Pineapple Benefits : ಪೂರ್ತಿ ದೇಹಕ್ಕೆ ಶಕ್ತಿ ಸಂಚಯ ಮಾಡುವ ‘ಅನಾನಸ್‌’

ಅನಾನಸ್‌ (Pineapple) ಮೂಲತಃ ದಕ್ಷಿಣ ಅಮೆರಿಕಾದ ಹಣ್ಣು (Fruit). ಪೈನ್ ಕೋನ್ ಅನ್ನು ಹೋಲುವುದರಿಂದ ಈ ಹೆಸರು ಬಂದಿದೆ. ಇದನ್ನು ಅನಾನಾಸ್ ಕೊಮೊಸಸ್ ಎಂದೂ ಕರೆಯುತ್ತಾರೆ. ಹಳದಿ ಬಣ್ಣದ ಈ ಹಣ್ಣು, ಆಂಟಿಒಕ್ಸಿಡೆಂಟ್‌, ಪೋಷಕಾಂಶಗಳು ಮತ್ತು ಇತರ ಸಹಾಯಕ ಸಂಯುಕ್ತಗಳಿಂದ ಸಮೃದ್ಧವಾಗಿದೆ (Pineapple Benefits ). ಅನಾನಸ್‌ ಅನ್ನು ನಿಮ್ಮ ಹಣ್ಣುಗಳ ಸೇವನೆ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಇಲ್ಲವೇ, ಅನಾನಸ್‌ ನಿಂದ ವಿವಿಧ ರೀತಿಯ ಅಡುಗೆಗಳನ್ನು ಮಾಡಿ ಸೇವಿಸಬಹುದು.

ಅಗಾಧ ಪೋಷಕಾಂಶ ಹೊಂದಿರುವ ಅನಾನಸ್‌ನ ಆರೋಗ್ಯ ಪ್ರಯೋಜನಗಳು :

ಮೂಳೆಗಳಿಗೆ ಉತ್ತಮವಾದ ಮ್ಯಾಂಗನೀಸ್‌ ಹೇರಳವಾಗಿದೆ :
ನಿಮ್ಮ ‌ಮೂಳೆಗಳು ದುರ್ಬಲ‌ವಾಗಿದ್ದರೆ, ಅನಾನಸ್ ಅನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅನಾನಸ್‌ನಲ್ಲಿ ಮ್ಯಾಂಗನೀಸ್ ಅಧಿಕವಾಗಿದ್ದು, ಅದು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಒಟ್ಟಾರೆ ಇದು ಮೂಳೆ ಆರೋಗ್ಯವನ್ನು ಬೆಂಬಲಿಸುತ್ತದೆ. ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ. ಅನಾನಸ್ ಮೂಳೆಗಳಲ್ಲಿ ಉತ್ತಮ ಖನಿಜ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ನೆರವಾಗಿ, ಅತಿಸಾರವನ್ನು ಕಡಿಮೆ ಮಾಡುತ್ತದೆ:
ಅನಾನಸ್‌ಗಳು ಬ್ರೋಮೆಲಿನ್‌ನಿಂದ ಸಮೃದ್ಧವಾಗಿದೆ. ಬ್ರೋಮೆಲಿನ್‌ ಇದು ಕಿಣ್ವಗಳ ಮಿಶ್ರಣ. ಅಧ್ಯಯನಗಳ ಪ್ರಕಾರ, ಈ ಗುಂಪಿನ ಕಿಣ್ವಗಳು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಅನಾನಸ್ ಅನ್ನು ಅನೇಕ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಬಯೋಟೆಕ್ನಾಲಜಿ ರಿಸರ್ಚ್ ಇಂಟರ್‌ನ್ಯಾಶನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬ್ರೋಮೆಲೈನ್ ಅತಿಸಾರಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಮತ್ತು ಇದು ಅತಿಸಾರದ ರೋಗಲಕ್ಷಣಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ರೋಗಗಳ ವಿರುದ್ಧ ಹೋರಾಡುವ ಆಂಟಿಒಕ್ಸಿಡೆಂಟ್‌ ಅಧಿಕವಾಗಿದೆ :
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವುದರ ಜೊತೆಗೆ, ಅನಾನಸ್ ನಲ್ಲಿ ಆಂಟಿಒಕ್ಸಿಡೆಂಟ್‌ ಹೇರಳವಾಗಿದೆ.
ಮಧುಮೇಹ, ಕೆಲವು ರೀತಿಯ ಕ್ಯಾನ್ಸರ್‌ಗಳು, ಹೃದ್ರೋಗಗಳು, ದೀರ್ಘಕಾಲದ ಉರಿಯೂತ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡಲು ಅಗತ್ಯವಾದ ಫ್ಲೇವನಾಯ್ಡ್‌ಗಳು ಮತ್ತು ಫಿನಾಲಿಕ್ ಸಂಯುಕ್ತಗಳ ಹೆಸರಿನ ಆಂಟಿಒಕ್ಸಿಡೆಂಟ್‌ ಅಧಿಕವಾಗಿದೆ. ಅನಾನಸ್‌ನಲ್ಲಿರುವ ಅನೇಕ ಆಂಟಿಒಕ್ಸಿಡೆಂಟ್‌ಗಳು ದೇಹದ ಮೇಲೆ ದೀರ್ಘಕಾಲೀನ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿವೆ:
ಕಡಿಮೆ ಕ್ಯಾಲೋರಿ ಹೊಂದಿರುವ ಅನಾನಸ್ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಿಂದ ಮಾತ್ರ ನೀವು ಫೈಬರ್, ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಮ್ಯಾಂಗನೀಸ್, ಸತು ಮತ್ತು ತಾಮ್ರ ಹೀಗೆ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ ಈ ಹಳದಿ ರಸಭರಿತವಾದ ಹಣ್ಣುಗಳು ವಿಟಮಿನ್ ಎ, ಬಿ 6, ಸಿ ಮತ್ತು ಕೆ, ಪೊಟ್ಯಾಸಿಯಮ್ ಮತ್ತು ರಂಜಕಗಳಿಂದ ಸಮೃದ್ಧವಾಗಿದೆ.
ಅನಾನಸ್‌ನಲ್ಲಿ ರಿಬೋಫ್ಲಾವಿನ್, ಫೋಲೇಟ್, ನಿಯಾಸಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲಿಗೆ ಉತ್ತಮ :
ಅನಾನಸ್, ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ, ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಉತ್ತಮವಾಗಿದೆ. ಇದರಲ್ಲಿರುವ ಆಂಟಿಒಕ್ಸಿಡೆಂಟ್‌ ಮತ್ತು ವಿಟಮಿನ್ ಸಿ ಮೊಡವೆ, ಮೊಡವೆಗಳು, ಚರ್ಮದ ದದ್ದುಗಳು ಮತ್ತು ಚರ್ಮದ ಟೋನ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಆಂಟಿ–ಏಜಿಂಗ್‌ ಗುಣಗಳನ್ನು ಹೊಂದಿದೆ. ಇದು ಚರ್ಮದ ಮೆಲಿನ ಕಾಯಿಲೆಯಾದ ಸೋರಿಯಾಸಿಸ್‌ ಅನ್ನು ತಡೆಯುತ್ತದೆ. ನಯವಾದ, ದಪ್ಪ, ಹೊಳೆಯುವ ಮತ್ತು ಬಲವಾದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ : Fruits For Digestion : ಜೀರ್ಣ ಶಕ್ತಿ ಹೆಚ್ಚಿಸುವ 5 ಅದ್ಭುತ ಹಣ್ಣುಗಳು

ಇದನ್ನೂ ಓದಿ : Banana Benefits : ಬಾಳೆಕಾಯಿ ತಿನ್ನಿ, ಕ್ಯಾನ್ಸರ್‌ನಿಂದ ದೂರವಿರಿ; ರಿಸರ್ಚ್‌ನಿಂದ ಬಯಲಾಯ್ತು ಈ ಸೀಕ್ರೆಟ್‌

(Pineapple Benefits do you know how this fruit helps our body)

Comments are closed.