Small Tirupati Manjuguni of Karnataka: ಕರ್ನಾಟಕದ ಚಿಕ್ಕ ತಿರುಪತಿ ಮಂಜುಗುಣಿ : ರಥೋತ್ಸವದಂದು ಇಲ್ಲಿಗೆ ಬರುತ್ತಾನೆ ತಿರುಪತಿ ವೆಂಕಟೇಶ್ವರ

(Small Tirupati Manjuguni of Karnataka)ಎಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪ ದೇವಸ್ಥಾನವು ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯಗಳಲ್ಲೊಂದು. ಈ ದೇವಾಲಯವನ್ನು ಹದಿನಾರನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ಕಟ್ಟಲಾಗಿದೆ. ಪುರಾಣಗಳ ಪ್ರಕಾರ ವೆಂಕಟೇಶ್ವರನನ್ನು ವಿಷ್ಣುವಿನ ಅವತಾರ ಎಂದು ನಂಬಲಾಗಿದೆ. ವಿಷ್ಣು ಮಾನವ ರೂಪದಲ್ಲಿ ಭೂಮಿಯ ಮೇಲೆ ಜನಿಸಿ ಲಕ್ಷೀಯನ್ನು ಮದುವೆಯಾಗುತ್ತಾನೆ. ಸಾವಿರಾರು ಭಕ್ತರು ಕಾತುರದಿಂದ ಕಾದು ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯವಾಗದ ಭಕ್ತರು ಕರ್ನಾಟಕದಲ್ಲಿರುವ ಈ ಚಿಕ್ಕ ತಿರುಪತಿಗೆ ಭೇಟಿ ನೀಡಬಹುದಾಗಿದೆ. ಅಷ್ಟಕ್ಕೂ ಈ ದೇವಸ್ಥಾನ ಇರುವುದಾದ್ರೂ ಎಲ್ಲಿ. ಇಲ್ಲಿನ ವಿಶೇಷತೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 28ಕಿಲೋ ಮೀಟರ್ ದೂರದಲ್ಲಿರುವ ಹಚ್ಚಹಸಿರಿನ ವನರಾಶಿ, ಬೆಟ್ಟಗುಡ್ಡಗಳ ನಡುವಲ್ಲಿರುವ ಮಂಜುಗುಣಿಯಲ್ಲಿ ಶ್ರೀ ವೆಂಕಟೇಶ್ವರ ದೇವರು ನೆಲೆಸಿದ್ದಾರೆ. ಇಲ್ಲಿನ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸಿದ್ರೆ, ತಿರುಪತಿಯ ವೆಂಕಟೇಶ್ವರ ದೇವರು ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಾ ಸಂಚರಿಸುತ್ತಾ ಈ ಪ್ರದೇಶಕ್ಕೆ ಬಂದಿದ್ದಾನೆ. ನಂತರದಲ್ಲಿ ಮಂಜುಗುಣಿಯಲ್ಲಿಯೇ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ಹೀಗಾಗಿಯೇ ಈ ದೇವಾಲಯವು ಕರ್ನಾಟಕದ ತಿರುಪತಿ ಅಥವಾ ಚಿಕ್ಕ ತಿರುಪತಿ ಎಂದು ಕರೆಸಿಕೊಳ್ಳುತ್ತದೆ.

ಈ ಪ್ರಸಿದ್ಧ ಪುಣ್ಯಕ್ಷೇತ್ರವಿರುವ ಸ್ಥಳವು ಸದಾ ಮಂಜಿನಿಂದ ಆವೃತವಾಗಿರುತ್ತದೆ. ಹಾಗಾಗಿ ಈ ಊರನ್ನು ಮಂಜುಗುಣಿ ಎಂದು ಕರೆಯಲಾಗುತ್ತದೆ. ಇನ್ನು ಇಲ್ಲಿರುವ ವೆಂಕಟರಮಣ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಇಲ್ಲಿರುವಂತಹ ಮುಖ್ಯ ದೇವರ ವಿಗ್ರಹವು ಸಾವಿರ ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.

ಇದನ್ನೂ ಓದಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ 10 ಸಾವು

ಇದನ್ನೂ ಓದಿ: ಕೇರಳದ ಜನಪ್ರಿಯ ಸುಗ್ಗಿ ಹಬ್ಬ ಓಣಂ : ಏನಿದರ ವಿಶೇಷತೆ ?


ಈ ದೇವಾಲಯದಲ್ಲಿ ವರ್ಷಂಪ್ರತಿ ಎಪ್ರಿಲ್ ತಿಂಗಳಿನಲ್ಲಿಯೇ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಲ್ಲಿ ರಥೋತ್ಸವ ನಡೆಯುವುದು ವಿಶೇಷ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತಿರುಪತಿಯಿಂದ ವೆಂಕಟೇಶ್ವರ ದೇವರು ವಾಹನದಲ್ಲಿ ಮಂಜುಗುಣಿಗೆ ಬರುತ್ತಾನೆ ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ಮಂಜುಗುಣಿಯಲ್ಲಿ ರಥೋತ್ಸವ ನಡೆಯುವ ದಿನದಂದು ತಿರುಪತಿಯಲ್ಲಿ ಒಂದು ದಿನದ ಪೂಜೆಯನ್ನು ನಿಲ್ಲಿಸಲಾಗುತ್ತದೆ. ಇನ್ನು ತಿರುಪತಿಯಲ್ಲಿ ದೇವರಿಗೆ ಅಲಂಕಾರ ಮಾಡಿರುವ ವಸ್ತ್ರಾಭರಣಗಳನ್ನು ಇಲ್ಲಿಗೆ ತಂದು ದೇವರಿಗೆ ಅಲಂಕಾರವನ್ನು ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಈ ದೇವಾಲಯದಲ್ಲಿ ತಿಮ್ಮಪ್ಪನ ದರ್ಶನವನ್ನು ಪಡೆದರೆ ತಿರುಪತಿ ದೇವರ ದರ್ಶನ ಪಡೆದಷ್ಟೆ ಪುಣ್ಯ ಎನ್ನುವುದು ಜನರ ಭಾವನೆ.

ಇದನ್ನೂ ಓದಿ: ದೇಶಕ್ಕೆ ಪ್ರಳಯ ಹಾಗೂ ಸುನಾಮಿ ಕಾದಿದೆ : ಕೋಡಿಶ್ರೀ ಭಯಾನಕ ಭವಿಷ್ಯ

small tirupati manjuguni sirasi uttarakannada karnataka

Comments are closed.