Mukesh Ambani:ಕೋಟ್ಯಾಧಿಪತಿ ಮುಕೇಶ್​ ಅಂಬಾನಿ ಭದ್ರತೆ ಝೆಡ್​ ಪ್ಲಸ್​ ದರ್ಜೆಗೆ ಏರಿಕೆ

Mukesh Ambanis security : ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮುಕೇಶ್​ ಅಂಬಾನಿ ಭದ್ರತೆಯನ್ನು ಝೆಡ್​​ ಪ್ಲಸ್​ ವರ್ಗಕ್ಕೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಮಾಹಿತಿಯನ್ನು ನೀಡಿದೆ.ಮುಕೇಶ್​ ಅಂಬಾನಿಗೆ ಈ ಹಿಂದೆ ಝೆಡ್​ ವರ್ಗದ ಭದ್ರತೆಯನ್ನು ನೀಡಲಾಗಿತ್ತು. ಇದರಲ್ಲಿ ಪೈಲಟ್​​ ಹಾಗೂ ಫಾಲೋ ಅಪ್​ ವಾಹನಗಳು ಸಶಸ್ತ್ರ ಕಮಾಂಡೋಗಳನ್ನು ಒಳಗೊಂಡಿರುತ್ತದೆ, ಮುಕೇಶ್​ ಅಂಬಾನಿ ಮುಂಬೈ ಅಥವಾ ಯಾವುದೇ ಭಾಗಕ್ಕೆ ತೆರಳಿದಾಗ ಅವರಿಗೆ ಭದ್ರತೆಯನ್ನು ಒದಗಿಸಲಾಗುತ್ತದೆ.

ಈ ವರ್ಷದ ಆಗಸ್ಟ್​ ತಿಂಗಳಲ್ಲಿ ಮುಂಬೈನ ಬೊರಿವಲಿ ಪಶ್ಚಿಮ ಪ್ರದೇಶದಲ್ಲಿ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈನಲ್ಲಿ ಬಂಧಿಸಿದ್ದರು. ಕೋಟ್ಯಾಧಿಪತಿ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ರಿಲಯನ್ಸ್​ ಫೌಂಡೇಶನ್​​ ಪೊಲೀಸರಿಗೆ ದೂರು ನೀಡಿತ್ತು.

ಕಳೆದ ವರ್ಷ ಮುಕೇಶ್​ ಅಂಬಾನಿ ನಿವಾಸ ಆಂಟಿಲಿಯಾ ಬಳಿ ಸ್ಫೋಟಕಗಳನ್ನು ಹೊಂದಿರುವ ಎಸ್​ಯುವಿಯನ್ನು ನಿಲ್ಲಿಸಿದ ನಂತರ ಮುಕೇಶ್​ ಅಂಬಾನಿ ಅವರಿಗೆ ಜೀವ ಬೆದರಿಕೆ ಇರುವ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವರ್ಷದ ಜುಲೈ ತಿಂಗಳಲ್ಲಿ ಮುಕೇಶ್​ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಪಿಐಎಲ್​ನಲ್ಲಿ ತ್ರಿಪುರ ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿ ಸರ್ಕಾರಕ್ಕೆ ಪ್ರತಿಕ್ರಿಯೆಗಾಗಿ ಸುಪ್ರೀಂಕೋರ್ಟ್​ನಿಂದ ಆದೇಶ ಬಂದಿದೆ.

ಮುಂಬೈನಲ್ಲಿ ವಾಸವಿರುವ ಕೈಗಾರಿಕೋದ್ಯಮಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತಾ ರಕ್ಷಣೆ ನೀಡುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲಿನ ಹೈಕೋರ್ಟ್​ನ ಆದೇಶಗಳಿಗೆ ಸುಪ್ರೀಂ ಕೋರ್ಟ್​ನ ರಜಾಕಾಲದ ಪೀಠ ತಡೆ ನೀಡಿತ್ತು.

ಇದನ್ನೂ ಓದಿ : ಶೋಭಾ ಕರಂದ್ಲಾಜೆ ಇನ್ಮುಂದೇ ಶೋಭಾ ಗೌಡ : ಹೆಸರು ಬದಲಾವಣೆ ಹಿಂದಿದೆ ಬಾರೀ ಲೆಕ್ಕಾಚಾರ

ಇದನ್ನು ಓದಿ : KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

ಇದನ್ನೂ ಓದಿ : Rohit Sharma breaks MS Dhoni record : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

Mukesh Ambanis security upgraded to Z+ category: Report

Comments are closed.