Rahul Gandhi: ರಾಹುಲ್ ಪಾದ್ರಿ ಭೇಟಿ; ಬಿಜೆಪಿ ಕಿಡಿ..!

ಚೆನ್ನೈ : Rahul Gandhi Meets Pastor :ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಿತ ಪಾದ್ರಿಯವ್ರನ್ನ ಭೇಟಿಯಾಗಿರೋದು ಮತ್ತು ಆ ವಿವಾದಿತ ಪಾದ್ರಿ ದೇವರ ಕುರಿತು ನೀಡಿರೋ ಹೇಳಿಕೆ ಈಗ ರಾಹುಲ್ ಗಾಂಧಿ ಸುತ್ತ ಮತ್ತೊಂದು ವಿವಾದ ಹುಟ್ಟಿಕೊಳ್ಳುವಂತೆ ಮಾಡಿದೆ.

ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದ ವರೆಗೂ 150 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಸೆಪ್ಟೆಂಬರ್ 10 ರಂದು. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವಾದಿತ ಧರ್ಮಗುರು ಕ್ಯಾಥೋಲಿಕ್ ಚರ್ಚ್ ನ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನ ಭೇಟಿ ಮಾಡಿದ್ರು. ಪೊನ್ನಯ್ಯ ಭೇಟಿಯನ್ನ ಬಿಜೆಪಿ ಸಾಮಾಜಿಕ ಜಾಲತಾಣದಲ್ಲೇ ಟೀಕಿಸಿದೆ. ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪಾದ್ರಿ ಜಾರ್ಜ್ ಪೊನ್ನಯ್ಯ  ಈ ಹಿಂದೆ ಅರೆಸ್ಟ್ ಆಗಿದ್ರು.  ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಪಾದ್ರಿ ಜಾರ್ಜ್ ಪೊನಯ್ಯರನ್ನ ಮಧುರೈನಲ್ಲಿ ಬಂಧಿಸಲಾಗಿತ್ತು.ಇದನ್ನೇ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ ‘ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೋ’ ಅಥವಾ ‘ಭಾರತ್ ತೋಡೋ’ ಅಂದ್ರೆ ಭಾರತವನ್ನ ವಿಭಜಿಸುವ ಕೆಲಸ ಮಾಡುತ್ತಿದ್ದಾರೋ ಅಂತಾ ಟ್ವೀಟ್  ನಲ್ಲೇ ಪ್ರಶ್ನಿಸಿದ್ರು.

ಏಸು ಕ್ರಿಸ್ತ ಮಾತ್ರ ನಿಜವಾದ ದೇವರು : ಇನ್ನು ಇದೇ ವೇಳೆ ಪಾದ್ರಿ ಜಾರ್ಜ್ ಪೊನ್ನಯ್ಯ ರಾಹುಲ್ ಗಾಂಧಿ ಭೇಟಿ ವೇಳೆ ಜೀಸಸ್ ಕ್ರಿಸ್ತ್ ಮಾತ್ರ ನಿಜವಾದ ದೇವರು ಎಂದಿರೋದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಮತ್ತು ಪಾದ್ರಿ ಪೊನ್ನಯ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಭೆಯಲ್ಲಿ ಪಾದ್ರಿ ಹೇಳಿದ್ದೇನು : ವೈರಲ್ ವಿಡಿಯೋದಲ್ಲಿ, ವಿವಾದಾತ್ಮಕ ಪಾದ್ರಿ ಜಾರ್ಜ್ ಪೊನ್ನಯ್ಯ ರಾಹುಲ್ ಗಾಂಧಿ  ಮುಂದೆ ಯೇಸು ಕ್ರಿಸ್ತನನ್ನು ನಿಜವಾದ ದೇವರು ಎಂದು ವಿವರಿಸಿದ್ದಾರೆ. ಆಗ ರಾಹುಲ್ ಗಾಂಧಿ ಪಾದ್ರಿ ಪೊನ್ನಯ್ಯ ಬಳಿ ಯೇಸು ಕ್ರಿಸ್ತನು ದೇವರ ರೂಪವೇ? ಅದು ನಿಜವೆ? ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಪ್ರಶ್ನೆಗೆ ಉತ್ತರಿಸಿರುವ ವಿವಾದಿತ ಪಾದ್ರಿ ಜಾರ್ಜ್ ಪೊನ್ನಯ್ಯ ಜೀಸಸ್ ಕ್ರೈಸ್ತ್ ಮಾತ್ರ ನಿಜವಾದ ದೇವರು, ಶಕ್ತಿ ದೇವಿ ಅಥವಾ ದೇವತೆಗಳು ದೇವರಲ್ಲ ಎಂದು ಹೇಳಿದ್ದಾರೆ. ಸದ್ಯ ಹಿಂದೂ ದೇವರು ನಿಜವಾದ ದೇವರು ಅಲ್ಲ ಅನ್ನೋ ಅರ್ಥದಲ್ಲಿ ಕೊಟ್ಟಿರೋ ಹೇಳಿಕೆನ್ನೇ ಇಟ್ಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದೆ. ಇದು ವಿರೋಧ ಪಕ್ಷದ ಹಿಂದೂ ವಿರೋಧಿ ಮುಖವನ್ನು ತೋರಿಸುತ್ತದೆ ಎಂದು ಆರೋಪಿಸಿದೆ.

ಇದಕ್ಕೆ ಕಾಂಗ್ರೆಸ್ ಸಹ ತಿರುಗೇಟು ನೀಡಿದೆ. ಬಿಜೆಪಿ ತನ್ನ ದ್ವೇಷದ ಕಾರ್ಖಾನೆ ಮೂಲಕ ಕಿಡಿಗೇಡಿತನವನ್ನು ಹರಡುತ್ತಿದೆ ಎಂದಿದೆ. ‘ಭಾರತ್ ಜೋಡೋ ಯಾತ್ರೆ’ಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಬಿಜೆಪಿ ಮತ್ತಷ್ಟು ಹತಾಶವಾಗಿದೆ ಅಂತಾ ಕಾಂಗ್ರೆಸ್ ಎದಿರೇಟು ಕೊಟ್ಟಿದೆ.

ಇದನ್ನೂ ಓದಿ : Bengaluru Power cuts : ಬೆಂಗಳೂರಿನ ಈ ಪ್ರದೇಶಗಳಲ್ಲಿ 2 ದಿನ ವಿದ್ಯುತ್ ಕಡಿತ: ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Government job for Praveen Nettar’s wife :ಪ್ರವೀಣ್ ನೆಟ್ಟಾರ್ ಪತ್ನಿಗೆ ಸರ್ಕಾರಿ ಉದ್ಯೋಗ: ಸಿ.ಎಂ ಬೊಮ್ಮಾಯಿ ಭರವಸೆ

Rahul Gandhi-Rahul Gandhi Meets Pastor,Triggers Bharat Jodo vsTodo

Comments are closed.