Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್ ಸ್ಪಷ್ಟನೆ
Shashi Tharoor : ಸಂಸತ್ತಿನಲ್ಲಿ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆಯೊಂದಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸುಪ್ರಿಯಾ ಸುಳೆಯ ಸಮೀಪ ಬಂದ ಶಶಿ ತರೂರ್ ಮುಖದಲ್ಲಿದ್ದ ಭಾವ ಕಂಡು ಟ್ರೋಲಿಗರು ತರೂರ್ರನ್ನು ಸಿಕ್ಕಾಪಟ್ಟೆ ಕಾಲೆಳೆದಿದ್ದರು.
It was a great speech by Farooq Abdullah. Must listen for everyone. @ShashiTharoor pic.twitter.com/STQe0yulxG
— Farrago Abdullah (@abdullah_0mar) April 6, 2022
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಯನ್ನು ಎದುರಿಸಿದ ಬಳಿಕ ಶಶಿ ತರೂರ್ ಟ್ವೀಟ್ ಮೂಲಕ ಈ ಘಟನೆಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋವನ್ನು ನೋಡಿ ಆನಂದಿಸಿದ ಪ್ರತಿಯೊಬ್ಬರಿಗೂ ನಾನು ಈ ಮೂಲಕ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆಯಲ್ಲಿ ಫಾರೂಕ್ ಅಬ್ದುಲ್ಲಾ ಮಾತನಾಡಿದ ಬಳಿಕ ಸುಪ್ರಿಯಾ ಸುಳೆ ಮಾತನಾಡುವವರಿದ್ದರು. ಹೀಗಾಗಿ ಅವರು ನನ್ನ ಬಳಿ ಪ್ರಶ್ನೆಯೊಂದನ್ನು ಕೇಳಿದ್ದರು. ಫಾರೂಕ್ಗೆ ನಮ್ಮ ಸಂಭಾಷಣೆಯಿಂದ ಯಾವುದೇ ತೊಂದರೆಯಾಗಬಾರದೆಂದು ಸುಪ್ರಿಯಾ ಸಣ್ಣದಾಗಿ ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕಾದ್ದರಿಂದ ನಾನು ಡೆಸ್ಕ್ ಮೇಲೆ ಒರಗಬೇಕಾಗಿ ಬಂತು ಎಂದು ಬರೆದುಕೊಂಡಿದ್ದಾರೆ.
For all those who've been enjoying themselves at @supriyaSule's &my expense over our brief exchange in the Lok Sabha, she was asking me a policy question because she was about to speak next. She was speaking softly so as not to disturb FarooqSahib, so i leaned over to hear her.🙏
— Shashi Tharoor (@ShashiTharoor) April 7, 2022
ಸಂಸತ್ತಿನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಾತನಾಡುತ್ತಿದ್ದ ವೇಳೆಯಲ್ಲಿ ಅವರ ಪಕ್ಕದಲ್ಲೇ ಕುಳಿತಿದ್ದ ಸುಪ್ರಿಯಾ ಸುಳೆ ಹಿಂದೆ ಇದ್ದ ಶಶಿ ತರೂರ್ ಜೊತೆ ಸಂಭಾಷಣೆ ನಡೆಸುತ್ತಿದ್ದರು. ಇಬ್ಬರೂ ಮಾತುಕತೆಯಲ್ಲಿ ಮಗ್ನರಾಗಿದ್ದ ವಿಡಿಯೋಗಳು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು.
ಇದನ್ನು ಓದಿ : Andhra Pradesh Cabinet :ಆಂಧ್ರಪ್ರದೇಶದಲ್ಲಿ ಎಲ್ಲಾ 24 ಸಚಿವರಿಂದ ರಾಜೀನಾಮೆ
ಇದನ್ನೂ ಓದಿ : BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ
“Kuch Toh Log Kahenge”: Shashi Tharoor On Video Of Chat With NCP MP
Comments are closed.