Bengal Warriors vs Bengaluru Bulls : ಬೆಂಗಳೂರು ಬುಲ್ಸ್‌ಗೆ ಮೊದಲ ಸೋಲು, ಮನೆಯಂಗಳದಲ್ಲಿ ಸೋತ ಕೆಂಪುಗೂಳಿಗಳು

ಬೆಂಗಳೂರು: (Bengal Warriors vs Bengaluru Bulls)ಸತತ ಎರಡು ಗೆಲುವುಗಳಿಂದ ಬೀಗುತ್ತಿದ್ದ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ (Pro Kabaddi League season 9) ಮೊದಲ ಸೋಲುಂಡಿದೆ.ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಕೆಂಪು ಗೂಳಿ ಖ್ಯಾತಿಯ ಬುಲ್ಸ್ ಪಡೆ (Bengalru Bulls), ಬಲಿಷ್ಠ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 33-42ರ ಅಂತರದಲ್ಲಿ ಸೋಲು ಕಂಡಿತು. ಪಂದ್ಯದ ಆರಂಭದಲ್ಲೇ ಬೆಂಗಾಲ್ ವಾರಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿದ ಬೆಂಗಳೂರು ಬುಲ್ಸ್ ಆರಂಭಿಕ ಮುನ್ನಡೆ ಪಡೆಯಿತು. ಆದರೆ ಪ್ರಥಮಾರ್ಧದ ಅಂತ್ಯದಲ್ಲಿ ಮಣಿಂದರ್ ಸಿಂಗ್ ನಾಯಕತ್ವದ ವಾರಿಯರ್ಸ್ ಪಡೆ ತಿರುಗಿ ಬಿದ್ದದ್ದರಿಂದ ಪಂದ್ಯ ಸಮಬಲದಲ್ಲಿ ಸಾಗಿತು. ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಬೆಂಗಾಲ್ ವಾರಿಯರ್ಸ್ ಮೊದಲಾರ್ಧದ ಅಂತ್ಯಕ್ಕೆ 15-14ರ ಅಲ್ಪ ಮುನ್ನಡೆ ಪಡೆಯಿತು.

(Bengal Warriors vs Bengaluru Bulls) ದ್ವಿತೀಯಾರ್ಧದಲ್ಲಿ ಕೆಂಪು ಗೂಳಿಗಳು ಮಂಕಾದ್ರೆ, ವಾರಿಯರ್ಸ್ ಪಡೆ ಅಕ್ಷರಶಃ ಅಬ್ಬರಿಸಿತು. ಕಡೆಯ 20 ನಿಮಿಷಗಳ ಆಟದಲ್ಲಿ ಬೆಂಗಾಲ್ ವಾರಿಯರ್ಸ್ 27 ಅಂಕಗಳನ್ನು ಕಲೆ ಹಾಕಿದ್ರೆ, ಬೆಂಗಳೂರು ಬುಲ್ಸ್ ಕೇವಲ 19 ಅಂಕ ಸಂಪಾದಿಸಿತು. ಅಂತಿಮವಾಗಿ 42-33ರ ಅಂತರದಲ್ಲಿ ಪಂದ್ಯ ಗೆದ್ದ ವಾರಿಯರ್ಸ್ ಬಳಗ ಲೀಗ್’ನಲ್ಲಿ ಸತತ 2ನೇ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು. ಮೊದಲ ಸೋಲು ತಂಡ ಬುಲ್ಸ್ 2ರಿಂದ 4ನೇ ಸ್ಥಾನಕ್ಕೆ ಕುಸಿಯಿತು. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 11 ರೇಡ್ ಪಾಯಿಂಟ್ಸ್ ಕಲೆ ಹಾಕಿದ್ರೆ, ಅನುಭವಿ ಲೆಫ್ಟ್ ಕಾರ್ನರ್ ಡಿಫೆಂಡರ್ ಗಿರೀಶ್ ಮಾರುತಿ ಎರ್ನಕ್ 5 ಅಂಕ ಗಳಿಸಿದರು. ಬುಲ್ಸ್ ಪರ ಭರತ್ 8 ಹಾಗೂ ವಿಕಾಸ್ ಖಂಡೋಲ 7 ಅಂಕ ಸಂಪಾದಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ ಯೋಧಾ (U.P Yodha’s) ತಂಡವನ್ನು 44-42ರಲ್ಲಿ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi K.C) ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಯೋಧಾ ಪರ ಏಕಾಂಗಿ ಹೋರಾಟ ನಡೆಸಿದ ರೇಡರ್ ಸುರೇಂದರ್ ಗಿಲ್ 21 ಅಂಕ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.ಪ್ರೊ ಕಬಡ್ಡಿ ಲೀಗ್’ನಲ್ಲಿ ಗುರುವಾರ ವಿರಾಮದ ದಿನವಾಗಿದ್ದು ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ : Badminton Player PV Sindhu : ಸೀರೆಯುಟ್ಟು ರೀಲ್ಸ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು

ಇದನ್ನೂ ಓದಿ : Bulls Beat Paltan : ಪುಣೇರಿ ಪಲ್ಟನ್ ವಿರುದ್ಧ ಸೋಲಿನಿಂದ ಬೆಂಗಳೂರು ಬುಲ್ಸ್ ಗ್ರೇಟ್ ಎಸ್ಕೇಪ್

ಇದನ್ನೂ ಓದಿ : Sourav Ganguly snubs by BCCI : ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದ ಗಂಗೂಲಿಗೆ “ಶಾ” ಶಾಕ್!

ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು:

  1. ತಮಿಳ್ ತಲೈವಾಸ್ Vs ಯು ಮುಂಬಾ (ರಾತ್ರಿ 7.30ಕ್ಕೆ)
  2. ಹರ್ಯಾಣ ಸ್ಟೀಲರ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್ (
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ+ಹಾಟ್ ಸ್ಟಾರ್
    ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
    ರಾತ್ರಿ 8.30ಕ್ಕೆ)
  3. ಗುಜರಾತ್ ಜೈಂಟ್ಸ್ Vs ಪುಣೇರಿ ಪಲ್ಟನ್ (ರಾತ್ರಿ 9.30ಕ್ಕೆ)
    ಸ್ಥಳ: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು

Bengal Warriors vs Bengaluru Bulls : First defeat for Bengaluru Bulls, Red Bulls lost at home

Comments are closed.