Kerala: ತಿರುವನಂತಪುರಂ ಶ್ರೀಪದ್ಮನಾಭ ದೇವಾಲಯ ವಿಚಾರ: ಮೂರು ತಿಂಗಳಲ್ಲಿ ಆಡಿಟ್ ಗೆ ಆದೇಶಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ ಕೇರಳದ ತಿರುವನಂತಪುರಂದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ಟ್ರಸ್ಟ್  ಆಡಿಟ್ ಗೆ ಒಳಪಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಳೆದ 25 ವರ್ಷಗಳ ಆದಾಯ ಮತ್ತು ಖರ್ಚಿನ ಲೆಕ್ಕಾಚಾರದ ಪರಿಶೋಧನೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ.

ದೇವಾಲಯ ಹಾಗೂ ಆಡಳಿತ ಮಂಡಳಿಯೂ ಈ ಲೆಕ್ಕ ಪರಿಶೋಧನೆಗೆ ಒಳಪಡಲಿದ್ದು, ಮುಂದಿನ ಮೂರು ತಿಂಗಳಲ್ಲಿ ಆಡಿಟ್ ನಡೆಯಲಿದೆ ಎಂದು ಸುಪ್ರೀಂ ಆದೇಶದಲ್ಲಿ ಸ್ಪಷ್ಟಪಡಿಸಿದೆ.  

ತಿರುವಾಂಕೂರ್ ರಾಜಮನೆತನದಿಂದ ಸ್ಥಾಪನೆಯಾದ ತಿರುವನಂತಪುರಂ ಶ್ರೀಪದ್ಮನಾಭ ಸ್ವಾಮಿ ದೇವಾಲಯ ಹಾಗೂ ಟ್ರಸ್ಟ್ ಗೆ ಕಳೆದ 25 ವರ್ಷಗಳ ಲೆಕ್ಕ ಪರಿಶೋಧನೆಯಿಂದ ವಿನಾಯ್ತಿ ನೀಡುವಂತೆ ಪದ್ಮನಾಭಸ್ವಾಮಿ ಟೆಂಪಲ್ ಟ್ರಸ್ಟ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್ , ಎಸ್.ರವೀಂದ್ರ ಭಟ್, ಬೇಲಾ ತ್ರಿವೇದಿ ಅವರನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಿದೆ. ಟ್ರಸ್ಟ್ ಪರ ಹಿರಿಯ ವಕೀಲ ಅರವಿಂದ್ ದಾತಾರ್, ದೇವಾಲಯದ ಆಡಳಿತ ಮಂಡಳಿ ಪರ ಆರ್. ಬಸಂತ ವಾದ ಮಂಡಿಸಿದ್ದರು.

ಕಳೆದ ವರ್ಷ ದೇವಾಲಯದ ಆಡಳಿತವನ್ನು ಸುಪ್ರೀಂ ಕೋರ್ಟ್ ತಿರುವಾಂಕೂರು ರಾಜಮನೆತನದ ಆಡಳಿತ ಸಮಿತಿಗೆ ಒಪ್ಪಿಸಿತ್ತು. ಅಲ್ಲದೇ ಅಮಿಕಸ್ ಕ್ಯೂರಿ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣಿಯಂ ಸೂಚಿಸಿದಂತೆ ಕಳೆದ 25 ವರ್ಷಗಳಿಂದ ದೇವಸ್ಥಾನದ ಆದಾಯ ಮತ್ತು ವೆಚ್ಚಗಳ ಲೆಕ್ಕ ಪರಿಶೋಧನೆಗೆ ಆದೇಶಿಸುವಂತೆ ನ್ಯಾಯಾಲಯವೂ ಆಡಳಿತಾತ್ಮಕ ಸಮಿತಿಗೆ ನಿರ್ದೇಶಿಸಿತ್ತು.

ದೇವಸ್ಥಾನವೂ ಇಂದು ಆರ್ಥಿಕವಾಗಿ ಬಹಳ ಬಿಕ್ಕಟ್ಟಿನಲ್ಲಿದೆ. ಟ್ರಸ್ಟ್ ದೇವಾಲಯದ ಖರ್ಚುಗಳನ್ನು ನಿಭಾಯಿಸಬೇಕು.ಆದರೆ ಅವರು ತಪ್ಪಿಸಿಕೊಳ್ಳುವ ತಂತ್ರದಲ್ಲಿದ್ದಾರೆ. ಹೀಗಾಗಿ ದೇವಸ್ಥಾನದ ಹಣ ಎಷ್ಟಿದೆ ಎಂದು ತಿಳಿಯಲು ಆಡಿಟ ನಡೆಯಬೇಕೆಂದು ಆಡಳಿತ ಸಮಿತಿ ಒತ್ತಾಯಿಸಿದೆ.

(Kerala Temple Trust To Face Audit, Says Supreme Court)

Comments are closed.