Mallikarjun Kharge : ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ, ಹರಕೆಯ ಕುರಿಯಾದ್ರಾ ಮಲ್ಲಿಕಾರ್ಜುನ ಖರ್ಗೆ ?

ನವದೆಹಲಿ : Mallikarjun Kharge ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಗೆ ಶಶಿ ತರೂರ್ ವಿರುದ್ಧ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹರಕೆಯ ಕುರಿಯಾದ್ರಾ.. ಇಂಥದ್ದೊಂದು ಅನುಮಾನ ಅವರೇ ಆಡಿದ ಮಾತಿನಿಂದ ಹುಟ್ಟಿಕೊಂಡಿದೆ.  

ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕ ಮಾತುಗಳನ್ನ ಆಡಿದ್ರು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ ಅಥವಾ ರಾಹುಲ್ ಗಾಂಧಿ ಅವರೇ ಎಂಬ ಪ್ರಶ್ನೆಗೆ  ಮಾರ್ಮಿಕ ಉತ್ತರವನ್ನ ನೀಡಿದ್ರು.

ಖರ್ಗೆ ಹೇಳಿದ್ದೇನು? : ‘ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ’ ಇದು ಬುಧವಾರ ಮಲ್ಲಿಕಾರ್ಜುನ ಖರ್ಗೆ ಆಡಿದ ಮಾತು. ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ ಅಥವಾ ರಾಹುಲ್ ಗಾಂಧಿ ಅವರೇ ಆಗ್ತಾರಾ ಎಂದು ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಸಿದ ಖರ್ಗೆ ನಾನು ಸಾಂಸ್ಥಿಕ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ, ‘ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ’ ಎಂಬ ಮಾತಿದೆ. ಅಂದ್ರೆ ಕುರಿ ಬಕ್ರೀದ್ ಹಬ್ಬದ ದಿನ ಬಲಿಯಾಗದೇ ಇದ್ರೆ ಮೊಹರಂ ನಲ್ಲಿ ಡ್ಯಾನ್ಸ್ ಮಾಡುತ್ತೆ ಎಂದು. ಆ ಪ್ರಕಾರ ಮೊದಲು ಈ ಚುನಾವಣೆ  ಮುಗಿದು ನಾನು ಅಧ್ಯಕ್ಷನಾಗಲಿ. ಮುಂದೆ ಉಳಿದಿದ್ದನ್ನ ಹೇಳ್ತೀನಿ ಅಂದ್ರು.

ಚುನಾವಣೆಗೆ ಸ್ಪರ್ಧಿಸಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಖರ್ಗೆ ಅವರು ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಶಶಿ ತರೂರ್ ಅವರನ್ನು ಎದುರಿಸಲಿದ್ದಾರೆ. ಇಬ್ಬರೂ ಎದುರಾಳಿಗಳಾಗಿದ್ದರೂ, ತಮ್ಮ ಮತ್ತು ತರೂರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಖರ್ಗೆ ಹೇಳಿದರು, ಮತ್ತು ಇಬ್ಬರೂ ಚುನಾವಣೆಗಾಗಿ ಮಾತ್ರ ಪರಸ್ಪರ ಸ್ಪರ್ಧೆ ಇದೆ. ಆದ್ರೆ, ನಾವಿಬ್ಬರೂ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ ಎಂದು ಒತ್ತಿ ಹೇಳಿದರು. ಮಂಗಳವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖರ್ಗೆ ಅವರನ್ನ ಅಧ್ಯಕ್ಷೀಯ ಚುನಾವಣೆಗೆ ಆಯ್ಕೆ ಮಾಡಿದ್ದಾರೆ ಎಂಬ ತರೂರ್ ಮಾತನ್ನ ಖರ್ಗೆ ತಳ್ಳಿ ಹಾಕಿದ್ರು.  

ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ನನ್ನ ಹೆಸರನ್ನು ಸೂಚಿಸಿರುವುದು ವದಂತಿ, ನಾನು ಈ ರೀತಿ ಹೇಳಿಲ್ಲ. ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯ ಭಾಗವಾಗುವುದಿಲ್ಲ ಅಥವಾ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ,  ಎಂದು ಖರ್ಗೆ ತಿಳಿಸಿದ್ರು. ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ : Kerala Horror : ಕೇರಳದಲ್ಲಿ ನರಬಲಿ.. ಕೊಂದ್ರು ಬೇಯಿಸಿ ತಿಂದ್ರು

ಇದನ್ನೂ ಓದಿ : Hijab Verdict Today: ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಭವಿಷ ನಿರ್ಧಾರ ಸಾಧ್ಯತೆ..?

ಇದನ್ನೂ ಓದಿ : Bengal Warriors vs Bengaluru Bulls : ಬೆಂಗಳೂರು ಬುಲ್ಸ್‌ಗೆ ಮೊದಲ ಸೋಲು, ಮನೆಯಂಗಳದಲ್ಲಿ ಸೋತ ಕೆಂಪುಗೂಳಿಗಳು

Mallikarjun Kharge Congress presidential candidate on prime ministerial candidate in the 2024 Lok Sabha polls

Comments are closed.