Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ : ಭಾರತದಲ್ಲಿ ಬಳಸುವ ಪ್ರಮುಖ ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಕ್ಯಾನ್ಸರ್ ವಿರೋಧಿ ಔಷಧಿಗಳು, ಮಧುಮೇಹ ವಿರೋಧಿ, ವೈರಲ್, ಬ್ಯಾಕ್ಟೀರಿಯಾ ವಿರೋಧಿ ಔಷಧಗಳು, ಆಂಟಿರೆಟ್ರೋವೈರಲ್ ಔಷಧಿಗಳು, ಟಿಬಿ ವಿರೋಧಿ ಔಷಧಗಳು, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿಯಲ್ಲಿರುವ ಸುಮಾರು 39 ಔಷಧಿಗಳ ಬೆಲೆಯನ್ನು ಸರ್ಕಾರ ಕಡಿತಗೊಳಿಸಿದೆ.

ಬೆಲೆ ನಿಯಂತ್ರಣಕ್ಕೆ ಒಳಪಡುವ ಸಾಮಾನ್ಯವಾಗಿ ಬಳಸುವ ಔಷಧಿಗಳಲ್ಲಿ ಟೆನೆಲಿಗ್ಲಿಪ್ಟಿನ್-ಆಂಟಿ ಡಯಾಬಿಟಿಸ್ ಔಷಧ, ಜನಪ್ರಿಯ ಟಿಬಿ ಔಷಧ ಗಳಾದ ಬೆಡಕ್ವಿಲಿನ್ ಮತ್ತು ಡೆಲಾಮನಿಡ್, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಐವರ್ಮೆಕ್ಟಿನ್, ರೋಟವೈರಸ್ ಲಸಿಕೆಗಳು ಸಹ ಸೇರಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್ಸುಖ್ ಮಾಂಡವೀಯಾ ಪರಿಷ್ಕೃತ ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್‌ ಕೊಟ್ಟ ಗ್ಯಾಸ್‌ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ

ಈಗ ಬಳಸುತ್ತಿರುವ ಔಷಧಿಗಳ ಪೈಕಿ ಕೆಲವು ಔಷಧಿಗಳನ್ನು ನಿಲ್ಲಿಸಲಾಗಿದೆ, ಅದರ ಬದಲಿಗೆ ಹೊಸ ಚಿಕಿತ್ಸೆ ಮತ್ತು ಉತ್ತಮ ಪರ್ಯಾಯಗಳನ್ನು ಪರಿಚಯಿಸಲಾಗಿದೆ. ಆದ್ದರಿಂದ ಅವುಗಳನ್ನು ಅಳಿಸುವುದು ಮುಖ್ಯವಾಗಿತ್ತು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗೆ ಅಳಿಸಲಾದ ಔಷಧಿಗಳ ಪಟ್ಟಿಯಲ್ಲಿ ಬ್ಲೀಚಿಂಗ್ ಪೌಡರ್, ಎರಿಥ್ರೊಮೈಸಿನ್, ಆಂಟಿರೆಟ್ರೋವೈರಲ್-ಸ್ಟಾವುಡಿನ್+ಲಮಿವುಡಿನ್, ಇತರೆ ಔಷಧಿಗಳು ಸೇರಿವೆ.

ಕೇಂದ್ರ ಸರ್ಕಾರವು ದೇಶದಲ್ಲಿ ಬಳಸುವ ಸಾಮಾನ್ಯ ಔಷಧಿಗಳ ಪಟ್ಟಿಯನ್ನು ಒಳಗೊಂಡಿರುವ ಒಂದು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (NLEM)ಯನ್ನು ಸಿದ್ಧಪಡಿಸಲು ಪ್ರಾರಂಭಿಸಿತು. ಕಳೆದ 2015ರಲ್ಲಿ ಈ ಪಟ್ಟಿ ಬಗ್ಗೆ ಸೂಚಿಸಲಾಗಿದ್ದು, ಪರಿಷ್ಕರಿಸಿದ ಔಷಧೀಯ ಪಟ್ಟಿಯನ್ನು 2016 ರಲ್ಲಿ ಜಾರಿಗೆ ತರಲಾಯಿತು.

ಇದನ್ನೂ ಓದಿ: Afghanistan Crisis : ಅಪ್ಘಾನ್‌‌ ಸಂಘರ್ಷದಿಂದ ದುಬಾರಿಯಾಯ್ತು Dry Fruits ಬೆಲೆ : ಎಷ್ಟಿದೆ ಗೊತ್ತಾ ಬೆಲೆ

ಇದು ಅಸ್ತಿತ್ವದಲ್ಲಿರುವ ಪದ್ಧತಿಗಿಂತ ಹೊರತಾಗಿದೆ. ಇಲ್ಲಿ ಎಲ್ಲಾ ಅಗತ್ಯ ಔಷಧಗಳು ಅವುಗಳ ಬೆಲೆಯನ್ನು ಮಿತಿಗೊಳಿಸುವುದಿಲ್ಲ. ರಾಷ್ಟ್ರೀಯ ಔಷಧಿಗಳ ಸ್ಥಾಯಿ ಸಮಿತಿಯು, ಯಾವ ಔಷಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಮತ್ತು ಖಚಿತ ಪ್ರಮಾಣದಲ್ಲಿ ಲಭ್ಯವಿರಬೇಕು ಎಂಬುದರ ಬಗ್ಗೆ ಶಾರ್ಟ್ ಲಿಸ್ಟ್ ಸಿದ್ಧಪಡಿಸುವ ಕೆಲಸ ಮಾಡುತ್ತದೆ.

(The central government has cut the prices of 39 medicines, including BP, Sugar and Cancer)

Comments are closed.