Twosday 2022: 22-2-2022 ಈ ದಿನದ ವಿಶೇಷತೆಯೇನು? ಇಂತಹುದೇ ವಿಶೇಷ ದಿನ ಮುಂದೆ ಬರುವುದು ಎಂದು?

ಇಂದು, 22 ಫೆಬ್ರವರಿ, 2022. ಇಂದಿನ ದಿನಾಂಕದ ಸಂಖ್ಯೆಗಳಲ್ಲಿ ಎಲ್ಲ ಸಂಖ್ಯೆಗಳೂ 2 ಆಗಿರುವುದು ಬಹಲ ವಿಶೇಷವೆನಿಸಿದೆ. 22-2-22 ಹೀಗೆ ಒಂದೇ ಸಂಖ್ಯೆ ಸಾಲಾಗಿ ಬರುವುದು ಬಹುಶಃ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವಾಗಿರಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ದಿನಾಂಕವನ್ನು ಸಮ್ಮಿತೀಯ ಅಥವಾ ಪಾಲಿಂಡ್ರೋಮ್ ಎಂದು ಕರೆಯಲಾಗುತ್ತದೆ ಏಕೆಂದರೆ ಸಂಖ್ಯೆಗಳನ್ನು ಹಿಂದಿನಿಂದ ಮತ್ತು ಮುಂದನಿಂದ ಓದಿದರೂ  ಒಂದೇ ರೀತಿ ಇರುತ್ತವೆ. 22/2/22 ಮಂಗಳವಾವೇ ಆಗಿರುವುದರಿಂದ, ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು  ಟುಸ್ಡೇ ಎಂದು (Twosday 2022) ಡಬ್ ಮಾಡಿದ್ದಾರೆ.

ಯಾವುದೇ ಐತಿಹಾಸಿಕ ಪ್ರಾಮುಖ್ಯತೆ ಇಲ್ಲದಿದ್ದರೂ,  2 ರಿಂದಲೇ ತುಂಬಿರುವುದರಿಂದ ಈ ವಿಶೇಷ ದಿನಾಂಕವು 200 ವರ್ಷಗಳ ನಂತರ ಮತ್ತೆ ಬರಲಿದೆ ಎಂಬುದು ಸತ್ಯ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, “ಸಂಖ್ಯೆ 2 ಎರಡು ಜನರ ಅಥವಾ ಎರಡು ವಿಚಾರಗಳ ಒಕ್ಕೂಟವನ್ನು ಸೂಚಿಸುತ್ತದೆ ಮತ್ತು ಸಹಯೋಗ ಮತ್ತು ಸಮುದಾಯದ ಬಗ್ಗೆ ಒಂದು ದಿನವಾಗಿದೆ. ಹೀಗಾಗಿ ಈ ದಿನದ ಬಗ್ಗೆ ಅತ್ಯಂತ ಕುತೂಹಲ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

ಕೊನೆಯ ಬಾರಿಗೆ ಪಾಲಿಂಡ್ರೋಮ್ ದಿನಾಂಕವು 11 ಜನವರಿ 2011 ರಂದು ಬಂದಿತ್ತು ಅಂದರೆ 11/1/11 ಮತ್ತು ಮುಂದಿನ ಬಾರಿ 3 ಮಾರ್ಚ್ 2033 ರಂದು 11 ವರ್ಷಗಳ ನಂತರ ಮತ್ತೆ ಸಂಭವಿಸುತ್ತದೆ, ಅಂದರೆ 3-3-33 ರಂದು ಮಾತ್ರ ಈ ವಿಶೇಷ ದಿನಾಂಕವು ಬರಲಿದೆ. ಈ ಶತಮಾನದಲ್ಲಿ ಇಂತಹ ವಿಶೇಷವಾದ 11 ದಿನಾಂಕಗಳಿವೆ ಎಂದು ಖ್ಯಾತ ಆಂಗ್ಲ ಸುದ್ದಿತಾಣವೊಂದು ವರದಿ ಮಾಡಿದೆ ವರದಿಯ ಪ್ರಕಾರ ಇಂದಿನ ದಿನಾಂಕವಾದ 2-2-2022 ಇದು ಎಂಟನೆಯ ದಿನಾಂಕವಾಗಿದೆ. ಕೊನೆಯ ಮೂರು 2080 ರ ದಶಕದಲ್ಲಿ ಬರಲಿದೆ ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ: Russia vs Ukraine: ಉಕ್ರೇನ್‌ನ 2 ಪ್ರತ್ಯೇಕವಾದಿ ಪ್ರದೇಶಗಳಿಗೆ ಬೆಂಬಲ ನೀಡಿದ ರಷ್ಯಾ; ಅಷ್ಟಕ್ಕೂ ಅಲ್ಲಿ ಆಗುತ್ತಿರುವುದೇನು?

(Twosday 2022 special date once in a lifetime significance)

Comments are closed.