PM Modi Visits Mother : ಪ್ರಧಾನಿ ಮೋದಿ ತಾಯಿಗೆ ನೂರರ ಸಂಭ್ರಮ : ತಾಯಿಯ ಆಶೀರ್ವಾದ ಪಡೆದ ‘ನಮೋ’

ಗುಜರಾತ್​ : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್​​ ತಮ್ಮ 100ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಯಲ್ಲಿ ಗುಜರಾತ್​​ನ ಗಾಂಧಿ ನಗರದಲ್ಲಿರುವ ತಮ್ಮ ತಾಯಿಯ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ (PM Modi Visits Mother) ತಮ್ಮ ತಾಯಿಯ ಆಶೀರ್ವಾದ ಪಡೆದು ಅವರ ಪಾದ ಪೂಜೆ ಮಾಡಿದರು. 1923ರ ಜೂನ್​ 18ರಂದು ಜನಿಸಿದ ಹೀರಾಬೆನ್​ ಇಂದು ತಮ್ಮ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ .ಅಲ್ಲದೇ ಪ್ರಧಾನಿ ಮೋದಿ ತಮ್ಮ ತಾಯಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ.

ಅಮ್ಮ ಎನ್ನುವುದು ಕೇವಲ ಒಂದು ಪದವಲ್ಲ .ಇದು ಭಾವನೆಗಳ ವ್ಯಾಪ್ತಿಯನ್ನು ಸೆರೆ ಹಿಡಿಯುತ್ತದೆ. ಇಂದು ನನ್ನ ತಾಯಿ ಹೀರಾ ಬೆನ್​ ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ನಾನು ಸಂತೋಷ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ ಎಂದು ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇಂದು ನನ್ನ ತಾಯಿ ಶ್ರೀಮತಿ ಹೀರಾಬೆನ್​ ತಮ್ಮ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನಾನು ತುಂಬಾ ಸಂತೋಷ ವ್ಯಕ್ತಪಡಿಸುತ್ತಿದ್ದೇನೆ. ಅಲ್ಲದೇ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸಿದ್ದೇಣೆ. ಇದು ಅವರ ಜನ್ಮ ಶತಮಾನೋತ್ಸವವಾಗಿದೆ. ನನ್ನ ತಂದೆ ಬದುಕಿದ್ದರೆ ಕಳೆದ ವರ್ಷ ಅವರು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದರು . ಇಂದು ನನ್ನ ತಾಯಿಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರೋದ್ರಿಂದ ನನಗೆ 2022ನೇ ವರ್ಷ ಅತ್ಯಂತ ವಿಶೇಷವಾಗಿದೆ. ನನ್ನ ತಂದೆಯೂ ಶತಮಾನೋತ್ಸವ ಪೂರೈಸಬೇಕಿತ್ತು ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಒಂದು ದಿನದ ಪ್ರವಾಸಕ್ಕಾಗಿ ಗುಜರಾತ್​ನಲ್ಲಿರುವ ಪ್ರಧಾನಿ ಮೋದಿ ವಡೋದರಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಮುನ್ನ ಪಾವಗಡ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಹುಟ್ಟೂರು ವಡ್ನಗರದಲ್ಲಿ ತಾಯಿಯ ಜನ್ಮದಿನದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋದಿ ಕುಟುಂಬವು ಅಹಮದಾಬಾದ್‌ನ ಜಗನ್ನಾಥ ದೇವಾಲಯದಲ್ಲಿ ಸಮುದಾಯ ಭೋಜನವನ್ನು ಸಹ ಯೋಜಿಸಿದೆ.

ಇದನ್ನು ಓದಿ : England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

ಇದನ್ನೂ ಓದಿ : Big Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?

“Maa…This Isn’t A Mere Word”: PM Modi Visits Mother On Her Birthday

Comments are closed.