನತ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ

ಇದನ್ನೂ ಓದಿ : Suresh Raina Comeback IPL : ಐಪಿಎಲ್ ಕಂಬ್ಯಾಕ್‌ಗೆ ಸುರೇಶ್ ರೈನಾ ಬಿಗ್ ಪ್ಲಾನ್, ಸಿಎಸ್‌ಕೆ ಜೆರ್ಸಿ ಧರಿಸಿ ಭರ್ಜರಿ ಪ್ರಾಕ್ಟೀಸ್

Virat Kohli For the first time in 10 years he did not touch bat for a month

Comments are closed.