Supreme Court :ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ವಿವಾಹಿತ ಮಹಿಳೆಯರಂತೆ ಅವಿವಾಹಿತ ಮಹಿಳೆಯರೂ ಅರ್ಹರು : ಸುಪ್ರೀಂ

ದೆಹಲಿ : Supreme Court : ಗರ್ಭಿಣಿಯರ ಗರ್ಭಪಾತದ ಕುರಿತಂತೆ ಸುಪ್ರಿಂ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ ಅವಿವಾಹಿತ ಹಾಗೂ ವಿವಾಹಿತ ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರು ಸುರಕ್ಷಿತ ಹಾಗೂ ಕಾನೂನುಬದ್ಧ ಗರ್ಭಪಾತ ಮಾಡಿಸಿಕೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪನ್ನು ನೀಡಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಈ ಅರ್ಜಿಯನ್ನು ಆಲಿಸಿ ಈ ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ. 51 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತ ಕಾನೂನಿನ ಪ್ರಕಾರ 24 ವಾರಗಳ ಗರ್ಭಿಣಿಯರು ಗರ್ಭಪಾತವನ್ನು ಮಾಡಿಸಿಕೊಳ್ಳಲು ಅನುಮತಿಯನ್ನು ನೀಡುತ್ತದೆ. 1971ರ ಗರ್ಭಪಾತ ಕಾಯ್ದೆ ಹಾಗೂ 2003ರ ಅದರ ನಿಯಮಗಳ ಅಡಿಯಲ್ಲಿ 20ರಿಂದ 24 ವಾರಗಳವರೆಗೆ ಗರ್ಭಿಣಿಯಾಗಿರುವ ಅವಿವಾಹಿತ ಮಹಿಳೆಯರು ನೋಂದಾಯಿತ ವೈದ್ಯರ ನೆರವಿನಿಂದ ಗರ್ಭಪಾತ ಮಾಡಿಸಿಕೊಳ್ಳುವುದನ್ನೂ ನಿರ್ಬಂಧಿಸಿತ್ತು.

ವಿವಾಹಿತ ಮಹಿಳೆಯ ಜೊತೆಯಲ್ಲಿ ಅತ್ಯಾಚಾರ ಸಂತ್ರಸ್ತೆಹಾಗೂ ದುರ್ಬಲ ಮಹಿಳೆ ಮತ್ತು ಅಪ್ರಾಪ್ತರು ಸೇರಿದಂತೆ ಆಯ್ದ ವರ್ಗಗಳಿಗೆ ಮಾತ್ರ 24 ವಾರಗಳ ಒಳಗಾಗಿ ಗರ್ಭಪಾತ ಮಾಡಿಸಿಕೊಳ್ಳಲು ದೇಶದ ಕಾನೂನು ಅನುಮತಿ ನೀಡುತ್ತದೆ. ಆದರೆ ವಿಧವೆಯವರು ಮತ್ತು ಅವಿವಾಹಿತ ಮಹಿಳೆಯರು 20 ವಾರಗಳ ಒಳಗಾಗಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ಈ ತಾರತಮ್ಯವನ್ನು ತೆಗೆದು ಹಾಕಿದ ನ್ಯಾ.ಚಂದ್ರಚೂಡ್​ ನೇತೃತ್ವದ ನ್ಯಾಯಪೀಠ ಗರ್ಭಧಾರಣೆಯ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕು ದೇಶದ ಪ್ರತಿಯೊಂದು ವರ್ಗಕ್ಕೆ ಸೇರಿದ ಮಹಿಳೆಗೆ ಇದೆ ಎಂದು ಮಹತ್ವದ ಆದೇಶ ನೀಡಿದೆ.

ಇದನ್ನು ಓದಿ : Jasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ

ಇದನ್ನೂ ಓದಿ : KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

ಇದನ್ನೂ ಓದಿ : ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ : ಪಿಐಎಲ್ ಹೈಕೋರ್ಟ್‍ನಲ್ಲಿ ವಜಾ

All women, married or unmarried, entitled to safe and legal abortion till 24 weeks of pregnancy, rules Supreme Court

Comments are closed.