Kolkata ED Raid: ED ದಾಳಿಯಲ್ಲಿ ಹಣದ ರಾಶಿ ಪತ್ತೆ

ಕೋಲ್ಕತ್ತಾ : Kolkata ED Raid ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಬಳಸಿ ವಂಚನೆ ಆರೋಪ ಕೇಸ್ ತನಿಖೆ ನಡೆಸ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಶನಿವಾರ ಅಪಾರ ಪ್ರಮಾಣದ ನಗದು ಹಣವನ್ನ ಉದ್ಯಮಿ ಮನೆಯಿಂದ ಜಪ್ತಿ ಮಾಡಿದ್ದಾರೆ.

ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಆಮೀರ್ ಖಾನ್ S/O ನಿಸಾರ್ ಅಹ್ಮದ್ ಖಾನ್ ಅನ್ನೋರಿಗೆ ಸೇರಿದ ನಿವಾಸ, ಕಚೇರಿ ಸೇರಿ ಒಟ್ಟು 7 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ರು. ಶನಿವಾರ ಬೆಳಗ್ಗೆ ಆರಂಭವಾದ ಜಾರಿ ನಿರ್ದೇಶನಾಲಯದ ದಾಳಿ ಭಾನುವಾರವೂ ಮುಂದುವರಿದಿದೆ. ಸದ್ಯ ಆಮೀರ್ ನಿವಾಸದಲ್ಲಿ ಬರೋಬ್ಬರಿ 17 ಕೋಟಿಗೂ ಅಧಿಕ ನಗರದು ಮೊತ್ತವನ್ನ ಇಡಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಹಣ ಮಾತ್ರವಲ್ಲದೇ ನೋಟು ಎಣಿಸುವ ಯಂತ್ರಗಳನ್ನೂ ಆಮೀರ್ ಖಾನ್ ನಿವಾಸದಿಂದ ಇಡಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಒಟ್ಟು 5 ದೊಡ್ಡ ದೊಡ್ಡ ಟ್ರಂಕ್ ಗಳಲ್ಲಿ 17 ಕೋಟಿಗೂ ಅಧಿಕ ಮೊತ್ತವನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಅಪಾರ ಪ್ರಮಾಣದ ಮೊತ್ತದಲ್ಲಿ 200 ರೂಪಾಯಿ ಮುಖಬೆಲೆಯ ನೋಟುಗಳಿಂದ ಹಿಡಿದು 2 ಸಾವಿರ ರೂಪಾಯಿ ವರೆಗಿನ ಎಲ್ಲ ಮುಖಬೆಲೆಯ ನೋಟುಗಳು ಇದ್ವು ಅನ್ನೋದು ಗೊತ್ತಾಗಿದೆ.

E-Nuggets ಎಂಬ ಮೊಬೈಲ್ ಗೇಮಿಂಗ್ ಆಪ್ ಬಳಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಆರೋಪಿ ಆಮೀರ್ ಖಾನ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿತ್ತು. ಕಳೆದ ವರ್ಷ ಫೆಬ್ರವರಿ 15 ರಂದೇ ಖಾನ್ ಸೇರಿದಂತೆ ಹಲವರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ರು. ದೂರನ್ನ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾರಿ ನಿರ್ದೇಶನಾಲಯ (ED) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಸದ್ಯ ದಾಳಿ ಮುಂದುವರೆದಿದೆ. ಅಮೀರ್ ಖಾನ್, S/o ನೇಸರ್ ಅಹ್ಮದ್ ಖಾನ್ ಇ-ನಗ್ಗಟ್ಸ್ ಎಂಬ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು, ಇದನ್ನು ಸಾರ್ವಜನಿಕರನ್ನು ವಂಚಿಸುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆರಂಭಿಕ ಅವಧಿಯಲ್ಲಿ, ಬಳಕೆದಾರರಿಗೆ ಕಮಿಷನ್‌ನೊಂದಿಗೆ ಬಹುಮಾನ ನೀಡಲಾಯಿತು ಮತ್ತು ವಾಲೆಟ್‌ನಲ್ಲಿನ ಬ್ಯಾಲೆನ್ಸ್ ಅನ್ನು ತೊಂದರೆಯಿಲ್ಲದೆ ಹಿಂಪಡೆಯಬಹುದು ಎಂದು ಹೇಳಿಕೆ ತಿಳಿಸಿದೆ. ಮೊದ ಮೊದಲು ಬಳಕೆದಾರರಿಗೆ ಕಮಿಷನ್ ನೀಡಿದ್ದಕ್ಕೆ, ಮತ್ತಷ್ಟು ಹಣದ ಆಸೆಗೆ ಬಿದ್ದು ಹೆಚ್ಚು ಮೊತ್ತ ಹೂಡಿಕೆ ಮಾಡಿದ್ರು. ಬಳಿಕ ಆಮೀರ್ ಖಾನ್ ಬಳಕೆದಾರರನ್ನ ವಂಚಿಸಿದ್ದಾರೆ ಅನ್ನೋ ಮಾಹಿತಿ ಇದೆ.

ಇದನ್ನೂ ಓದಿ : Small Tirupati Manjuguni of Karnataka: ಕರ್ನಾಟಕದ ಚಿಕ್ಕ ತಿರುಪತಿ ಮಂಜುಗುಣಿ : ರಥೋತ್ಸವದಂದು ಇಲ್ಲಿಗೆ ಬರುತ್ತಾನೆ ತಿರುಪತಿ ವೆಂಕಟೇಶ್ವರ

ಇದನ್ನೂ ಓದಿ : Rahul Gandhi: ರಾಹುಲ್ ಪಾದ್ರಿ ಭೇಟಿ.. ಬಿಜೆಪಿ ಕಿಡಿ..!

Kolkata ED Raid- A total of Rs 17.10 crores of cash were recovered in 5 trunks by ED officials

Comments are closed.